ಬೆಳಗಾವಿಯಲ್ಲಿ 13ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ

ಬೆಳಗಾವಿಯಲ್ಲಿ 13ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ  13th Annual Conference Inaugurated in Belagavi

ಲೋಕದರ್ಶನ ವರದಿ 

ಬೆಳಗಾವಿ 06 : ಅಸೋಸಿಯೇಷನ್ ಆಫ್ ಓರಲ್ ಆ್ಯಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಸ್‌ ಆಫ್ ಇಂಡಿಯಾ   ಕರ್ನಾಟಕ ಘಟಕದ 13ನೇ ವಾರ್ಷಿಕ ಸಮ್ಮೇಳನವನ್ನು ಸೆ. 5ರಂದು ಏಐಇ ಸೆಂಟಿನರಿ ಸೆಂಟರ್ನಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಉದ್ಘಾಟಿಸಿದರು.  

ಉತ್ತರ ಕರ್ನಾಟಕದಲ್ಲಿ ಬಾಯಿಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ರೋಗಿಗಳ ಚಿಕಿತ್ಸೆಯಲ್ಲಿ ಓರಲ್ ಆ್ಯಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ. ಪ್ರಭಾಕರ ಕೋರೆ ಹೇಳಿದರು. ಏಐಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿವೆ ಎಂದರು.  

ಡಾ. ವಿಶ್ವನಾಥ ಎಂ. ಪಟ್ಟಣಶೆಟ್ಟಿ, ಡಾ. ಗೀರೀಶ್ ಗೌಡ, ಡಾ. ವೆಂಕಟೇಶ್ ಅಣೆಹೊಸೂರು, ಡಾ. ಆಶಿಷ್ ಗುಪ್ತಾ ಸೇರಿದಂತೆ ಗಣ್ಯರು ಮಾತನಾಡಿದರು. 280ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.