ಕಲಬುರಗಿ,
ಏ.18, ಕೊರೊನಾ ನಿಯಂತ್ರಿಸಲು ಜಾರಿಯಾಗಿದ್ದ ಲಾಕ್ ಡೌನ್ ಉಲ್ಲಂಘಿಸಿ
ರಥೋತ್ಸವ ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಟ್ರಸ್ಟ್ ಕಾರ್ಯದರ್ಶಿ ಗುಂಡಣ್ಣ ಬಾಳಿ ಸೇರಿ
13 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಠಾಣೆ ಪೊಲೀಸರಿಂದ ರಾವೂರು ಗ್ರಾಮದ ಹದಿಮೂರು ಜನರನ್ನು ಬಂಧಿಸಲಾಗಿದೆ.ಇದೇ
16 ರಂದು ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಮಠದ
ರಥೋತ್ಸವವಿತ್ತು. ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮುಂಚೆಯೇ ತಾವುರಥೋತ್ಸವ
ಮಾಡುವುದಿಲ್ಲ ಎಂದು ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ನಂತರ ಪೊಲೀಸರಿಗೆ
ಮಾಹಿತಿ ನೀಡದೇ, ಕಣ್ಣು ತಪ್ಪಿಸಿ ಗ್ರಾಮದ ಸಿದ್ಧಲಿಂಗೇಶ್ವರ ಮಠದ ರಥೋತ್ಸವ
ನೆರವೇರಿಸಿದ್ದರು. ಇನ್ನು, ಸಿದ್ದಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲಿ ನೂರಾರು ಜನ
ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರಾವೂರ ಗ್ರಾಮವನ್ನು ಜಿಲ್ಲಾಡಳಿತ ಸಂಪೂರ್ಣವಾಗಿ
ಕ್ವಾರೆಂಟೈನ್ ಮಾಡಿದೆ.ಅಲ್ಲದೇ, ಇತ್ತೀಚೆಗೆ ರಾವೂರ ಗ್ರಾಮದ ಮೂರು ಕಿ.ಮೀ.
ದೂರದಲ್ಲಿರುವ ವಾಡಿ ಪಟ್ಟಣದ ಮಗುವಿನಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ
ರಾವೂರ ಗ್ರಾಮದ ರಸ್ತೆಗಳನ್ನು ಆರೋಗ್ಯ ಇಲಾಖೆ ಬಂದ್ ಮಾಡಿಸಿ, ನೂರಾರು ಜನ ಒಂದೆಡೆ
ಸೇರಿ ರಥೋತ್ಸವ ನಡೆಸಿದ ಹಿನ್ನೆಲೆ ಗ್ರಾಮಸ್ಥರಿಗೆ ವೈದ್ಯಕೀಯ ಪರೀಕ್ಷೆ
ನಡೆಸುತ್ತಿದೆ.ರಥೋತ್ಸವ ಜರುಗಿಸಿದ ಹಿನ್ನೆಲೆಯಲ್ಲಿ 20 ಜನರ ವಿರುದ್ಧ ಎಫ್ ಐ ಆರ್ ಸೇರಿ
ರಥೋತ್ಸವಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಬೆಂಬಲ ನೀಡಿದ 200 ಜನರ ವಿರುದ್ಧ ಪ್ರಕರಣ
ದಾಖಲಾಗಿದೆ.