ನಿರ್ಮಲ ಭಕ್ತಿ-ಭಾವದಿಂದ ಭಗವಂತನ ಪ್ರಾರ್ಥಿಸಿದರೆ ಜೀವನ ಸಾಕ್ಷಾತ್ಕಾರ
12-day Discourse program
ಲೋಕದರ್ಶನ ವರದಿ
ವಿಜಯಪುರ 08: ವಿಮಲ ಮನಸ್ಸಿದಿಂ ಶುಭ ತೀಥವುಂಟೇ’ ಎನ್ನುವಂತೆ, ನಿರ್ಮಲ ಭಕ್ತಿ-ಭಾವದಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಎಲ್ಲ ಸಂಕಷ್ಟಗಳು ದೂರಾಗಿ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಪ್ರಾಪ್ತವಾಗಿ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ. ಎಲ್ಲದಕ್ಕೂ ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವವನ್ನು ತೊರದು ಈ ಜನ್ಮವು ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವ ನಮ್ಮದಾಗಬೇಕೆಂದು ವಿಜಯಪುರ ಷಣ್ಮುಖಾರೂಢ ಮಠದ ಪರಮ ಪೂಜ್ಯ ಶ್ರೀ ಶಿವಲಿಂಗೇಶ್ವರ ದೇವರು ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ”ಶರಣರ ಜೀವನ ದರ್ಶನ ಮತ್ತು ಆಧ್ಯಾತ್ಮಿಕ ಚಿಂತನೆಗಳು” ವಿಷಯ ಕುರಿತು ಆಯೋಜಿಸಿದ್ದ 12 ದಿನಗಳ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ. ಮೋಹ. ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕು. ಬಸವಣ್ಣನವರ ವಚನದಂತೆ ”ಲೋಕ ನೀವೇಕೆ ತಿದ್ದುವಿರಿ ನಿಮ್ಮ ಮನವ ಸಂತೈಸಿಕೊಳ್ಳಿ, ತನುವ ಸಂತೈಸಿಕೊಳ್ಳಿ ಎಂಬ ವಚನದ ಸಾರ ಸಂದೇಶವನ್ನು ಅರಿತು ನೆಮ್ಮದಿಯುತ ಬದುಕು ಸಾಗಿಸಬೇಕು. ಅಧ್ಯಾತ್ಮಿಕ, ಜೀವನ-ಮೌಲ್ಯ ಮತ್ತು ಬದುಕಿನ ಪಾಠವನ್ನು ತಿಳಿಸುವ ಪ್ರವಚನ, ಕೀರ್ತನೆ ಮತ್ತು ಸತ್ಸಂಗದಲ್ಲಿ ಪಾಲ್ಗೊಂಡು ಶರಣರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಾಪ್ರಸಾದ ಸೇವೆಗೈದ ಅನುಸೂಯಾ ಫತ್ತೇಪೂರಮಠ ಹಾಗೂ ಲಕ್ಷ್ಮೀ ನರಳೆ ಇವರನ್ನು ಸನ್ಮಾನಿಸಲಾಯಿತು.
ಬಸಯ್ಯ ಮಠಪತಿ, ದೇವಸ್ಥಾನ ನಿರ್ದೇಶಕ ಆರ್.ಕೆ. ಉತ್ತರಕರ ಶ್ರೀ ಎಸ್.ಎಲ್.ಇಂಗಳೇಶ್ವರ ಇನ್ನಿತರರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಬಿ.ಡಿ.ಕಡಕೋಳ, ಪ್ರೊ. ಬಸವರಾಜ ಕುಂಬಾರ, ನಿಂಗಪ್ಪ ನಿಂಬಾಳಕರ, ಸಾಬು ಅಗ್ರಾಣಿ, ಡಾ.ರಾಜಕುಮಾರ ಜೊಳ್ಳೆ, ಅರವಿಂದ ಹಂಗರಗಿ, ಸುನೀಲ ಚವ್ಹಾಣ, ರಾಘವೇಂದ್ರ ಓತಿಹಾಳ, ಸುನೀತಾ ಉಮರಾಣಿ, ವೆಂಕಟೇಶ ಹೊಸಮನಿ, ಅಲ್ಲಮಪ್ರಭು ಶಿರಹಟ್ಟಿ, ಶ್ರೀಶೈಲ ಅವಜಿ, ಶೋಭಾ ಚವ್ಹಾಣ, ಮಂಜುಳಾ ನಿಂಬಾಳಕರ, ಶಾಂತಾ ಕಪಾಳಿ, ಜ್ಯೋತಿ ಜೊಳ್ಳೆ, ಸಾವಿತ್ರಿ ಹಿರೇಮಠ, ಇನ್ನಿತರರು ಸಹ ಉಪಸ್ಥಿತರಿದ್ದರು.
ಗಾನ ತರಂಗ ಸಂಗೀತ ಶಾಲೆಯ ಪ್ರಶಿಕ್ಷಣಾರ್ಥಿಗಳಾದ ಸುನೀತಾ ಉಮರಾಣಿ, ಸಾವಿತ್ರಿ ಹಿರೇಮಠ, ಶೋಭಾ ಮಠಪತಿ ಸಂಗಡಿಗರಿಂದ ಪ್ರಾರ್ಥನಾಗೀತೆ ಪ್ರಚುರಪಡಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಗುರುವಸಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಉಮರಾಣಿ ವಂದಿಸಿದರು.
ಈ ಪ್ರವಚನ ಕಾರ್ಯಕ್ರಮದಲ್ಲಿ ನವರಸಪುರದ ವಿವಿಧ ಬಡಾವಣೆಯ ನೂರಾರು ಮಕ್ಕಳು, ಮಹಿಳೆಯರು, ಯುವಕರು ಮತ್ತು ಹಿರಿಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 