ಬಳ್ಳಾರಿ,ಜೂ.29: ನಗರಾಭಿವೃದ್ಧಿ ಇಲಾಖೆ, ಕನರ್ಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ನಗರದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ 12 ವಲಯಗಳನ್ನು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.
ರಾಘವೇಂದ್ರ ಕಾಲೋನಿ, ತಾರಾನಾಥ, ಗೋನಾಳು, ಬಿಸಿಲಳ್ಳಿ, ದೊಡ್ಡಮಾರುಕಟ್ಟೆ, ಸತ್ಯನಾರಾಯಣಪೇಟೆ, ಬಸವೇಶ್ವರನಗರ, ಮಿಲ್ಲರಪೇಟೆ, ರಾಮಯ್ಯ ಕಾಲೋನಿ, ಬಿಸಿಲಹಳ್ಳಿ ಆಶ್ರಯಕಾಲೋನಿ, ವೆಂಕಟರಮಣ ಕಾಲೋನಿ, ವಾಜಪೇಯಿ ಲೇಔಟ್ಗೆ ಇನ್ಮುಂದೆ ನಿರಂತರವಾಗಿ ಕುಡಿಯುವ ನೀರು ಸರಬರಾಜು ಆಗಲಿವೆ.
ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಸಚಿವ ಭೈರತಿ ಬಸವರಾಜು ಅವರು, 12ವಲಯಗಳನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ; ಇನ್ನೂ 15 ವಲಯಗಳನ್ನು ಡಿ.31ಕ್ಕೆ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಬಳ್ಳಾರಿ ನಗರದಲ್ಲಿ ಹಳೆಚರಂಡಿ ವ್ಯವಸ್ಥೆ ಇದ್ದು, ಜಿಲ್ಲಾ ಖನಿಜ ನಿಧಿ ಅಡಿ ಸದ್ಯದ ಜನಸಂಖ್ಯೆಗೆ ಅನುಗುಣವಾಗಿ 221 ಕೋಟಿ ರೂ.ವೆಚ್ಚದ ಒಳಚರಂಡಿ ವ್ಯವಸ್ಥೆ ಜಾರಿಗೆ ಕ್ರಮವಹಿಸಲಾಗುವುದು ಎಂದರು.
ತುಂಗಭದ್ರಾ ಜಲಾಶಯದಿಂದ ನೇರ ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿಪಿಎಆರ್ ಬಂದ ನಂತರ ಯಾವ ಅನುದಾನದಡಿ ಇದನ್ನು ಕೈಗೆತ್ತಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದರು.
ಜಿಲ್ಲಾ ಖನಿಜ ನಿಧಿ ಅಡಿ ಬಳ್ಳಾರಿ ನಗರದ ಅಭಿವೃದ್ಧಿಗೆ 500 ಕೋಟಿ ರೂ. ನೀಡಲಾಗಿದೆ ಅಂತ ತಿಳಿದುಬಂದಿದ್ದು, ಯಾವ್ಯಾವ ಅಭಿವೃದ್ಧಿ ಚಟುವಟಿಕೆಗಳನ್ನು ಇದರಡಿ ಕೈಗೊಳ್ಳಬಹುದು ಎಂಬುದನ್ನು ಚಚರ್ಿಸಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, 2008ರಲ್ಲಿಯೇ ನಿರಂತರ ಕುಡಿಯುವ ನೀರು ಸರಬರಾಜಿನ ಕನಸು ಕಂಡಿದ್ದೆ;ಈಗ ನನಸಾಗ್ತಾ ಇರುವುದು ಸಂತೋಷ ತಂದಿದೆ. ಇನ್ನೂಳಿದ ವಲಯಗಳಿಗೂ ಶೀಘ್ರವಾಗಿ ಒದಗಿಸಲು ತಿಳಿಸಿರುವುದು ಸಂತೋಷ ತಂದಿದೆ ಎಂದರು.
ಬಳ್ಳಾರಿ ನಗರದ ಒಳಚರಂಡಿ ವ್ಯವಸ್ಥೆಯ ಅಂದಾಜುಪಟ್ಟಿಯನ್ನು ಸಲ್ಲಿಸಲಾಗಿದ್ದು,ಅವರು ಮಾಡುವುದಾಗಿ ಒಪ್ಪಿಕೊಂಡಿದ್ದು ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಮುಖ್ಯ ಎಂಜನಿಯರ್ ಮತ್ತು ಕಾರ್ಯವ್ಯವಸ್ಥಾಪಕ ಕ್ಯಾ.ಆರ್.ಆರ್.ದೊಡ್ಡಿಹಾಳ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರಮೇಶ ಮತ್ತಿತರರು ಇದ್ದರು.