ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ
119th birth anniversary of Babu Jagjivan Ram, the pioneer of the Green Revolution
ಲೋಕದರ್ಶನ ವರದಿ
ಜಮಖಂಡಿ 08 : ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆದರೆ ಅದು ಶ್ರೀಮಂತಿಕೆಯ ಹಿನ್ನೆಲೆಯಿಂದ ಅಲ್ಲ, ಕಠಿಣ ಪರಿಶ್ರಮ ಹಾಗೂ ಸಂಕಷ್ಟಗಳನ್ನು ಮೀರಿ ಸಾಧನೆ ಮಾಡುವುದರಿಂದ ಎಂಬುದನ್ನು ಜಗಜೀವನ್ ರಾಮ್ ಅವರ ಜೀವನ ಸಾರಿ ಹೇಳುತ್ತದೆ ಎಂದು ತಹಶೀಲ್ದಾರ ಅನೀಲ ಬಡಗೇರ ಹೇಳಿದರು.
ನಗರದ ತಹಶಿಲ್ದಾರ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ ಕಡುಬಡತನದಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಭದ್ರತೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲೇ ನಮ್ಮ ಅಭಿವೃದ್ಧಿ ಅಡಗಿದೆ ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಮುಖಂಡ ಪರಶುರಾಮ ಮಾದರ ಮಾತನಾಡಿ, ಜಗಜೀವನ್ ರಾಮ್ ಅವರು ಅಸ್ಪೃಶ್ಯತೆಯ ವಿರುದ್ಧ ಬಾಲ್ಯದಲ್ಲಿಯೇ ಹೋರಾಟ ಆರಂಭಿಸಿ, ಜೀವನಪೂರ್ಣವಾಗಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು ಎಂದು ವಿವರಿಸಿದರು. ಹಲವು ಸಚಿವ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ, ದೇಶದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
ಸಂಜು ಐಹೊಳೆ ಮಾತನಾಡಿ, 1971ರ ಯುದ್ಧ ಸಮಯದಲ್ಲಿ ಹಾಗೂ ಕೃಷಿಕ್ಷೇತ್ರದಲ್ಲಿ ಜಗಜೀವನ್ ರಾಮ್ ಅವರ ಕೊಡುಗೆ ಅಪಾರವಾಗಿದೆ. ಅವರು ಕೇವಲ ಒಂದು ವರ್ಗಕ್ಕೆ ಸೀಮಿತರಾಗದೆ, ಇಡೀ ದೇಶದ ಪ್ರಗತಿಗೆ ಶ್ರಮಿಸಿದ ಮಹಾನ್ ನಾಯಕರು ಎಂದು ಕೊಂಡಾಡಿದರು.
ಸುರೇಶ ನಡವಿನಮನಿ, ವಿಲಾಸ ನಡವಿನಮನಿ, ಗಂಗಾಧರ ಮರದಾನಿ, ಅಪ್ಪಾಸಾಹೇಬ ಮನಗೂಳಿ, ರವಿ ಬಬಲೇಶ್ವರ, ಮಹೇಶ ಘಾಟಗೆ, ರಾಜು ಲೋಖಂಡೆ, ಬಸವರಾಜ ಘಾಟಗೆ, ಪ್ರೇಮ ಬಳೋಲಗಿಡದ, ರಮೇಶ ಬಳೋಲಗಿಡದ, ಸುನೀಲ ಘಾಟಗೆ, ಸುನೀಲ ಜೋಗದಂಡೆ, ರಾಜು ತೆಳಗಿಹಾಳ, ನಗರಸಭೆ ಪೌರಾಯುಕ್ತ ಜ್ಯೋತಿಗೀರೀಶ, ತಾಲೂಕಾ ವೈದ್ಯಾಧಿಕಾರಿ ಗೈಬುಸಾಬ ಗಲಗಲಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಜಗದೇವ ಪಾಸೋಡೆ, ಎ.ಡಿ.ಎಲ್. ಆರ್ ರವಿಕುಮಾರ ಹಾದಿಮನಿ, ಯಲ್ಲಪ್ಪ ಬಿದರಿ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 