ಹಾನಗಲ್ನಲ್ಲಿ 11 ಹೊಸ ಕಂದಾಯ ಗ್ರಾಮ, 140 ಉಪಗ್ರಾಮ ರಚನೆ
11 new revenue villages, 140 sub-villages formed in Hanagal
ಲೋಕದರ್ಶನ ವರದಿ
ಹಾನಗಲ್ : ತಾಲೂಕಿನಲ್ಲಿ 11 ಹೊಸ ಕಂದಾಯ ಗ್ರಾಮ, 140 ಉಪ ಗ್ರಾಮಗಳನ್ನು ರಚಿಸುವ ಮೂಲಕ ದಾಖಲೆ ರಹಿತವಾಗಿ ಸರಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಮಾಲಿಕತ್ವ ನೀಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಕೃಷ್ಣ ಭೈರೇಗೌಡ ನಗರ ಮತ್ತು ಸಿದ್ದರಾಮೇಶ್ವರ ಕಾಲೋನಿ ನೂತನ ಉಪ ಗ್ರಾಮಗಳನ್ನು ಉದ್ಘಾಟಿಸಿದ ಅವರು ಸ್ವಾತಂತ್ರ್ಯ ಲಭಿಸಿ ಹಲವು ದಶಕಗಳು ಉರುಳಿದರೂ ಅನೇಕ ಗ್ರಾಮಗಳಿಗೆ ಮಾನ್ಯತೆ ಸಹ ಇರಲಿಲ್ಲ.
ರಾಜ್ಯದಲ್ಲಿ ಅನೇಕ ತಾಂಡಾ, ಗೊಲ್ಲರಹಟ್ಟಿ, ಹಾಡಿ, ದೊಡ್ಡಿ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳಿಗೆ ಪ್ರತ್ಯೇಕ ಕಂದಾಯ ದಾಖಲೆಗಳು ಮತ್ತು ಕಂದಾಯ ಸಂಖ್ಯೆ ಇರಲಿಲ್ಲ. ಹಾಗಾಗಿ ಅಲ್ಲಿನ ನಿವಾಸಿಗಳು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿತ್ತು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರುವ ಮೂಲಕ ಮನೆ ಮಾತಾಗಿರುವ ಕೃಷ್ಣ ಭೈರೇಗೌಡ ಅವರು ಇಲಾಖೆಯ ಸಾರಥ್ಯ ವಹಿಸಿದ ನಂತರ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿದ್ದು, ಲಕ್ಷಾಂತರ ಕುಟುಂಬಗಳಿಗೆ ಮಾಲಿಕತ್ವದ ಹಕ್ಕುಪತ್ರ ಸಹ ಒದಗಿಸಿದ್ದಾರೆ. ಹಾನಗಲ್ ತಾಲೂಕಿನಲ್ಲಿಯೇ ಒಟ್ಟು 151 ಜನವಸತಿ ಪ್ರದೇಶಗಳು ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳಾಗಿ ಅಧಿಕೃತ ಸರಕಾರದ ಮಾನ್ಯತೆ ಪಡೆಯುವಂತಾಗಿದೆ ಎಂದರು.
ತಹಶೀಲ್ದಾರ್ ರೇಣುಕಾ ಎಸ್.ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳದ ನಿರ್ದೇಶಕ ಚಂದ್ರ್ಪ ಜಾಲಗಾರ,ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ,ಬಸನಗೌಡ ಪಾಟೀಲ,ಹನುಮಂತಪ್ಪ ಮರಗಡಿ,ಈರ್ಪ ಬೈಲವಾಳ,ಫಯಾಜ್ ಲೋಹಾರ,ರಾಮಣ್ಣ ಬುಡ್ಡನವರ,ವಿರುಪಾಕ್ಷಪ್ಪ ದಾಳೇರ,ಮಂಜಪ್ಪ ಮಲಗುಂದ,ಕರಬಸನಗೌಡ ಪಾಟೀಲ,ಪ್ರಕಾಶ ಕೂಸನೂರ,ಶಾರುಖ್ ಗಡದ, ಎಸ್.ಎಂ.ಹಿರೇಮಠ,ಜಯಣ್ಣ ದ್ಯಾವಣ್ಣನವರ ಸೇರಿದಂತೆ ಅನೇಕರಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 