108 ಸೂರ್ಯ ನಮಸ್ಕಾರ ಅಭಿಯಾನ 300ಕ್ಕೂ ಅಧಿಕ ಸೂರ್ಯನಮಸ್ಕಾರಗಳ ಅದ್ಭುತ ಸಾಧನೆ ಮಾಡಿದ ಜೋಶಿ ಕುಟುಂಬ

108 ಸೂರ್ಯ ನಮಸ್ಕಾರ ಅಭಿಯಾನ  300ಕ್ಕೂ ಅಧಿಕ ಸೂರ್ಯನಮಸ್ಕಾರಗಳ ಅದ್ಭುತ ಸಾಧನೆ ಮಾಡಿದ ಜೋಶಿ ಕುಟುಂಬ 108 Surya Namaskar Campaign: Joshi family achieves amazing feat of more than 300 Surya Namaskars

108 ಸೂರ್ಯ ನಮಸ್ಕಾರ ಅಭಿಯಾನ  300ಕ್ಕೂ ಅಧಿಕ ಸೂರ್ಯನಮಸ್ಕಾರಗಳ ಅದ್ಭುತ ಸಾಧನೆ ಮಾಡಿದ ಜೋಶಿ ಕುಟುಂಬ 

ಬೆಳಗಾವಿ 25: ರವಿವಾರ ದಿ. 22ಂದು ಬೆಳಗಾವಿಯ ಮರಾಠ ಮಂದಿರದಲ್ಲಿ ಸನಾತನ ಸಂಸೃತಿ ಮತ್ತು ಯೋಗ ಸೇವಾ ಬೆಳಗಾವಿ ಇವರು ಆಯೋಜಿಸಿದ 108 ಸೂರ್ಯ  ನಮಸ್ಕಾರ ಅಭಿಯಾನದಲ್ಲಿ  ಬೆಳಗಾವಿಯ ಯೋಗ ಶಿಕ್ಷಕ ಉಪೇಂದ್ರ ಜೋಶಿ,  ವಿದ್ಯಾ ಉಪೇಂದ್ರ ಜೋಶಿ ಮತ್ತು ಬಾಲ ಶಿಕ್ಷಕಿ ಚಿ. ಶ್ರೀದೇವಿ ಉಪೇಂದ್ರ ಜೋಶಿ ಇವರು 300 ಕ್ಕೂ  ಅಧಿಕ ಸೂರ್ಯನಮಸ್ಕಾರಗಳನ್ನು ಮಾಡುವುದರ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.  

ಇದಕ್ಕೆ ರಾಜ್ಯ ಪ್ರಭಾರಿ ಯೋಗ ಗುರುಗಳಾದ  ಭವರ್ಲಾಲ್ ಆರ್ಯ,  ಕಿರಣ ಮನೋಳಕರ್, ಆರತಿ ಕಾಂಗೋ, ಕಿಸಾನ ಯೋಗ ಸೇವಾ ಸಮಿತಿಯ ರಾಜ್ಯ ಪ್ರಭಾರಿ ಸಂಜಯ ಕುಷ್ಟಗಿಕರ, ಸಾಮಾಜಿಕ ಮಾಧ್ಯಮದ ರಾಜ್ಯಪ್ರಭಾರಿ ಗುರುದತ್ತ ವಿದ್ಯಾರ್ಥಿ ಮತ್ತು ಯೋಗ ಗುರುಗಳಾದ ಪುಣೇಕರ ದಂಪತಿಗಳು, ಯೋಗ ಸಾಧಕರಾದ ಕಲ್ಯಾಣ ಶೆಟ್ಟಿ ದಂಪತಿಗಳು, ಶೈಲಾರೆಬ್ಬಣ್ಣ ವರ ಹಾಗೂ ಶಾಲಾ ಶಿಕ್ಷಕ ವೃಂದ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ.   

ಜೋಶಿ ಪರಿವಾರದ ಕಠಿಣ ಪರಿಶ್ರಮ ಯೋಗಭ್ಯಾಸದ ಮೇಲಿರುವ ಅಪಾರ ಶ್ರದ್ಧೆ, ಭಕ್ತಿ ಅದರಲ್ಲಿ ತಮ್ಮನ್ನು ತಾವು ಸಮರ​‍್ಿಕೊಂದಿರುವುದು ಅಷ್ಟೇ ಅಲ್ಲದೆ ಅವರ ಸುಪುತ್ರಿಗೆ ಚಿಕ್ಕ ವಯಸ್ಸಿನಲ್ಲಿ  ತುಂಬಾ ಒಳ್ಳೆಯ ರೀತಿಯ ಮಾರ್ಗದರ್ಶನ  ಕೂಡಾ ನೀಡುವುದರ ಮೂಲಕ ಈಗಿನ ಕಾಲದಲ್ಲಿ ಅತೀವ ಮಾಧ್ಯಮಗಳಲ್ಲಿ ತೊಡಗಿ ಸಂಸ್ಕೃತಿಯನ್ನೂ, ಆಚಾರ, ವಿಚಾರಗಳನ್ನು ತೊರೆಯುತ್ತಿರುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ತಂದೆ ತಾಯಿಯ ಆದರ್ಶವಾದವೇ ಇದಕ್ಕೆ ಕಾರಣ ಎಂದು ಅಪಾರ ಮೆಚ್ಚುಗೆ, ಸಂತೋಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.