ದತ್ತಾತ್ರೇಯ ದೇವಸ್ಥಾನದಲ್ಲಿ 107 ನೇ ದತ್ತ ಜಯಂತಿ ಆಚರಣೆ
107th Datta Jayanti Celebrations at Dattatreya Temple
ಹಾನಗಲ್ 13 : ಇಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 107 ನೇ ದತ್ತ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳ ಅವತಾರವಾಗಿ ಮಹಾಯೋಗಿ ದತ್ತನನ್ನು ಪೂಜಿಸಲಾಗುತ್ತಿದೆ. ದತ್ತ ಅಖಂಡ ಗುರುಪಂಪರೆಯ ಮೂಲಸ್ತಂಭ, ಮಾನವಕುಲಕ್ಕೆ ದಾರೀದೀಪವಾಗಲು ತೆಗೆದಕೊಂಡ ಅವತಾರ. ಮಾರ್ಗದರ್ಶನ, ಆತ್ಮಶುದ್ಧಿ, ಸೇವೆಯ ಸಂಕೇತವಾಗಿ ದತ್ತ ಜಯಂತಿ ಆಚರಿಸಲಾಗುತ್ತಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.
ಮುಖ್ಯ ಅರ್ಚಕ ಮುಕುಂದಭಟ್ ಕಾಗಿನೆಲ್ಲಿ, ಮುಖಂಡರಾದ ರವಿ ದೇಶಪಾಂಡೆ, ಘನಶ್ಯಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ವಿನಯ ಬಂಕನಾಳ, ವಲ್ಲಭ ಜೋಶಿ, ಕೃಷ್ಣ ಪೂಜಾರ ಸೇರಿದಂತೆ ವಿಪ್ರ ಸಮಾಜದ ಪದಾಧಿಕಾರಿಗಳು, ಜಯಂತಿ ಸಮಿತಿಯ ಪ್ರಮುಖರು, ಸದ್ಭಕ್ತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 