ಡಿ.ದೇವರಾಜ ಅರಸುರವರ 103ನೇ ಜನ್ಮ ದಿನಾಚರಣೆ


ಲೋಕದರ್ಶನ ವರದಿ

ರಾಣಿಬೆನ್ನೂರು22: ಈ ನಾಡು ಕಂಡ ಶ್ರೇಷ್ಠ ಜನನಾಯಕರಲ್ಲಿ ಓರ್ವರಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ ದೇವರಾಜ ಅರಸುರವರ ಸಾಮಾಜಿಕ ಕಳಕಳಿ, ಬಡವರ, ಹಿಂದುಳಿದವರ ಮೇಲಿದ್ದ  ನಿಜವಾದ ಪ್ರೀತಿ ಅನನ್ಯವಾದುದು. ಇಂತಹ ನಾಯಕರ ಆದರ್ಶಗಳನ್ನು ಇಂದು ಸರ್ವರೂ ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಮುನ್ನಡೆದರೆ ಜೀವನ ಪಾವನವಾಗುವುದು ಎಂದು ತಾಪಂ ಇಓ ಡಾ.ಬಸವರಾಜ ಡಿಸಿ ಅಭಿಪ್ರಾಯಪಟ್ಟರು.

   ಸ್ಥಳೀಯ ತಾಪಂ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸರಳವಾಗಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 103 ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಸುರವರು ಹಿಂದುಳಿದವರ ಆಥರ್ಿಕ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದಾರೆ.  

ಸಮಾಜದಲ್ಲಿ ಇತರ ವರ್ಗಗಳಂತೆ ಹಿಂದುಳಿದವರ ಮಕ್ಕಳೂ ಶೈಕ್ಷಣಿಕವಾಗಿ ಮುಂದುವರೆಯಲಿ ಎಂಬ ಸದುದ್ಧೇಶದಿಂದ ಹಾಸ್ಟೇಲ್ ಸೌಲಭ್ಯ ಕಲ್ಪಿಸಿದ ಮಹಾನುಭಾವರಾಗಿದ್ದರು ಎಂದರು.

   ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಅತೀ ಕಟ್ಟೆ ಕಡೆಯ ವ್ಯಕ್ತಿಯು ಸಹ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಕಂಡಿದ್ದ ಅವರು ಅದನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದರು.        ಇಂತಹ ಮೇರು ವ್ಯಕ್ತಿತ್ವದ ಇವರ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾಥರ್ಿಗಳಲ್ಲಿ ಅರಿವು, ಮಾಹಿತಿ, ಪರಿಚಯಿಸುವ ಪ್ರಾಮಾಣಿಕ ಕಾರ್ಯವನ್ನು ಹಿಂದುಳಿದ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು  ಮಾಡಬೇಕು ಎಂದರು.

     ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ಬಿ ರಾಮಮೂತರ್ಿ  ಮಾತನಾಡಿ  ಅರಸುರವರು ಕನ್ನಡ ನಾಡಿನಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಠಿಸಿದವರು. ಕನ್ನಡ ನಾಡು ಸಮೃದ್ಧಿಗಾಗಿ ಮತ್ತು ಹಿಂದುಳಿದವರಿಗಾಗಿ ಸಾಮಾಜಿಕ ಸಮಾನತೆಯನ್ನು ತರಲು ಮುಂದಾಗಿದ್ದರು.

ಅಂತಹ ಧೀಮಂತ ನಾಯಕರ ಆದರ್ಶಮಯ ತತ್ವಗಳು ಇಂದಿನ ನಗರೀಕರಲ್ಲಿ  ಹೊರಹೊಮ್ಮಬೇಕಾಗಿದೆ ಎಂದರು.

    ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಿಸಿಎಂ ವಿಸ್ತರಣಾಧಿಕಾರಿ ವಿ.ಎಸ್ ಹಿರೇಮಠ, ಕೆ.ಎಚ್. ಭಜಂತ್ರಿ, ಸಿಎಂ ಪುಟ್ಟಕ್ಕಳವರ, ಎನ್ ಆರ್ ಹಲಗೇರಿ, ಶಾಂತಪ್ಪ ಸಾಹುಕಾರ, ವೈ.ಐ. ಕೊರವರ, ಎಸ್ಎಸ್ ಪ್ರಸಾದಿಮಠ, ಎಚ್.ಎಚ್. ಓಲೇಕಾರ, ಪ್ರಸಾದ ಆಲದಕಟ್ಟಿ, ರಾಜಶೇಖರ ಪಾರ್ವತೇರ, ಶಿವಪುತ್ರಪ್ಪ ಹಲವಾಗಲ ಸೇರಿದಂತೆ ಬಿಸಿಎಂ ಇನ್ನೀತರ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಇದ್ದರು. 

   ನಗರಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿಯವರ ನಿಧನದ ಪ್ರಯುಕ್ತ ಇರುವ ಶೋಕಾಚರಣೆ ಪರಿಣಾಮ ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ನಡೆಸಲಾಯಿತು.