ಇಂಡಿಯಲ್ಲಿ 100 ದಿನಗಳ ಲೆಕ್ಕ ಪರಿಶೋಧನಾ ಅಭಿಯಾನ

ಇಂಡಿಯಲ್ಲಿ 100 ದಿನಗಳ ಲೆಕ್ಕ ಪರಿಶೋಧನಾ ಅಭಿಯಾನ  100 days audit campaign in Indi

ಇಂಡಿ 24: ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಭೀಮಾಶಂಕರ ಕನ್ನೂರ  ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತಿರುವಳಿಗಾಗಿ 100 ದಿನಗಳ ಗ್ರಾಮ ಪಂಚಾಯತಿ ಲೆಕ್ಕ ಪರಿಶೋಧನಾ ಅಭಿಯಾನದ ಅಡಹಾಕ್ ಸಮಿತಿ ಸಭೆ ಜರುಗಿಸಲಾಯಿತು.

2014 -15 ರಿಂದ 2023 - 24 ರ ಅಂತ್ಯದವರೆಗೆ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಬಾಕಿ ಇರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನು ಇತ್ಯರ್ಥಗೊಳಿಸಲು ಅಡಹಾಕ್ ಸಮಿತಿ ಸಭೆ ಜರುಗಿಸಿದ್ದು ಸಭೆಯಲ್ಲಿ  ಎಲ್ಲ ದಾಖಲಾತಿಗಳು ಮತ್ತು ಆಡಿಟ್ ವರದಿಗಳನ್ನು ತಾಲೂಕ ನೂಡಲ್ ಅಧಿಕಾರಿಗಳಾದ ಲೆಕ್ಕ ಅಧೀಕ್ಷಕರು ಸಂತೋಷ್ ದಂದರಗಿ ರವರು  ಪರೀಶೀಲಿಸಿದರು.ಇಂಡಿ ಕಾರ್ಯನಿರ್ವಾಹಕ ಅಧಿಕಾರಿ ಭೀಮಾಶಂಕರ ಕನ್ನೂರ ಮಾತನಾಡಿ ನರೇಗಾ ಲೆಕ್ಕಪರಿಶೋಧನೆ" ಎಂಬುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಒಉಓಖಇಉಂ) 100 ದಿನಗಳ ಕೆಲಸ ಒದಗಿಸುವ ಕುರಿತಾದ ಲೆಕ್ಕಪರಿಶೋಧನೆಯನ್ನು ಉಲ್ಲೇಖಿಸುತ್ತದೆ, ಇದು ವೇತನ ಮತ್ತು ಕೆಲಸದ ವಿತರಣೆಯನ್ನು ಒಳಗೊಂಡಿರುತ್ತದೆ. ಬಾಕಿ ಉಳಿದಿರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನೂ ನಿರ್ಲಕ್ಷ ವಹಿಸದೆ ಮಂದಿನ ಸಭೆಯಲ್ಲಿ ಅನುಪಾಲನಾ ವರದಿಯೊಂದಿಗೆ ಸಭೆಗೆ ಹಾಜರಾಗಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಮಯದಲ್ಲಿ ಯೋಜನಾಧಿಕಾರಿಗಳಾದ ನಂದೀಪ ರಾಠೋಡ, ಸಹಾಯಕ ಲೆಕ್ಕಾಧಿಕಾರಿಗಳು  ಶ್ರೀಶೈಲ ಹಡಪದ, ವೈ ಡಿ ಮನಗೂಳಿ,  ರಾಜಶ್ರೀ  ಕಂಬಾರ ಇಂಡಿ ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತಿ  ಸಿಬ್ಬಂದಿಗಳು ಇದ್ದರು.