ರಾಷ್ಟ್ರಗೀತೆ ವೇಳೆ ವ್ಹೀಲ್ ಚೇರ್ ಬಿಟ್ಟು ಎದ್ದು ನಿಂತ 10 ವರ್ಷದ ಅಂಗವಿಕಲ


ನ್ಯೂಯಾರ್ಕ: ಎಲ್ಲ ಚೆನ್ನಾಗಿದ್ದರೂ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ ಕುಳಿತುಕೊಂಡೆ ಇರುವಂತಾ ಮನಸ್ಥಿತಿ ಇರುವಂತವರ ನಡುವೆ 10 ವರ್ಷದ ಅಂಗವಿಕಲ ಬಾಲಕ ತಾನು ಕೂತಿದ್ದ ವ್ಹೀಲ್ ಚೇರ್ ಬಿಟ್ಟು ಎಂದು ನಿಂತು ಗೌರವ ಕೊಟ್ಟ ಮನಕಲಕುವ ಘಟನೆ ನಡೆದಿದೆ.  

ಅಮೆರಿಕದ ಪುಟ್ನಮ್ ಕೌಂಟಿಯ ಟೆನ್ನಿಸ್ಸಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ರಾಷ್ಟ್ರಗೀತೆ ಗೀತೆ ವೇಳೆ ಯಾವುದೇ ಆಧಾರವಿಲ್ಲದೆ ಬಾಲಕ ಎದ್ದು ನಿಂತಿದ್ದಾನೆ.

ಇದನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.  

ಬಾಲಕ ಆವೆರಿ ಪ್ರೈಸ್ ಅನುವಂಶಿಯ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಈತನಿಗೆ ನಿಲ್ಲಲು ಅಸಾಧ್ಯವಾಗಿತ್ತು. ವ್ಹೀಲ್ ಚೇರ್ ಮೂಲಕವೇ ಸಂಚರಿಸುತ್ತದ್ದನು. ಭಾನುವಾರ ಸಂಜೆ ಜಾತ್ರೆಯ ವೇಳೆ ರಾಷ್ಟ್ರಗೀತೆಯೊಂದು ಮೊಳಗಿದೆ. (ಫೊಟೊ 6)