ನವನಗರ ರಡ್ಡಿ ಸಮುದಾಯ ಭವನಕ್ಕೆ 10 ಲಕ್ಷ ರೂ ಅನುದಾನ: ಅರವಿಂದ ಬೆಲ್ಲದ
10 lakh rupees grant for Navanagar Ruddy Community Hall: Aravind Bellada.
ಹುಬ್ಬಳ್ಳಿ: (ನವನಗರ): 23: ನವನಗರ ರಡ್ಡಿ ಸಮುದಾಯ ಭವನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಶಾಸಕರ ಅನುದಾನದಿಂದ 10 ಲಕ್ಷ ರೂಗಳನ್ನು ನೀಡುವದಾಗಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ರಡ್ಡಿ ಸೇವಾ ಬಳಗ ನವನಗರ ನಿಮಿ9ಸಿದ ಸುಸಜ್ಜಿತ ರಡ್ಡಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನನ್ನ ಕ್ಷೇತ್ರದಲ್ಲಿ ರಡ್ಡಿ ಸಮುದಾಯದವರು ನನಗೆ ಸದಾ ಬೆಂಬಲವಾಗಿ ನಿಂತಿದ್ದಾರೆ . ಅವರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಡುವಂತೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ನೂತನ ಸಮುದಾಯ ಭವನವನ್ನು ಬಹಳ ಅಚ್ಚುಕಟ್ಟಾಗಿ ನಿಮಿ9ಸಿದ್ದಾರೆ. ನವನಗರ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿದ್ದೇನೆ. ಪಕ್ಕದ ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯಾಗಿ ನಿಮಾ9ಣ ಮಾಡುವಲ್ಲಿ ಶ್ರಮಿಸಿದ್ದೇನೆ. ಪಕ್ಕದಲ್ಲಿಯೇ ವಾಹನಮುಕ್ತ ರಸ್ತೆಯನ್ನು ನಿಮಾ9ಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ ರಡ್ಡಿ ಸಮುದಾಯ ಎಲ್ಲ ಸಮಾಜದೊಂದಿಗೂ ಬೆರೆಯುವ ಸಹೃದಯಿ ಸಮಾಜ ರಡ್ಡಿ ಸಮುದಾಯದವರು ಬೇಡುವುದಕ್ಕಿಂತ ಕೊಡುಗೆ ನೀಡುವುದೇ ಹೆಚ್ಚು. ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಆಶೀವಾ9ದದಿಂದ ನಮ್ಮ ಸಮುದಾಯ ಶಿಸ್ತು ಬದ್ಧ ಜೀವನವನ್ನು ನಡೆಸುತ್ತಿದೆ. ಎಲ್ಲ ಸಮಾಜದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದೇವೆ ಎಂದು ಅವರು ಹೇಳಿದರು.
ಪಾಲಿಕೆಯ ಸದಸ್ಯೆ ಶ್ರೀಮತಿ ಸುನೀತಾ ಮಾಳವದಕರ್ ಮಾತನಾಡಿ ಎಲ್ಲ ಸಮಾಜದೊಂದಿಗೆ ಬೆರೆಯುವ ಸಮಾಜ ಎಂದರೆ ಅದು ರಡ್ಡಿ ಸಮಾಜ ಎಂದು ಶ್ಲಾಘಿಸಿದರು
ನವನಗರ ರಡ್ಡಿ ಸೇವಾ ಬಳಗದ ಅಧ್ಯಕ್ಷರಾದ ಮಹೇಶ ಎಲ್ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ರಡ್ಡಿ ಸಮುದಾಯ ಭವನಕ್ಕೆ ಸಮಾಜದ ಅನೇಕ ಗಣ್ಯರು ಕೊಡುಗೆ ನೀಡಿದ ಪರಿಣಾಮ ಉತ್ತಮ ಸುಸಜ್ಜಿತವಾಗಿ ನಿಮಾ9ಣಗೊಂಡಿದೆ. ಶಾಸಕ ಅರವಿಂದ ಬೆಲ್ಲದ ಅವರು 5 ಲಕ್ಷ ರೂ ಅನುದಾನವನ್ನು ನೀಡಿದ್ದಾರೆ ಎಂದು ಹೇಳಿದರು.
ಇದೇ ಸಂದಭ9ದಲ್ಲಿ ದಾನಿಗಳನ್ನು ಅವರು ಸ್ಮರಿಸಿದರು. ಉಪಾಧ್ಯಕ್ಷರಾದ ವಿ. ಆರ್. ಮುದರಡ್ಡಿ, ನಿಮಿ9ತ ಕೇಂದ್ರ ಅಧಿಕಾರಿಗಳಾದ ಶಿವಕುಮಾರ, ರಮೇಶ ಜಂಗಲ್, ವಿ.ಎಲ್. ಪಾಟೀಲ, ಆರ್. ಕೆ. ಪಾಟೀಲ, ಪ್ರಧಾನ ಕಾಯ9ದಶಿ9ಗಳಾದ ಜಿ.ಎಚ್.ಮುಗನೂರ, ಆರ್ ಹನುಮಂತಪ್ಪಾ, ಎಸ್ ಸಿ ಜಾಲಿಕಟ್ಟಿ, ರಮೇಶ ಎಚ್ ನಂದ್ಯಾಳ. ಸುನೀಲ ರಡ್ಡೇರ, ನಾರಾಯಣ ಚೌಡರಡ್ಡಿ,ಬಿ.ಎಚ್.ರಡ್ಡೇರ ಡಾ. ಎಂ.ಆಯ್ ರಡ್ಡೇರ ಮುಂತಾದವರು ಉಪಸ್ಥಿತರಿದ್ದರು. ಎಮ್.ವಿ. ಕರಕಗೌಡರ ವಂದನಾಪ9ಣೆ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 