10 ಕಿಮೀ ಸೈಕಲ್ ಪ್ರಯಾಣ: ಇಂಧನ ಉಳಿವು, ಆರೋಗ್ಯ ಕಾಳಜಿಗೆ ಮಾದರಿ: ಸೈಕಲ್ ಮೇಲೆ ನ್ಯಾಯಾಲಯಕ್ಕೆ ಆಗಮೀಸುವ ಸಿಬ್ಬಂದಿ
10 km cycle journey: A model for fuel conservation, health care: Court staff who commute to court on
ಚಿಕ್ಕೋಡಿ 23: ಇಂಧನ ಸಂಕಷ್ಟ ಮತ್ತು ಪರಿಸರ ಹಾನಿ ಕುರಿತು ಜಾಗೃತಿ ಹೆಚ್ಚುತ್ತಿರುವ ಈ ಕಾಲದಲ್ಲಿ, ಪಟ್ಟಣದ ಏಳನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಯೊಬ್ಬರು ಕಳೆದ ಒಂದು ವಾರದಿಂದ ಸೈಕಲ್ ಮೂಲಕವೇ ಕಚೇರಿಗೆ ಆಗಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ವೈ.ಎಸ್. ಪಾಟೀಲ ಅವರು ಚಿಕ್ಕೋಡಿ ಪಟ್ಟಣದ ಏಳನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಬೈಕ್ ಅಥವಾ ಕಾರು ಬಳಸುವ ಈ ಕಾಲದಲ್ಲಿ, ಪಾಟೀಲ ಅವರು ವಿಭಿನ್ನವಾಗಿ ಯೋಚಿಸಿ, ಪೆಟ್ರೋಲ್ ಉಳಿವು ಹಾಗೂ ಪರಿಸರ ಸಂರಕ್ಷಣೆ ಎಂಬ ಉದ್ದೇಶದಿಂದ ಪ್ರತಿದಿನವೂ ಸುಮಾರು 10 ಕಿಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸುತ್ತಿದ್ದಾರೆ. ಕೇರೂರ ಗ್ರಾಮದಿಂದ ಚಿಕ್ಕೋಡಿ ಪಟ್ಟಣದವರೆಗೆ ಅವರು ಸೈಕಲ್ ಸವಾರಿ ಮಾಡುತ್ತಾ ಕಚೇರಿಗೆ ತಲುಪುವುದು ಕೇವಲ ಒಂದು ಪ್ರಯಾಣವಲ್ಲ, ಅದು ಒಂದು ಸಂದೇಶವಾಗಿದೆ.ಇವರ ಈ ನಿರ್ಧಾರವು ಕೇವಲ ಇಂಧನ ಉಳಿವಿಗೆ ಮಾತ್ರ ಸೀಮಿತವಾಗಿಲ್ಲ.
ದೈನಂದಿನ ಸೈಕಲ್ ಸವಾರಿ ಅವರ ದೈಹಿಕ ಆರೋಗ್ಯಕ್ಕೂ ಸಹಕಾರಿ ಆಗಿದ್ದು, ವ್ಯಾಯಾಮದ ಅಭ್ಯಾಸವನ್ನೂ ಬೆಳೆಸುತ್ತಿದೆ. ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯವನ್ನು ಕಡೆಗಣಿಸುವ ಜನರಿಗೆ ಇದು ಒಳ್ಳೆಯ ಉದಾಹರಣೆಯಾಗಿದೆ. ನ್ಯಾಯಾಲಯದ ಇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಇವರ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಪರಿಸರ ರಕ್ಷಣೆ, ಇಂಧನ ಉಳಿವು ಹಾಗೂ ಆರೋಗ್ಯದ ಕಾಳಜಿ ಆಗಿರುವ ಈ ಸೈಕಲ್ ಪ್ರಯಾಣವು ಯುವಜನತೆಗೆ ವಿಶೇಷವಾಗಿ ಸ್ಪೂರ್ತಿಯಾಗಿದೆ.
ಕೋಟ್ ಇಂದಿನ ಕಾಲದಲ್ಲಿ ಇಂದನ ಬಳಕೆ ಮತ್ತು ಪರಿಸರ ಮಾಲಿನ್ಯ ಎರಡೂ ದೊಡ್ಡ ಸಮಸ್ಯೆಗಳಾಗಿವೆ. ಅದಕ್ಕಾಗಿ ನಾನು ಸೈಕಲ್ ಬಳಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರಿಂದ ಇಂಧನ ಉಳಿವಾಗುವುದರ ಜೊತೆಗೆ ಆರೋಗ್ಯವೂ ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸೈಕಲ್ ಅಥವಾ ಸಾರ್ವಜನಿಕ ಸಾರಿಗೆ ಬಳಸಿದರೆ ಪರಿಸರ ರಕ್ಷಣೆ ಸಾಧ್ಯ. ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬ ಅಭಿಪ್ರಾಯ ನನ್ನದಾಗಿದೆ. ವೈ.ಎಸ್. ಪಾಟೀಲ ಚಿಕ್ಕೋಡಿ ನ್ಯಾಯಾಲಯ ಸಿಬ್ಬಂದಿ. .
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 