ಮಸಾಲೆ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಲು ಐಸಿಎಆರ್ ಪ್ರಾಯೋಕತ್ವದಲ್ಲಿ 10 ದಿನಗಳ ತರಬೇತಿ

ಮಸಾಲೆ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಲು ಐಸಿಎಆರ್ ಪ್ರಾಯೋಕತ್ವದಲ್ಲಿ 10 ದಿನಗಳ ತರಬೇತಿ 10-day training sponsored by ICAR to maintain quality of spices

          ಹಾವೇರಿ 02 : ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು ಪ್ಯಾಕಿಂಗ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಇತ್ತಿಚಿನ ತಾಂತ್ರಿಕ ಪ್ರಗತಿ ಕುರಿತು ಐಸಿಎಆರ್ ಪ್ರಾಯೋಕತ್ವದಲ್ಲಿ 10 ದಿನಗಳ ತರಬೇತಿಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಅಡಿಯಲ್ಲಿ ಬರುವ ಮಹಾವಿದ್ಯಾಲಯವಾದ ದಾನವೀರ ಸಿರಸಂಗಿ  ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ದೇವಿ ಹೊಸೂರದಲ್ಲಿ. ದಿನಾಂಕ: 02.02.2026 ರಿಂದ 11.02.2026ರ ವರೆಗೆ ಆಯೋಜಿಸಲಾಗಿದ್ದು ಈ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸುರೇಶ ಎಸ್ ಜಂಗಮಶೆಟ್ಟಿ ಇವರು ವೀಶೀಷ್ಟವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಕಾಳು ಮೆಣಸು ಹಾಕಿ ‘ಬಿಸುವಕಲ್ಲನ್ನು’ ತಿರಿಗಿಸುವ ಮೂಲಕ ಉಧ್ಘಾಟಿಸಿ ಪ್ರಾಚೀನ ಕಾಲದಿಂದಲೂ ನಮ್ಮದೇಶದ  ಸಾಂಬಾರು ಪದಾರ್ಥಗಳಿಗೆ ಇರುವ ಪ್ರಾಮುಖ್ಯತೆ, ವಿದೇಶಿ ಬೇಡಿಕೆ ಕುರಿತು ಬೆಳಕು ಚಲ್ಲಿದರು ಹಾಗೂ ಆಹಾರ ಮತ್ತು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಲು ತಿಳಿಸಿದರು ಅದರೊಂದಿಗೆ, ಪ್ರಾಚಿನ ಸಮಯದಲ್ಲಿ ಸಾಂಬಾರು ಪಧಾರ್ಥಗಳಿಗೆ ಇರುವ ಬೇಡಿಕೆ, ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.

        ಮುಂದುವರೆದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಲಕ್ಷ್ಮಣಕುಕನೂರ ಮಹಾವಿದ್ಯಾಲಯದ ಡೀನ್‌ರವರು ವಹಿಸಿ 200 ವರ್ಷಗಳ ಹಿಂದೆ ನಮ್ಮ ದೇಶದ ಮೇಲೆ ಸಾಂಬಾರು ಪಧಾರ್ಥಗಳ ವ್ಯಾಪಾರಕ್ಕಾಗಿ ವಿದೇಶಿಗರು ಬಂದಿದ್ದಲ್ಲದೆ ಅವರು ನಮ್ಮ ದೇಶವನ್ನು ಕೂಡಾ ಆಳಿದರು ಎಂದು ತಿಳಿಸುತ್ತಾ, ಪ್ರಸ್ತುತ ನಮ್ಮ ದೇಶದ ಆರ್ಥಿಕ ಪ್ರಗತಿಯಲ್ಲಿ ಸಾಂಬಾರು ಪದಾರ್ಥಗಳ ರಫ್ತು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು ಈ ತರಬೇತಿ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಕೇರಳಾ,ಆಂದ್ರ​‍್ರದೇಶ ಹಾಗೂ ನಮ್ಮರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ 17 ಜನ ಶಿಕ್ಷಕರು/ ವಿಜ್ಞಾನಿಗಳು ಭಾಗವಹಿಸಿದ್ದರು. ಡಾ. ಸುಷ್ಮಾಐ.ಎಚ್‌.,ಸಹಾಯಕ ಪ್ರಾದ್ಯಾಪಕರು, ಕಾರ್ಯಕ್ರಮದಲ್ಲಿದ್ದ ಎಲ್ಲರನ್ನು ಸ್ವಾಗತಿಸಿದರು ಹಾಗೂ ಈ ತರಬೇತಿಕಾರ್ಯಕ್ರಮದ ರೂಪುರೇಶಗಳ ಬಗ್ಗೆ ಡಾ. ವೀಣಾಎನ್‌. ಸಹಪ್ರಾದ್ಯಾಪಕರು ತಿಳಿಸಿಕೋಟ್ಟರು. ಕಾರ್ಯಕ್ರಮದ ನಿರೂಪಣೆಯನ್ನುಡಾ. ಶ್ರೀನಿವಾಸ ಜಿ., ನಡೆಸಿದರು ಹಾಗೂ ಶ್ರೀಮತಿ.ಅನ್ನಪೂರ್ಣ ನೀರಲಗಿಅವರು ವಂದನಾರೆ​‍್ಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.