ನಣದಿವಾಡಿ - ಅರಬ್ಯಾನವಾಡಿ ರಸ್ತೆ ಸುಧಾರಣೆಗೆ 1.50 ಕೋಟಿ ಮಂಜೂರು
1.50 crore sanctioned for improvement of Nanadiwadi - Arabyanawadi road
ಲೋಕದರ್ಶನ ವರದಿ
ಚಿಕ್ಕೋಡಿ 07: ನಣದಿವಾಡಿ ಗ್ರಾಮದಿಂದ ಅರಬ್ಯಾನವಾಡಿ ಗ್ರಾಮದವರೆಗಿನ ಸುಮಾರು 3.5 ಕಿಲೋಮೀಟರ್ ಉದ್ದದ ರಸ್ತೆ ಸುಧಾರಣಾ ಕಾಮಗಾರಿಗೆ ಒಟ್ಟು 1.50 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ.ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ್ ಹುಕ್ಕೇರಿ ಮತ್ತು ಚಿಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿ ಅವರ ನಿರಂತರ ಶ್ರಮ ಮತ್ತು ವಿಶೇಷ ಪ್ರಯತ್ನದಿಂದಾಗಿ ಈ ರಸ್ತೆ ಅಭಿವೃದ್ಧಿಗೆ ಅಗತ್ಯವಿದ್ದ ನಿಧಿಯು ಲಭ್ಯವಾಗಿದೆ. ಈ ಹಿಂದೆ ರಸ್ತೆಯ ಹದಗೆಟ್ಟ ಸ್ಥಿತಿಯಿಂದಾಗಿ ವಾಹನ ಸವಾರರು ಹಾಗೂ ರೈತರು ಅನುಭವಿಸುತ್ತಿದ್ದ ಕಷ್ಟಕ್ಕೆ ಈಗ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಖಿರಾಯಿ ತಿಳಿಸಿದರು.ರಾಮಚಂದ್ರ ಮಡಿವಾಳೆ ಹಾಗೂ ಅಣ್ಣಾ ಚಿನಗೆ ಅವರು, ಈ ಭಾಗದ ರಸ್ತೆ ಸಂಪರ್ಕದ ಕೊರತೆಯನ್ನು ಮನಗಂಡು ತಕ್ಷಣವೇ ಸ್ಪಂದಿಸಿದ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.
ಈ ರಸ್ತೆ ಪೂರ್ಣಗೊಂಡ ನಂತರ ಸುಗಮ ಸಾರಿಗೆಗೆ ಅನುಕೂಲವಾಗಲಿದ್ದು, ವ್ಯಾಪಾರ ಹಾಗೂ ದೈನಂದಿನ ದಳವಳಣಕ್ಕೆ ದೊಡ್ಡ ವೇಗ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸದಾಶಿವ, ವಿಜಯ ಕೋಟರೆ, ಅಣ್ಣಪ್ಪ ಖಿಲಾರೆ, ತಮ್ಮಣ್ಣಿ ಕೆಂಚನವರ, ನಾನಾಸಾಹೇಬ ನಾಯ್ಕ, ಜ್ಯೋತಿಬಾ ನಾಯ್ಕ, ಸುಭಾಷ ಮಗದುಮ್ಮ, ಕಾಂತೇಶ ನಾಯ್ಕ, ಪರಶುರಾಮ ರಜಪೂತ, ಅಪ್ಪು ಸುರಣ್ಣವರ, ಯಲ್ಲಪ್ಪ ಪೂಜಾರಿ, ಅಪ್ಪಾಸಾಹೇಬ ಮಸ್ತೆ, ಸಂಜಯ್ ನಾಯ್ಕ, ಅಜಿತ್ ನಾಯ್ಕ, ಸದಾಶಿವ ನಾಯ್ಕ, ಮಹಾದೇವ ನಾಯ್ಕ, ಪ್ರದೀಪ್ ನಾಯ್ಕ, ಶಿವಗೌಡ ನಾಯ್ಕ, ಪುಂಡಲೀಕ ನಾಯ್ಕ, ಗಜಾನನ ನಾಯ್ಕ ಹಾಗೂ ಅಶೋಕ ಖೋತ ಸೇರಿದಂತೆ ನಣದಿ ಮತ್ತು ನಣದಿವಾಡಿ ಗ್ರಾಮದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 