1100 ಆಶ್ರಯ ಮನೆಗಳ ಯೋಜನೆ; ಅಂತಿಮ ಹಂತದಲ್ಲಿ 672 ಮನೆಗಳ ನಿರ್ಮಾಣ

1100 ಆಶ್ರಯ ಮನೆಗಳ ಯೋಜನೆ; ಅಂತಿಮ ಹಂತದಲ್ಲಿ 672 ಮನೆಗಳ ನಿರ್ಮಾಣ    1,100 Ashraya housing scheme; construction of 672 houses in the final stage

ಲೋಕದರ್ಶನ ವರದಿ 

ದಾಂಡೇಲಿ 31 : ದಾಂಡೇಲಿಯ ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ 1100 ಜಿ+2 ಆಶ್ರಯ ಮನೆಗಳ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ ಯೀಜನೆಯಡಿ ಬ್ಯಾಂಕ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ನಗರಸಭಾ ಸಂಭಾಂಗಣದಲ್ಲಿ ಸಾಲಮೇಳವನ್ನು ಏರಿ​‍್ಡಸಲಾಗಿತ್ತು ಈ ಸಾಲ ಮೇಳ ಕಾರ್ಯಕ್ರಮವನ್ನು ಪೌರಾಯುಕ್ತ ವಿವೇಕ್ ಬನ್ನೆ ಚಾಲನೆ ನೀಡಿದರು.  ಅವರು ಮಾತನಾಡಿ  ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ 1100 ಜಿ+2 ಆಶ್ರಯ ಮನೆಗಳ ಪೈಕಿ ಈಗಾಗಲೇ 108 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪೂರ್ಣಗೊಂಡಿರುವ 84 ಮನೆಗಳ ಹಸ್ತಾಂತರ ಕಾರ್ಯ ಸಧ್ಯದಲ್ಲೇ ನಡೆಯಲಿದೆ.

ಉಳಿದಂತೆ 672ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೇ ವಿತರಣೆ ಮಾಡಿರುವ ಹಾಗೂ ವಿತರಣೆ ಮಾಡಲಿರುವ ಒಟ್ಟು 192 ಫಲಾನುಭವಿಗಳಿಗೆ ಬ್ಯಾಂಕ ಸಾಲ ಸೌಲಭ್ಯ ಕಲ್ಪಿಸುವುದು ಈ ಸಾಲ ಮೇಳದ ಉದ್ದೇಶವಾಗಿದೆ ಎಂದು ನುಡಿದರು. ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಲೊಕೇಶ ಅವರು ಸಾಲ ಮೇಳದಲ್ಲಿ ಭಾಗವಹಿಸಿರುವ ಫಲಾನುಭವಿಗಳಿಗೆ ಸಾಲಕ್ಕಾಗಿ ಸಲ್ಲಿಸಬೇಕಾಗಿರುವ ದಾಖಲಾತಿ ಪತ್ರಗಳ ಕುರಿತು ವಿವರಿಸಿ, ಸಾಲ ಮರು ಪಾವತಿಯ ಕುರಿತು ಮಾಹಿತಿ ನೀಡಿದರು. ವಿವಿಧ ಬ್ಯಾಂಕಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.  ಪ್ರಾರಂಭದಲ್ಲಿ ನಗರಸಭೆಯ ಸಮುದಾಯದ ಸಂಘಟನಾ ಅಧಿಕಾರಿ ಶಿವಪ್ಪಾ ಸ್ವಾಗತಿಸಿ ವಂದಿಸಿದರು.