“ಭೂ ತಾಯಿಯನ್ನು ಸಂರಕ್ಷಿಸಿ ಕೃಷಿಯನ್ನು ಉದ್ಯಮವಾಗಿ ಹೊರಹೊಮ್ಮಿಸಿ”
“Protect Mother Earth and develop agriculture as an industry”
“ಭೂ ತಾಯಿಯನ್ನು ಸಂರಕ್ಷಿಸಿ ಕೃಷಿಯನ್ನು ಉದ್ಯಮವಾಗಿ ಹೊರಹೊಮ್ಮಿಸಿ”
ಧಾರವಾಡ 05 : ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಧುನಿಕವಾಗಿ ಕೃಷಿ ಉದ್ಯೋಗ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರ ಧಾರವಾಡದ ಮುಖ್ಯಸ್ಥರಾದ ಡಾ.ಕೆ.ಪಿ.ಗುಂಡಣ್ಣನವರ ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ರುಡ್‌ಸೆಟ್ ಸಂಸ್ಥೆ ಧಾರವಾಡದಲ್ಲಿ ಏರಿ್ಡಸಿದ 13 ದಿನಗಳ ಕಾಲ ಜರುಗುವ ಕೃಷಿ ಉದ್ಯಮ ತರಬೇತಿಯನ್ನು ಸಸಿಗೆ ನಿರೆರೆಯುವುದರ ಮೂಲಕ ತರಬೇತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಮಣ್ಣಿನಲ್ಲಿ ಪೋಷಕಾಂಶಗಳಿಲ್ಲದೇ ಗುಣಮಟ್ಟದ ಆಹಾರ ಪಡೆಯುವುದು ತುಂಬಾ ಕಷ್ಟವಾಗುತ್ತಿದೆ, ಇದರಿಂದ ಆರೋಗ್ಯದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿ, ಇಂಥ ಸಂದರ್ಭದಲ್ಲಿ ಭೂ ತಾಯಿಯನ್ನು ಸಂರಕ್ಷಿಸಿ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜೊತೆ ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿಕೊಳ್ಳಿ ಎಂದು ಕೆಲವು ಉದಾಹರಣೆಗಳ ಮೂಲಕ ತಿಳಿಸಿ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎಸ್ ಎಮ್ ಹಿರೇಮಠ ಅವರು ಮಾತನಾಡಿ, ರೈತರು ವೈಜ್ಞಾನಿಕವಾಗಿ ಕೃಷಿ ಮಾಡುವುದಷ್ಟೇ ಅಲ್ಲದೇ ಹೆಚ್ಚಿನ ಆದಾಯಗಳಿಸಲು ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಉದ್ಯೋಗವನ್ನು ಮಾಡಿಕೊಂಡರೆ ಅದರಲ್ಲಿ ಬರುವ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೇಯ ಬೇಡಿಕೆಯಿದ್ದು ಅದರಿಂದ ಇನ್ನೂ ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಪೃಥ್ವಿರಾಜ ಜಿ ಪಿ ಅವರು ಶಿಬಿರಾರ್ಥಿಗಳನ್ನುದ್ಧೇಶಿಸಿ ಮಾತನಾಡಿ, ರುಡ್‌ಸೆಟ್ ಸಂಸ್ಥೆಯು ಅನೇಕ ವಿವಿಧ ಸ್ವ ಉದ್ಯೋಗ ತರಬೇತಿಗಳನ್ನು ನೀಡುತ್ತಿದೆ. ಅದರಲ್ಲಿ ಕೃಷಿಗೆ ಪೂರಕವಾಗಿ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ ಮತ್ತು ಕೃಷಿ ಉದ್ಯಮಕ್ಕೆ ಸಂಬಂಧಪಟ್ಟ ಪೂರಕ ತರಬೇತಿಗಳನ್ನು ಸಂಸ್ಥೆ ನೀಡುತ್ತದೆ. ತರಬೇತಿಯಲ್ಲಿ ನೀಡುವ ಪ್ರತಿಯೊಂದು ಮಾಹಿತಿಯನ್ನು ನಿಮ್ಮ ಕೃಷಿ ಉದ್ಯಮದಲ್ಲಿ ಬಳಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಜಗದೀಶ ಸಿ ಪೂಜಾರ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಕಛೇರಿ ಸಹಾಯಕರಾದ ಮಧ್ವರಾಜ್ ಭಟ್ ಅವರು ವಂದಿಸಿದರು.
ತರಬೇತಿಗೆ ಧಾರವಾಡ, ಬೆಳಗಾಂ, ಹಾವೇರಿ, ಗದಗ, ಕೊಪ್ಪಳ, ಶಿವಮೊಗ್ಗ ಜಿಲ್ಲೆಗಳಿಂದ 70 ಕೃಷಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 