“ಮಾದಕ ದ್ರವ್ಯಗಳ ಮತ್ತು ಅಮಲು ಪದಾರ್ಥಗಳ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ”
“Awareness Program for the Elimination of Narcotics and Intoxicants”
ಲೋಕದರ್ಶನ ವರದಿ
ಧಾರವಾಡ 20: ಜೆಎಸ್‌ಎಸ್ ಮಂಜುನಾಥೇಶ್ವರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು ಮೃತ್ಯುಂಜಯನಗರ, ಸವದತ್ತಿ ರಸ್ತೆ, ಧಾರವಾಡದಲ್ಲಿ ದಿನಾಂಕ 19-06-2026 ರಂದು ಬೆಳಿಗ್ಗೆ 10;30 ಗಂಟೆಗೆ ವಿದ್ಯಾರ್ಥಿಗಳಿಗಾಗಿ “ಮಾದಕ ದ್ರವ್ಯಗಳ ಮತ್ತು ಅಮಲು ಪದಾರ್ಥಗಳ ನಿರ್ಮೂಲನೆ ಜಾಗೃತಿ ಕಾರ್ಯಕ್ರ”ವನ್ನು ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆಯ ಆದೇಶದ ಅನುಸಾರ ಆಯೋಜಿಸಲಾಗಿತ್ತು. ಕರ್ನಾಟಕ ಪೋಲಿಸ ಇಲಾಖೆಯ ಧಾರವಾಡ ನಗರದ ಸಿಪಿಆಯ್ ಅಧಿಕಾರಿಗಳಾದ ಶ್ರೀ ಗುರುನಾಥ ಚವ್ಹಾನ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ “ವಿದ್ಯಾರ್ಥಿಗಳು ಅತೀ ಸುಲಬವಾಗಿ ಸ್ಥಳೀಯವಾಗಿ ಲಭ್ಯ ಅಮಲು ಪದಾರ್ಥಗಳನ್ನು ಬಳಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಅವುಗಳ ಬಳಕೆಯಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ.
ವಿದ್ಯಾರ್ಥಿಗಳು ಈ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಉಜ್ವಲ ಭವಿಷ್ಯದ ಕಡೆ ಗಮನ ಹರಿಸಬೇಕು ಎಂದರು. ಮುಂದುವರೆದು ಯುವಜನರಲ್ಲಿ ಮಾದಕ ವಸ್ತುಗಳ ದುರ್ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಪೋಕ್ಸೋ ಮತ್ತು ಡಿಜಿಟಲ್ ಅರೆಸ್ಟ್‌ಗಳ ಕುರಿತಾಗಿಯೂ ಮಾಹಿತಿಯನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.” ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಬಿ. ಎನ್ ಭಾವಿ ವಹಿಸಿದ್ದರು. ಪೋಲಿಸ ಅಧಿಕಾರಿಗಳಾದ ಶ್ರೀ ಎಸ್. ವಿ. ದೇಮಣ್ಣವರ, ಶ್ರೀ ಟಿ. ಬಿ. ಸಿಂಧೆ, ಶ್ರೀ ಎಸ್. ಎಸ್. ಹಳ್ಳಿ , ಶ್ರೀ ಎಮ್. ಎಸ್. ನೀಲಗುಂದ, ಶ್ರೀ ತುಕಾರಾಮ ಬಿ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿವರ್ಗದವರು ಇದರಲ್ಲಿ ಭಾಗವಹಿಸಿದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದ ಲಾಭವನ್ನು ಪಡೆದುಕೊಂಡರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 