ಶ್ರೀ 108 ಆಚಾರ್ಯ ಧರ್ಮಸೇನ ಮುನಿಗಳ ನಗರ ಪ್ರವೇಶ
ಲೋಕದರ್ಶನ ವರದಿ
ಬೆಳಗಾವಿ.ಡಿ.27: ಜೈನ ಮುನಿಗಳಾದ ಶ್ರೀ. 108 ಆಚಾರ್ಯ ಧರ್ಮಸೇನ ಮತ್ತು ಶ್ರೀ.105 ಕ್ಷುಲ್ಲಕ ಚಂದ್ರಸೇನ ಮುನಿಗಳು ಗುರುವಾರ ಸಾಯಂಕಾಲ ಬೆಳಗಾವಿ ನಗರವನ್ನು ಪ್ರವೇಶ ಮಾಡಿದರು.
ಬೆಳಗಾವಿಯ ಹಿಂದವಾಡಿಯಲ್ಲಿರುವ ಜಿನಮಂದಿರದ ನೂತನೀಕರಣ ಮತ್ತು ಶ್ರೀ. 1008 ಚಂದ್ರಪ್ರಭ,ಆದಿನಾಥ ಮತ್ತು ಭ.ಭರತ ಹಾಗೂ 24 ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಡಿ.30 ರಿಂದ ಜ.3 ರವರೆಗೆ ನಡೆಯಲಿದ್ದು, ಈ ಪಂಚಕಲ್ಯಾಣ ಮಹಾಮಹೋತ್ಸವದ ಸಾನಿಧ್ಯವನ್ನು ಶ್ರಿಗಳು ವಹಿಸಲಿದ್ದಾರೆ.
ಗುರುವಾರ ಸಾಯಂಕಾಲ ಹಿಂದವಾಡಿಯ ಮಹಾವೀರ ಭವನ ಬಳಿ ಜೈನ ಸಮಾಜ ಮುಂಖಡರಿಂದ ಶ್ರೀಗಳಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಶ್ರೀಗಳನ್ನು ವಾದ್ಯಮೇಳದೊಂದಿಗೆ ಹಿಂದವಾಡಿ ಜೈನ ಬಸದಿಯವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿಯ ಕಾಯರ್ಾಧ್ಯಕ್ಷ ಭೂಷಣ ಮಿಜರ್ಿ, ಉಪಾಧ್ಯಕ್ಷ ಶೀತಲ ನಿಲಜಗಿ ಪದಾಧಿಕಾರಿಗಳಾದ ಅಪ್ಪಾಸಾಹೇಬ ಕಟಗೆಣ್ಣವರ, ಸುಹಾಸ ಹುಲಭತ್ತೆ, ಬ್ರಹ್ಮಾನಂದ ನಿಲಜಗಿ, ಸನತಕುಮಾರ ವಿ.ವಿ.ಅಭಯ ಅವಲಕ್ಕಿ, ಸಂತೋಷ ಚಿಪ್ರೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 