ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷರ, ಸದಸ್ಯರ ಆಯ್ಕೆ
ಲೋಕದರ್ಶನ ವರದಿ
ಹಾವೇರಿ 12 : ಹಾವೇರಿ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸ್ಥಾಯಿ ಸಮಿತಿಗೆ ದೀಪಾ ನಿಂಗಪ್ಪ ಅತ್ತಿಗೇರಿ, ಹಣಕಾಸು ಸ್ಥಾಯಿ ಸಮಿತಿಗೆ ಎಸ್.ಕೆ.ಕರಿಯಣ್ಣನವರ, ಸಾಮಾಜಿಕ ನ್ಯಾಯ ಸಮಿತಿಗೆ ಮಾರುತಿ ರಾಮಪ್ಪ ರಾಠೋಡ, ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ ರಮೇಶ ದುಗ್ಗತ್ತಿ, ಕೃಷಿ ಕೈಗಾರಿಕಾ ಸಮಿತಿಗೆ ನೀಲವ್ವ ನಾಗಪ್ಪ ಚವ್ಹಾಣ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತಿ ಐದು ಸ್ಥಾಯಿ ಸಮಿತಿಗಳಿಗೆ ಚುನಾವಣೆ ಜರುಗಿತು.
ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ
ದೀಪಾ ನಿಂಗಪ್ಪ ಅತ್ತಿಗೇರಿ ಹಾಗೂ ಸದಸ್ಯರಾಗಿ ಕೊಟ್ರೇಶಪ್ಪ ರು. ಬಸೇಗಣ್ಣಿ, ಶಶಿಕಲಾ ಕೋಂ. ಪರಮೇಶ ಲಮಾಣಿ , ರಾಜೇಶ್ವರಿ ಕೋಂ. ಯಲ್ಲಪ್ಪ ಕಲ್ಲೇರ, ಸುಮಂಗಲಾ ರವೀಂದ್ರ ಪಟ್ಟಣಶೆಟ್ಟಿ, ಅಬ್ದುಲಮುನಾಫ್ ಬಾ. ಎಲಿಗಾರ, ಗೌರವ್ವ ಕೋಂ. ಭೀಮಪ್ಪ ಶೇತಸನದಿ ಅವರು ಆಯ್ಕೆಯಾಗಿದ್ದಾರೆ.
ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ ಅಧ್ಯಕ್ಷರಾಗಿ ಎಸ್.ಕೆ.ಕರಿಯಣ್ಣನವರ ಹಾಗೂ ಸದಸ್ಯರಾಗಿ ಮಾಲತೇಶ ನಿಂಗಪ್ಪ ಸೊಪ್ಪಿನ, ನೀಲಪ್ಪ ಮಲ್ಲಪ್ಪ ಈಟೇರ, ಪ್ರಕಾಶ ಬಸಪ್ಪ ಬನ್ನಿಕೋಡ, ಶಿವರಾಜ ಡಿ. ಹರಿಜನ, ಮಹದೇವಕ್ಕ ಹೊ. ಗೋಪಾಕ್ಕಳಿ, ಗದಿಗೆವ್ವ ಗುಡ್ಡಪ್ಪ ದೇಸಾಯಿ ಅವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾರುತಿ ರಾಮಪ್ಪ ರಾಠೋಡ ಹಾಗೂ ಸದಸ್ಯರಾಗಿ ಮಂಗಳಗೌರಿ ಅರುಣುಕುಮಾರ ಎಂ.ಎಂ.ಪಿ, ಶಿವಾನಂದ ವಿ. ಕನ್ನಪ್ಪಳವರ, ಮುಮ್ತಜಬಿ ಮೌ. ತಡಸ, ವಿರುಪಾಕ್ಷಪ್ಪ ಕೊಟ್ರಪ್ಪ ಕಡ್ಲಿ, ಸುಮಿತ್ರಾ ಬ. ಪಾಟೀಲ ಹಾಗೂ ರಾಘವೇಂದ್ರ ಮ. ತಹಶೀಲ್ದಾರ ಅವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ ಬ. ದುಗ್ಗತ್ತಿ ಹಾಗೂ ಸದಸ್ಯರಾಗಿ ಏಕನಾಥ ಭೀಮರೆಡ್ಡಿ ಭಾನುವಳ್ಳಿ, ಬಸನಗೌಡ ಹ. ದೇಸಾಯಿ, ಟಾಕನಗೌಡ ಪಾಟೀಲ, ಗಿರಿಜವ್ವ ಹ. ಬ್ಯಾಲದಹಳ್ಳಿ, ಸಿದ್ಧರಾಜ ಮ. ಕಲಕೋಟಿ ಹಾಗೂ ಶಿವರಾಜ ಹ. ಅಮರಾಪೂರ ಅವರು ಆಯ್ಕೆಯಾಗಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೀಲವ್ವ ನಾಗಪ್ಪ ಚವ್ಹಾಣ ಹಾಗೂ ಸದಸ್ಯರಾಗಿ ಲಕ್ಷ್ಮವ್ವ ಮಾರುತಿ ಗೊರವರ, ಶೋಭಾ ಚಂದ್ರಶೇಖರ ಗಂಜಿಗಟ್ಟಿ, ಅನುಸೂಯಾ ಉರ್ಫ ಲಲಿತಾ ಶಿ. ಕುಳೇನೂರು, ಬಿ.ಎಮ್. ಪಠಾಣ, ಸಿದ್ದರಾಜ ಮ. ಕಲಕೋಟಿ ಹಾಗೂ ಸಹನಾ ಶ್ರೀಧರ ದೊಡ್ಡಮನಿ ಅವರು ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಗಳಾಗಿ ಜಿ.ಪಂ.ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿ, ಡಿ.ಆರ್.ಡಿ.ಎ ವಿಭಾಗದ ಯೋಜನಾಧಿಕಾರಿ ಎ.ಟಿ.ಜಯಕುಮಾರ, ಮುಖ್ಯ ಯೋಜನಾಧಿಕಾರಿ ವಿಶ್ವನಾಥ ಮುತ್ತಜ್ಜಿ, ಸಹಾಯಕ ಕಾರ್ಯದಶರ್ಿ ಜಾಫರ ಸುತಾರ್, ಸಹಾಯಕ ಯೋಜನಾಧಿಕಾರಿ ಧರ್ಮರ ಕೃಷ್ಣಪ್ಪ ಕಾರ್ಯ ನಿರ್ವಹಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶಿಲ್ಪಾ ನಾಗ್, ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 