ಅಗ್ನಿವೀರ ಸೇನೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನ
Youth selected for Agniveer Sena felicitated
ಕಾಗವಾಡ, 09 : ನಮ್ಮ ಗ್ರಾಮದ ಯುವಕರು ದೇಶದ ಸೇವೆ ಮಾಡಲು, ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗಿರಿವುದು ಇಡೀ ಗ್ರಾಮವೇ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಜೂಗೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಕಾಸಾಬ ಪಾಟೀಲ್ ಹೇಳಿದರು. ಅವರು ಮಂಗಳವಾರ ದಿ. 09 ರಂದು ತಾಲೂಕಿನ ಜೂಗೂಳ ಗ್ರಾಮ ಪಂಚಾಯಿತಿ ವತಿಯಿಂದ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಗೊಂಡ 3 ಯುವಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಗ್ರಾಮದ ಓಂಕಾರ್ ಸುಂಕೆ ಈತನು ಈಗಾಗಲೇ ತರಬೇತಿ ಮುಗಿಸಿ ಗ್ರಾಮಕ್ಕೆ ಹಿಂದಿರುಗಿದ್ದು ಅದರಂತೆ ಸರ್ವೇಶ್ ದೇಸಾಯಿ ಮತ್ತು ರವೀಂದ್ರ ವಸೇದಾರ ತರಬೇತಿಗೆ ಪಡೆಯಲು ತೆರಳುತ್ತಿದ್ದಾರೆ. ಅವರ ದೇಶ ಸೇವೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ವೇಳೆ ಮುಖಂಡರಾದ ರಾಜು ಪಾಟೀಲ್, ಉದಯ ದೇಸಾಯಿ, ಬಾಬಾಸಾಬ್ ತಾರದಾಳೆ, ಮಹಾದೇವ ಕಾಂಬಳೆ, ನಿತಿನ್ ಪಾಟೀಲ್, ಅವಿನಾಶ್ ಪಾಟೀಲ್, ಪಿಡಿಒ ಶಿಲ್ಪಾ ನಾಯಿಕವಾಡಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 