ಧಾರವಾಡ 25: ಯುವ ಜನಾಂಗವು ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಭಾರತದ ಗಡಿಯಲ್ಲಿ ರಕ್ಷಣೆ ಮಾಡುತ್ತಿರುವ ಯೋಧರು ಕೂಡ ಯುವಜನರಾಗಿದ್ದು, ಅವರನ್ನು ಸ್ಮರಿಸಬೇಕಿದೆ. ಭವ್ಯ ರಾಷ್ಟ್ರದ ನಿಮರ್ಾಣಕ್ಕೆ ಯುವ ಶಕ್ತಿಯ ಪಾತ್ರ ಮಹತ್ತರವಾಗಿದೆ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಅಭಿಪ್ರಾಯಪಟ್ಟರು.
ಅವರು ಧಾರವಾಡದ ಕರ್ನಾ ಟಕ ವಿದ್ಯಾವರ್ಧಕ ಸಂಘವು ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ, ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ ಮತ್ತು ಅಕ್ಕಲಕೋಟೆಯ ಎಲ್ಲ ಕನ್ನಡ ಸಂಘಗಳ ಸಹಕಾರದದೊಂದಿಗೆ ಅನ್ನಛತ್ರ ಮಂಡಳದ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ 8 ನೇ ಮಹಾಮೇಳದ ಸಮಾರೋಪ ಸಮಾರಂಭದಲ್ಲಿ ಹೊರನಾಡು ಕನ್ನಡಿಗರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಿರೀಶ ಜಕಾಪುರೆ ಅವರ ಸಂಪಾದಕತ್ವದಲ್ಲಿ ರಚಿತವಾದ "ಸದಾ ಪ್ರವಹಿಸುವ ಕಥೆಗಳು" ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಯುವಜನತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ದೂರವಿರಬೇಕು. ವಿಶ್ವ ಭಾರತದ ಕಡೆಗೆ ತಿರುಗಿ ನೋಡುವಂತಾಗಿದ್ದು, ಬಲಿಷ್ಠ ರಾಷ್ಟ್ರ ನಿಮರ್ಾಣಕ್ಕೆ ಕೈಜೋಡಿಸುವಂತಾಗಬೇಕು. ಅಲ್ಲದೆ ಓದು ಮತ್ತು ಬರಹದಲ್ಲಿ ತೊಡಗುವುದರಿಂದ ಮನಸ್ಸಿನ ನೆಮ್ಮದಿ ದೊರೆತು ಸಂತೋಷದಿಂದ ಇರುವ ಸಮಾಜ ನಿರ್ಮಾ ಣ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಆದರ್ಶ ಕನ್ನಡ ಬಳಗದ ಖಜಾಂಚಿ ಶರಣಪ್ಪ ಫುಲಾರಿ ಸ್ವಾಗತಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್ ಉಡಿಕೇರಿ ವಂದಿಸಿದರು.
ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡಪರ ಹೋರಾಟಗಾರ ಭೀಮಾಶಂಕರ ಪಾಟೀಲ, ನಾಡೋಜ ಪಿ.ಎಸ್ ಶಂಕರ, ನಿಂಗಣ್ಣ ಕುಂಟಿ, ಶಿವಣ್ಣ ಬೆಲ್ಲದ, ಸದಾನಂದ ಶಿವಳ್ಳಿ, ಶಾಂತೇಶ ಗಾಮನಗಟ್ಟಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ಮನೋಜ ಪಾಟೀಲ, ಲಕ್ಷ್ಮಣ ಬಕ್ಕಾಯಿ, ಸಿದ್ದರಾಮ ಹಿಪ್ಪರಗಿ, ಸಾಹಿತಿ, ಕವಿಗಳಾದ ಮಾತಾರ್ಂಡಪ್ಪ ಎಮ್ ಕತ್ತಿ, ಬೈರನಟ್ಟಿಯ ದೊರೆಸ್ವಾಮಿಮಠದ ಶಾಂತಲಿಂಗ ಮಹಾಸ್ವಾಮಿಗಳು, ಮಲ್ಲಿಕಾಜರ್ುನ ಸಿದ್ದಣ್ಣನವರ ಮಹೇಶ ಕುಲಕರ್ಣಿ , ಡಾ.ಜಿನದತ್ತ ಹಡಗಲಿ, ವೀರಣ್ಣ ಒಡ್ಡೀನ ಉಪಸ್ಥಿತರಿದ್ದರು.