ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯತ್ತ ಆಸಕ್ತಿ ವಹಿಸಿ
Young people are increasingly interested in dairy farming.
ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯತ್ತ ಆಸಕ್ತಿ ವಹಿಸಿ
ರಬಕವಿ-ಬನಹಟ್ಟಿ 02: ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯತ್ತ ಆಸಕ್ತಿ ವಹಿಸಿದರೆ ಆರ್ಥಿಕವಾಗಿ ಸದೃಡ ಹೊಂದಲು ಸಹಕಾರಿಯಾಗುತ್ತದೆಂದು ವಿಜಯಪುರ-ಬಾಗಲಕೋಟೆ ಜಿಲ್ಲಾ ಕೆಎಂಎಫ್ ನಿರ್ದೆಶಕ ಚಂದ್ರಶೇಖರ ಗಿರಮಲ್ಲಪ್ಪ ಆದಬಸಪ್ಪಗೋಳ ಹೇಳಿದರು
ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 2024-25 ನೇ ಸಾಲಿನ ಭೂಮಕ್ಕನವರ ತೋಟದ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯ ಉದ್ಘಾಟಿಸಿ ಮಾತನಾಡಿದರು. ಭಾರತವು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಉಪ ಕಸುಬುಗಳಾದ ಕುರಿ, ಮೀನು ಸಾಕಾಣಿಕೆಯಂತೆಯೆ ಹೈನುಗಾರಿಕೆಯೂ ಕೂಡಾ ಉಪ ಕಸುಬಾಗಿದೆ. ಆದರೆ ಇಂದಿನ ದಿನಗಳಲ್ಲಿ ಹೈನುಗಾರಿಕೆ ಮೂಲ ಉದ್ಯೋಗವಾಗಿ ಪರಿವರ್ತನೆಯಾಗಿದ್ದು ಆರ್ಥಿಕವಾಗಿ ಬಲಿಷ್ಠರಾಗಲು ಅನುಕೂಲವಾಗಿದೆ. ಈ ಭಾಗದ ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ತಾಲೂಕುಗಳಲ್ಲಿ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ, ಈ ಸಂಘವು ಕಳೆದ ಸಾಲಿಗಿಂತ ಹೆಚ್ಚು ಪ್ರಗತಿ ಹೊಂದುವ ಮೂಲಕ 3,87,795 ರೂಗಳನ್ನು ಲಾಭ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ ಹಾಲು ಪೂರೈಕೆದಾರರಿಗೆ ಜೀವನಾಡಿಯಾಗಿ ಮುಂಚೂಣಿಯಲ್ಲಿದೆ. ಸಂಘವು ಇದೇ ರೀತಿ ಹೆಚ್ಚು ಹೆಚ್ಚು ಪ್ರಗತಿಯತ್ತ ಸಾಗಲಿ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹೆಚ್ಚು ಹಾಲು ಪೂರೈಸಿದ ಸದಸ್ಯರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಂಡಳಿಯ ಅಧ್ಯಕ್ಷ ಮಾರುತಿ ಗಣಿ, ಉಪಾಧ್ಯಕ್ಷ ತುಕ್ಕಪ್ಪ ಬೂಮಕ್ಕನವರ, ಸಹಾಯ ವ್ಯವಸ್ಥಾಪಕ ಅಧಿಕಾರಿ ಎಸ್. ಎಸ್. ಅಥಣಿ, ವಿಸ್ತಿರ್ಣಾಧಿಕಾರಿ ಶ್ರೀದೇವಿ ಆದಬಸಪ್ಪಗೋಳ, ಮುಖ್ಯ ಕಾರ್ಯನಿರ್ವಾಹಕ ಬಸಲಿಂಗಪ್ಟ ಬುಮಕ್ಕನವರ, ಮಲ್ಲಪ್ಪ ಗಣಿ, ಸಿದ್ದು ಕಂಚು, ಚನ್ನಮಲ್ಲ ಚಿಂಚಖಂಡಿ, ಶಿವಪ್ಪ ವಾಲಿ, ಬಸವರಾಜ ಗಣಿ, ಮಹೇಶ ಬೂಮಕ್ಕವರ, ಹಣಮಂತ ಮಗದುಮ್, ಕಾಡಯ್ಯ ಕಾಡದೇವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 