ರೋಗ ಮುಕ್ತ ಸಮಾಜಕ್ಕೆ ಯೋಗ ಮುಖ್ಯ: ಜ್ಯೋತಿ ಜಂಬಿಗಿ
Yoga is important for a disease-free society: Jyoti Jambigi
ರೋಗ ಮುಕ್ತ ಸಮಾಜಕ್ಕೆ ಯೋಗ ಮುಖ್ಯ: ಜ್ಯೋತಿ ಜಂಬಿಗಿ
ರಾಣೇಬೆನ್ನೂರು 05: ಇಂದಿನ ಆಧುನಿಕ ಜೀವನ ಶೈಲಿಯ ಬದುಕನ್ನು ಅಳವಡಿಸಿಕೊಂಡಿರುವ ಮಕ್ಕಳಿಗೆ ಮತ್ತು ಅವರ ಶಿಕ್ಷಣ ಪೌಷ್ಟಿಕತೆಯ ಬೆಳವಣಿಗೆಗೆ ನಿತ್ಯ ಯೋಗ ತಾರಕ ಮಂತ್ರವಾಗಿದೆ ಎಂದು ಜಿಲ್ಲಾ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಜ.ಜಂಬಿಗಿ ಹೇಳಿದರು. ಅವರು ಗೆಳೆಯರ ಬಳಗದ ಶಾಲೆಯಲ್ಲಿ ಸ್ಪೋರ್ಟ್ಸ ಅಸೋಸಿಯೇಷನ್ ಏರಿ್ಡಸಿದ್ದ, ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಇಂದು ಮಕ್ಕಳಾದಿಯಾಗಿ ಸರಿಯಾದ ರೀತಿಯ ಪೌಷ್ಟಿಕ ಆಹಾರ ಮತ್ತು ಶ್ರಮರಹಿತ ಜೀವನದಿಂದಾಗಿ ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದ್ದಾರೆ. ಏಕಾಗ್ರತೆ ಮತ್ತು ಆರೋಗ್ಯವಂತ ಬದುಕಿಗೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಂತ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೂರಾರು ವಿದ್ಯಾರ್ಥಿಗಳು, ತಮ್ಮ ಪ್ರದರ್ಶನ ನೀಡಿ ಯೋಗಾಸಕ್ತರ ಮತ್ತು ಸಾರ್ವಜನಿಕರ ಗಮನ ಸೆಳೆದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಶಂಕ್ರಯ್ಯ ಮಠದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೆಳೆಯರ ಬಳಗ ಪ್ರೌಢಶಾಲಾ ಮುಖ್ಯ ಶಿಕ್ಷಕಿ, ಪುಸ್ಪಾ ಕೆರಳಿ, ಯೋಗಸಾಧಕರಾದ ಆದರ್ಶ ನಾಡಿಗ, ಎನ್. ಎಲ್. ಸುಮಲತಾ, ಮತ್ತಿತರರು ಮುಖ್ಯ ಪರಿಕ್ಷಕರಾಗಿ ತಮ್ಮ ಸೇವೆ ಸಲ್ಲಿಸಿದರು.
ಸಂಸ್ಥೆಯ ಉಪಾಧ್ಯಕ್ಷ ವಿನಾಯಕ ಗಡ್ಡದ,ಪುಷ್ಪಾ ಎಂ. ಸೊಲಭಗೌಡ್, ಆರ್. ಬಿ. ಪಾಟೀಲ,ಯಶವಂತ ಕುಮಾರ ಜಿ. ಕೆ, ಪಾಂಡುರಂಗ ಪೂಜಾರ, ಪುಟ್ಟರಾಜು ಚಂಚಿ ಮೊದಲಾದವರು ನಿರ್ಣಾಯಕರಾಗಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 