2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
Year 2025 calendar release ceremony
2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
ಧಾರವಾಡ 30 : 29/01/2025 ರಂದು ಸಾಯಂಕಾಲ 6 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ಧಾರವಾಡದಲ್ಲಿ ಜರುಗಿತು. ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಶಿವಾನಂದ ನಾಗೂರ ಮಾತನಾಡಿ ಲಿಂಗಾಯತ ನೌಕರರ ಸಂಘದ ರೂಪುರೇಷೆಗಳನ್ನು ತಿಳಿಸಿ ಎಲ್ಲರೂ ಸೇರಿ ಬಸವ ತತ್ವಗಳನ್ನು ಅನುಸೋಣ ಎಂದರು. ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ ಮಾಡಿ ಲಿಂಗಾಯತ ಸಮಾಜದ ನೌಕರರು ನೌಕರರಿಗೆ ಸ್ಪಂದಿಸುವುದರ ಜೊತೆಗೆ ಸಮಾಜದ ಸೇವೆಯನ್ನು ಸಹಿತವಾಗಿ ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಇತರರನ್ನು ಸಹಿತವಾಗಿ ಸೇರಿಸಿಕೊಂಡು ಮೇಲು ಕೀಳು ಎನ್ನದೆ ಸಮಾಜದ ಕೆಲಸಗಳನ್ನು ಮಾಡೋಣ ಎಂದು ಹೇಳಿದರು. ಕೆ. ಎಫ್. ಜಾವೂರು ನಿರೂಪಿಸಿದರು, ಮಹೇಶ ಬಾಳಗಿ ಸ್ವಾಗತಿಸಿದರು. ಗುರು ತಿಗಡಿ ವಂದಿಸಿದರು. ಮಂಜುನಾಥ ಅಡವೇರ, ರಮೇಶ ಲಿಂಗದಾಳ, ಮಂಜುನಾಥ ಯಡಳ್ಳಿ, ಚಂದ್ರು ತಿಗಡಿ, ಗೀರೀಶ ಚೌಡಕಿ, ಬಿ ಆರ್ ಪಾಟೀಲ,ಆತ್ಮಾನಂದ ಗದ್ದಿಕೇರಿ. ಪಿ.ಬಿ. ಕುರಬೆಟ್ಟ್, ಎನ್. ಎಸ್. ಕಮ್ಮಾರ ಮತ್ತು ಇತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 