ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ

ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ Worship of the venerable Basavalinga Swamiji

      ಶಿಗ್ಗಾವಿ 04 : ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಅದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಶರಣರು ನುಡಿದಂತೆ ನಡೆದು ತೋರಿದ್ದಾರೆ ಆದ್ದರಿಂದ ಇಂತಹ ಶರಣ ಸಂಸ್ಕೃತಿ ಉತ್ಸವಗಳಲ್ಲಿ ಭಾಗವಹಿಸಿ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹಾವೇರಿ ಹೊಸಮಠದ ಬಸವಲಿಂಗ ಸ್ವಾಮೀಜಿ ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಅಂಗವಾಗಿ ನಡೆದ “33ನೇ ಶರಣ ಸಂಸ್ಕೃತಿ ಉತ್ಸವ-2026” ಮತ್ತು ಪಟ್ಟರಾಜ ಕವಿಗವಾಯಿಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ,  ಶರಣು ಸಂಸ್ಕೃತಿಯಿಂದ ನಾಡಿನ ವಿವಿಧ ರಂಗದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಆದರು ಅಧುನಿಕತೆ ಅಬ್ಬರದಲ್ಲಿ ವಿದೇಶಿ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಮೂಲ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬದುಕು ಅರಿತು ನಡೆಯುವ ಕಡೆ ಮಾರ್ಗದರ್ಶಿಯಾಗಿದೆ ಎಂದರು. 

ಗದಗ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ಕುಮಾರಶಾಸ್ತ್ರಿ ವೆಂಕಟಾಪುರಮಠ ಅವರು " ಪುಟ್ಟರಾಜ ಕವಿ ಗವಾಯಿಗಳ ಜೀವನ ಚರಿತ್ರೆ " ಕುರಿತು ಮಾತನಾಡಿ, ಬಾಲ್ಯದ ಕಣ್ಣು ಕಳೆದು ಕಳೆದುಕೊಂಡ ಪುಟ್ಟರಾಜರು ಮುಂದೆ ಈಡೀ ನಾಡಿಗೆ ಬೆಳಕಾಗಿ ನಿಂತರು. ಸಮಾಜ ಸೇವಾ ಕಾರ್ಯದಲ್ಲಿ ನಿರತರಾದರು. ಸಂಗೀತ, ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದರು. ಶಿಕ್ಷಣ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದಾರೆ ಎಂದರು. 

  ಗುತ್ತಿಗೆದಾರ ಅರ್ಜುನ ಹಂಚಿನಮನಿ ಮಾತನಾಡಿ, ಗುರಿ ಇರಬೇಕು ಹಿಂದೆ ಗುರು ಇರಬೇಕು, ಮಠದಲ್ಲಿ ಶಕ್ತಿ ಇದೆ, ಭಕ್ತಿಯಿದ್ದಲೇ ಯಶಸ್ಸು ಇದೆ, ತಾಯಿ ಮಡಿಲು ತಂದೆ ಹೆಗಲು ಸ್ವರ್ಗಕ್ಕಿಂತ ಹೆಚ್ಚು, ತಂದೆ ತಾಯಿಗಿಂತ ದೊಡ್ಡವರಿಲ್ಲ, ಗೌರವದಿಂದ ಬಾಳಬೇಕಿದೆ ಎಂದರು. 

ವಿರಕ್ತಮಠದ ಬಸವಲಿಂಗ ದೇವರು ಹಾಗೂ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮೀಗಳು ನೇತೃತ್ವ ವಹಿಸಿದ್ದರು, ಗುತ್ತಿಗೆದಾರ ಮಂಜುನಾಥ ಕಾರಡಗಿ, ಪಿಂಜಾರ ಸಮಾಜದ ಅದ್ಯಕ್ಷ ಶರೀಫ ನದಾಫ, ಮೌಲಾಸಾಬ ತಹಶೀಲ್ದಾರ,  ಚಂದ್ರು ಕೊತಂಬ್ರಿ, ದೇವಪ್ಪ ಸೊರಟೂರ, ಪತ್ರಕರ್ತ ಸದಾಶಿವ ಹಿರೇಮಠ ಸೇರಿದಂತೆ ಪಂಡಿತ್ ಪಟ್ಟರಾಜ ಕವಿಗವಾಯಿಗಳ ಕಲಾ ಸಂಸ್ಥೆಯ ಸದಸ್ಯರು, ಸಮಿತಿ ಸದಸ್ಯರು ಇದ್ದರು, ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ಹಾಗೂ ಪ್ರಸಾದ ಸೇವೆಯ ದಾನಿಗಳನ್ನ ಸನ್ಮಾನಿಸಲಾಯಿತು, ಪ್ರೋ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು, ಶಸಾಪ ಅದ್ಯಕ್ಷ ಸಿ ಡಿ ಯತ್ನಳ್ಳಿ ಸ್ವಾಗತಿಸಿದರು.