ನಮ್ಮೂರ ಬಾನುಲಿಯಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ
World Suicide Prevention Day celebrated in Nammura Banuli
ನಮ್ಮೂರ ಬಾನುಲಿಯಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ
ಯಮಕನಮರಡಿ : ಹುಕ್ಕೇರಿ ತಾಲೂಕಿನ ಕರಗುಪ್ಪಿ ಯಲ್ಲಾಪೂರದಲ್ಲಿರುವ ನಮ್ಮೂರ ಬಾನುಲಿ 90.8 ಎಫ್ ಎಂ ಸಮುದಾಯ ರೇಡಿಯೋ ಕೇಂದ್ರದಲ್ಲಿ "ವಿಶ್ವ ಆತ್ಮಹತ್ಯೆ ತಡೆ" ದಿನದ ಅಂಗವಾಗಿ ವಿಶೇಷ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಸುನೀಲ ಜಾಬಗೌಡರ ಹಾಗೂ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸವಿತಾ ತಿಗಡಿ ಅವರು ಆತ್ಮಹತ್ಯೆ ತಡೆ ಕುರಿತಂತೆ ಶ್ರೋತುಗಳಿಗೆ ಮಾಹಿತಿ ಹಂಚಿಕೊಂಡರು.ಸಂದರ್ಶನದಲ್ಲಿ ಅವರು 2024ಹಿ2026್ಘ ಅವಧಿಗೆ ಘೋಷಿಸಲಾದ "ಅಚಿಟಿರಟಿರ ಣಜ ಓಚಿಡಿಡಿಚಿಣತಜ ಠ ಖಣಛಿಜಜ" ಎಂಬ ತ್ರೈವಾರ್ಷಿಕ ಥೀಮ್ ಕುರಿತು ಪ್ರಸ್ತಾಪಿಸಿದರು. ಆತ್ಮಹತ್ಯೆ ಕುರಿತು ನಡೆಯುವ ಸಂವಾದವನ್ನು ಧನಾತ್ಮಕ ದಿಕ್ಕಿಗೆ ತಿರುಗಿಸುವುದು, ಹೀನಾಭಿಪ್ರಾಯಗಳ ಸವಾಲು ಹಾಕುವುದು ಹಾಗೂ ಮಾನಸಿಕ ಬೆಂಬಲ ಮತ್ತು ಕರುಣೆಯುಳ್ಳ ಸಂಭಾಷಣೆಗೆ ಪ್ರೋತ್ಸಾಹ ನೀಡುವುದು ಇದರ ಮುಖ್ಯ ಉದ್ದೇಶವೆಂದು ವಿವರಿಸಿದರು.
ಆತ್ಮಹತ್ಯೆ ಪ್ರಕರಣಗಳ ಏರಿಕೆ, ಸಾಮಾನ್ಯ ಅಪಾಯಗಳು, ನೊಂದ ಮನಸ್ಥಿತಿ ಮತ್ತು ಆತಂಕ, ತ್ವರಿತ ಪತ್ತೆ ಹಾಗೂ ಸಮಾಲೋಚನೆಯ ಅಗತ್ಯತೆ, ದೀರ್ಘಕಾಲದ ಕಾಯಿಲೆಗಳು ಮತ್ತು ಅಂಗವೈಕಲ್ಯಗಳಿಂದ ಉಂಟಾಗುವ ಅಪಾಯ ಕುಟುಂಬ ಸಮುದಾಯ ಬೆಂಬಲದ ಪ್ರಾಮುಖ್ಯತೆ, ಶಾಲೆಗಳು ಕಾಲೇಜುಗಳು ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅಗತ್ಯವಾದ ಸಲಹಾ ವ್ಯವಸ್ಥೆಗಳ ಕುರಿತು ಅವರು ವಿವರಿಸಿದರು. ಜೊತೆಗೆ ಟೆಲಿಮಾನಸ್ ಉಚಿತ ಕೌನ್ಸಿಲಿಂಗ್ ಸೇವೆಯ ಪ್ರಸ್ತುತತೆಯನ್ನೂ ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಈ ಕಾರ್ಯಕ್ರಮವನ್ನು ರೇಡಿಯೋ ಸಿಬ್ಬಂದಿ ಆರ್ ಜೆ ಚೇತನ ನಡೆಸಿಕೊಟ್ಟರು ಹಾಗೂ ಆರ್ ಜೆ ಮೀರಾ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 