ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ವಿಶ್ವ ವಿದ್ಯಾರ್ಥಿ ದಿನ

ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ  ವಿಶ್ವ ವಿದ್ಯಾರ್ಥಿ ದಿನ World Students' Day at CICAB Institute of Engineering and Technology

ವಿಜಯಪುರ : ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ  ವಿಶ್ವ ವಿದ್ಯಾರ್ಥಿ ದಿನವನ್ನು ವಿಜ್ಞಾನಮಯ ಮತ್ತು ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು.  

ಈ ದಿನವನ್ನು ಭಾರತದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಹಾಗೂ ಯುವಜನತೆಗೆ ಪ್ರೇರಣಾದಾಯಕ ವ್ಯಕ್ತಿತ್ವರಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಅದ್ದೂರಿಯಾಗಿ  ಆಚರಿಸಲಾಯಿತು. ಕಾರ್ಯಕ್ರಮವನ್ನು ಕೆಪೊಟಿಸಿಎಲ್ ನ ನಿವೃತ್ತ ಇಂಜಿನಿಯರಾದ ಎನ್‌. ಎಂ ಖಾಜಿ ಉದ್ಘಾಟಿಸಿ ಮಾತನಾಡಿದರು.  

ಅವರು ತಮ್ಮ ಭಾಷಣದಲ್ಲಿ ಡಾ. ಕಲಾಂ ಅವರ ಜೀವನ, ಅವರ ಸರಳತೆ, ಶ್ರಮ ಹಾಗೂ ದೇಶದ ಪ್ರಗತಿಗಾಗಿ ಅವರ ಕನಸುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಹೇಳಿದರು. “ಡಾ. ಕಲಾಂ ಅವರ ಜೀವನವು ವಿದ್ಯಾರ್ಥಿಗಳಿಗೆ ಶ್ರದ್ಧೆ, ಶಿಸ್ತು ಮತ್ತು ಶ್ರಮದ ನಿಜವಾದ ಪಾಠ ನೀಡುತ್ತದೆ” ಎಂದು ಅವರು ತಿಳಿಸಿದರು.ವಿದ್ಯಾರ್ಥಿಗಳು ಡಾ. ಕಲಾಂ ಅವರ ಪ್ರಸಿದ್ಧ ವಾಕ್ಯ  "ಕನಸು, ಕನಸು, ಕನಸು ಹಿ ಕನಸುಗಳು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ, ಆಲೋಚನೆಗಳು ಕೃತ್ಯವಾಗಿ ಪರಿಣಮಿಸುತ್ತವೆ." ಅನ್ನು ಸ್ಮರಿಸಿ, ತಮ್ಮ ಜೀವನದಲ್ಲೂ ಅದನ್ನು ಅನುಸರಿಸುವುದಾಗಿ ಪ್ರತಿಜ್ಞೆ ತೆಗೆದುಕೊಂಡರು.ಎಐಎಂಎಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬೆನಜೀರ್ ಮುಂತೆಸಿರ್ ಮಾತನಾಡಿ ನೀವು ಸರಿಯಾದ ದಿಕ್ಕಿನಲ್ಲಿ ನಡೆದುಕೊಂಡರೆ, ದೇಶವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಆದರೆ ನೀವು ಈಗಲೇ ತಪ್ಪು ದಿಕ್ಕಿಗೆ ತಿರುಗಿದ್ದರೆ, ದೇಶದ ದಿಕ್ಕೇ ಬದಲಾಗುತ್ತದೆ. ಆದ್ದರಿಂದ ನೀವು ನಿಜವಾಗಿಯೂ ವಿಶ್ವಕ್ಕೆ ಆದರ್ಶಮೂರ್ತಿ ಆಗಬೇಕೆಂದಿದ್ದರೆ, ಮೊದಲು ನೀವೇ ಆದರ್ಶವಾಗಬೇಕೆಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಾದವರು ಸರಿಯಾದ ದಿಕ್ಕಿನಲ್ಲಿ ನಡೆದು ಅವರ ಆದರ್ಶಗಳನ್ನು ಬೆಳೆಸಿ ಕೊಳ್ಳ ಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಸ ಪ್ರಶ್ನೆ  ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸೈಯದ್ ಅಬ್ಬಾಸ್ ಅಲಿ, ಪ್ರೊ. ಆಪ್ರಿನ್ ಮುಜಾವರ್, ಪ್ರೊ. ಉಜಮಾ ಸಟ್ಟೆಕರ್, ಪ್ರೋ. ಆರಿಪ್ ಮಕಾಂದಾರ,ಪ್ರೊ. ರೇಖಾ ಬಿರಾದಾರ, ಪ್ರೊ. ರೋಹಿಣಿ ಪಾಟೀಲ, ಮತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ಜಿಜ್ಞಾಸೆ ಮತ್ತು ದೇಶಾಭಿಮಾನವನ್ನು ಮೂಡಿಸಿತು.