ವಿಶ್ವ ದಾಸೋಹ ದಿನಾಚರಣೆ ನಿಮಿತ್ಯ: ಮೂರು ದಿನಗಳ ಕಾಲ ದಾಸೋಹ ಹಾಗೂ ಭಕ್ತ ಹಿತಚಿಂತನಾ ಸಭೆ ಹಾಗೂ ವಿವಿಧ ಕಾರ್ಯಕ್ರಮಗಳು
World Slavery Day: Three-day slave and devotee welfare meeting and various programs
ಮುದ್ದೇಬಿಹಾಳ: ವಿಶ್ವ ದಾಸೋಹ ದಿನಾಚರಣೆ ನಿಮಿತ್ಯ ಪ್ರಭುಗೌಡ ದೇಸಾಯಿ ಶ್ರೀ ಜನಕಲ್ಯಾಣ ಸೇವಾ ಚಾರಿಟೇಬಲ್ ಟ್ರಸ್ಟ ವತಿಯಿಂದ ಹೆಸರಾಂತ ಜಾನಪದ ಕಲಾವಿಧ ದಿ, ಚನ್ನಣ್ಣ ದೇಸಾಯಿ ಸ್ಮರಣಾರ್ಥ ಜ19, 20, 21 ರಂದು ಮೂರು ದಿನಗಳ ಕಾಲ ದಾಸೋಹ ಹಾಗೂ ಭಕ್ತ ಹಿತಚಿಂತನಾ ಸಭೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು. ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಲಿಂ. ಹಾನಗಲ್ಲ ಕುಮಾರಸ್ವಾಮಿಗಳು, ತುಮಕೂರಿನ ಲಿಂ. ಡಾ.ಶಿವಕುಮಾರ ಸ್ವಾಮಿಗಳು, ವಿಜಯಪುರದ ಲಿಂ. ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಮಡಿಕೇಶ್ವರದ ಲಿಂ. ಚನ್ನಣ್ಣ ದೇಸಾಯಿ ಇವರ ಸ್ಮರಣಾರ್ಥ ಇಂತಹ ದಾಸೋಹ ಹಾಗೂ ಭಕ್ತ ಚಿಂತನಾ ಸಭೆ ಹಾಗೂ ಸಾಣೆಹಳ್ಳಿ ಕಲಾ ತಂಡದವರಿಂದ ನಾಟಕೋತ್ಸವ ಹೀಗೆ ಅನೇಕ ಸಾಮಾಜಕ್ಕೆ ಉತ್ತಮ ಸಂದೇಶ ನೀಡುವ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮಗಳನ್ನು ನಡೆಸಲು ತಿರ್ಮಾನಿಸಿದೆ.
ಸಧ್ಯ ಪ್ರಸ್ತುತ ಈ ಬಾರಿ ವಿಶೇಷ ಹಾಗೂ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪದ ಕಲಾವಿಧರಾದ ಚನ್ನಣ್ಣ ದೇಸಾಯಿಯವರು ಮೂಲತಃ ಕೃಷಿಕರಾಗಿ ಮಾತ್ರವಲ್ಲದೆ ಜಾನಪದ ಕಲೆ ಹಾಗೂ ರಂಗಭೂಮಿಯ ಕಲೆಯ ಜತೆಗೆ ದಾಸೋಹ ಪರಂಪರೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಬದುಕಿನಲ್ಲಿ ಉತ್ತಮ ಸಜ್ಜನ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಬೆಳೆದುಬಂದವರು. ಸಧ್ಯ ಪ್ರಭುಗೌಡ ದೇಸಾಯಿಯವರು ತಮ್ಮ ತಂದೆಯ ಆದರ್ಶಗಳನ್ನೇ ನೆನೆಪಿಸಿಕೊಂಡು ಅವರ ದಾರಿಯಲ್ಲಿ ಮುನ್ನಡೆದು ತಮ್ಮ ತಂದೆಯವರ ಸ್ಮರಣಾರ್ಥ ಉಚಿತ ದಾಸೋಹ ಹಾಗೂ ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂರುದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಹಾಗೂ ಮುಖಂಡರುಗಳ ವಯಕ್ತಿಕ ವೈಭವಿಕರಣವಾಗಲಿ ಅಥವಾ ಹೊಗಳಿಕೆ ಸೇರಿದಂತೆ ಸ್ವ-ಇಚ್ಛಾಸಕ್ತಿ ಇರುವದಿಲ್ಲ.
ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರಲಿದ್ದು, ಪ್ರತಿಯೊಬ್ಬರೂ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಜಿಲ್ಲಾ ಭಾಜಪಾ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು ಮಾತನಾಡಿ, ಹೆತ್ತ ತಂದೆ ತಾಯಿಯರನ್ನೂ ವೃದ್ಧಾಶೃಮಕ್ಕೆ ಬಿಟ್ಟುಹೋಗುವ ಇಂದಿನ ಕಾಲಘಟ್ಟದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರು ತಮ್ಮ ತಂದೆಯವರ ಪುಣ್ಯಸ್ಮರಣೆಯನ್ನು ಕೇವಲ ಒಂದು ತಾಸು ಅಥವಾ ಒಂದು ದಿನಕ್ಕೆ ಸೀಮಿತಗೊಳಿಸದೇ, ಪರಮ ಪೂಜ್ಯರ ಪುಣ್ಯ ಸ್ಮರಣೆಯೊಂದಿಗೆ ಆಚರಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆತನದ ಘನತೆ ಎತ್ತಿ ಹಿಡಿದಿದ್ದಾರೆ ಮಾತ್ರವಲ್ಲದೇ ಯುವ ಪಿಳಿಗೆಗಳಿಗೆ ಮಾದರಿಯಾಗಿದ್ದಾರೆ ನಿಜಕ್ಕೂ ಅವರ ಕಾರ್ಯ ಶ್ಲಾಘನೀಯ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜ19 ರಿಂದ ಪುಣ್ಯ ಸ್ಮರಣೋತ್ಸವ, ಭಕ್ತ ಹಿತ ಚಿಂತನಾ ಸಭೆ, ವಿಶ್ವ ದಾಸೋಹ ದಿನಾಚರಣೆ, ರಾಷ್ರೀಯ ನಾಟಕೋತ್ಸವ, ವಿದ್ಯಾರ್ಥಿಗಳಿಗೆ ಸನ್ಮಾನ, ಪೌರಕಾರ್ಮಿಕರಿಗೆ, ಹಿರಿಯರಿಗೆ ಗೌರವ ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿವೆ. ಅರ್ಥಪೂರ್ಣವಾಗಿರುವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಕೋರಿದರು. ಕಸಾಪ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ ಅವರು ಮಾತನಾಡಿ ಇಂತಹ ಮಾದರೀಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪ್ರಭುಗೌಡ ದೇಸಾಯಿಯವರ ಜೊತೆ ನಾವೆಲ್ಲರೂ ಸದಾ ಇರುತ್ತೇವೆ ಎಂದರು. ಕಾರ್ಯಕ್ರಮಗಳ ಆಯೋಜಕರಾದ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ,
ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿಗಳು, ಮಸೂತಿಯ ಪ್ರಭುಕುಮಾರ ಮಹಾಸ್ವಾಮಿಗಳು, ಗುಳೇದಗುಡ್ಡದ ಕಾಶಿನಾಥ ಮಹಾಸ್ವಾಮಿಗಳು, ಪಡೇಕನೂರದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಕುಂಟೋಜಿಯ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಮುಧೋಳದ ಖ್ಯಾತ ಶಸ್ತ್ರಚಿಕಿತ್ಸಕರಾದ ಶಿವಾನಂದ ಕುಬಸದ, ವಿಜಯಪುರದ ಡಿವೈಎಸ್‌ಪಿ ಬಸವರಾಜ ಎಲಿಗಾರ, ವಿಜಯಪುರದ ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಹಾಂತೇಶ ಬಿರಾದಾರ, ರಾಜ್ಯ ಸೌಹಾರ್ದ ಸಹಕಾರಿ ಮಹಾ ಮಂಡಳಿಯ ನಿರ್ದೇಶಕರಾದ ರಾಮನಗೌಡ ಪಾಟೀಲ ಮತ್ತು ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋದ್ದಾರ ಇವರುಗಳಿಗೆ ಸೇರಿದಂತೆ ಪೌರ ಕಾರ್ಮಿಕರಿಗೆ ಮತ್ತು ಹಿರಿಯರಿಗೆ ಗೌರವಿಸುತ್ತಿದ್ದೇವೆ.
ಹಾಗಾಗಿ ಎಲ್ಲ ಬಂಧುಗಳು ಭಾಗಿಯಾಗಿವಂತೆ ಮನವಿ ಮಾಡಿಕೊಂಡರು.ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವಿರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪ್ರಮುಖರಾದ ಮುತ್ತು ರಾಯಗೊಂಡ, ದೆವೇಂದ್ರ ವಾಲಿಕಾರ, ರಾಮನಗೌಡ ಶಿಕಳವಾಡಿ, ಅಮರೇಶ ಗೋಳಿ, ಸತೀಶ ಓಸ್ವಾಲ, ಸತೀಶ ಕುಲಕರ್ಣಿ, ಬಸವರಾಜ ನಾಲತವಾಡ, ಬಸವರಾಜ ಕೋರಿ, ರಾಜುಗೌಡ ಗೌಡರ, ಸಿ.ಪಿ.ಸಜ್ಜನ, ಶಿವು ದಡ್ಡಿ ವಕೀಲರು, ಸುನೀಲ ಇಲ್ಲೂರ, ಎಂ.ಡಿ.ಕುಂಬಾರ ವಕೀಲರು,ಅರವಿಂದ ಹೂಗಾರ ಪ್ರಕಾಶ ಹೂಗಾರ, ಬಾಪುಗೌಡ ಪಾಟೀಲ, ಭಗವದ್ಗೀತಾ ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ ಸೇರಿದಂತೆ ವೀರಶೈವ ಲಿಂಗಾಯತ ಸಮಾಜ, ಚಿನ್ಮಯ ಜೆ.ಸಿ ಗೆಳೆಯರ ಬಳಗ, ಹಸಿರು ತೋರಣ ಗೆಳೆಯರ ಬಳಗ, ಮನೆಯಲ್ಲಿ ಮಹಾಮನೆ ಬಳಗದವರು ಭಾಗಿಯಾದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 