ವಿಶ್ವ ಜನಸಂಖ್ಯಾ ದಿನಾಚರಣೆ


ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.20: ವಿಪರೀತ ಜನಸಂಖ್ಯೆಯಿಂದ ನಾನಾ ರೀತಿಯ ಸಮಸ್ಯೆಗಳು ಎದುರಿಸುವಂತಾಗಿದೆ ಇದರಿಂದ ಜನಸಂಖ್ಯಾ ಸ್ಫೊಟ ತಡೆಯಲು ಕುಟುಂಬ ಯೋಜನೆ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕು ಎಂದು ತಾಲೂಕು ವೈಧ್ಯಾಧಿಕಾರಿ ಸುಲೋಚನಾ ತಿಳಿಸಿದರು.

ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಬಳ್ಳಾರಿ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ,ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಂಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಟುಂಬ ಯೋಜನೆಯಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗಲಿದೆ ಕುಟುಂಬದಲ್ಲಿ ಗಂಡು ಅಥವಾ ಹೆಣ್ಣಾಗಲಿ ಎರಡು ಮಕ್ಕಳು ಸಾಕು ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಆಶಾ ಕಾರ್ಯಕರ್ತರ ಪಾತ್ರ ಬಹು ಮುಖ್ಯವಾಗಲಿದೆ ಸಕರ್ಾರದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು ಮಕ್ಕಳನ್ನು ಪಡೆಯುವುದರಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಮತ್ತು ಒಂದು ಮಗುವಿನಿಂದ ಇನ್ನೊಂದು ಮಗು ಪಡೆಯುವಲ್ಲಿ ಕನಿಷ್ಟ ಮೂರು ವರ್ಷಗಳ ಅಂತರ ವಿದ್ದರೆ ಮಕ್ಕಳ ಪೋಷಣೆಯಲ್ಲಿ ತೊಂದರೆಯಾಗುವುದಿಲ್ಲ ಮಕ್ಕಳ ಅಂತರ ಕಾಪಾಡಿಕೊಳ್ಳುವ ಛಾಯಾ ಮಾತ್ರೆ ಹಾಗೂ ಕಾಪರ್ ಟಿ ಗಳನ್ನು ಬಳಸುವುದರಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯ ಇಲ್ಲದಿದ್ದರೆ ನಿಯಂತ್ರಣ ಕಷ್ಠಸಾಧ್ಯವೆಂದರು.

ನಂತರ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾದ ನಾಗರತ್ನಮ್ಮ ಮಾತನಾಡಿ ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಯೋಜನಗಳ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವುದರ ಜೊತೆಗೆ ಸಮಾಜದಲ್ಲಿ ಮಹಿಳೆಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಜೊತೆಗೆ ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ವಿರಬೇಕು ಬೇಡದ ಗರ್ಭಧಾರಣೆ ತಡೆಗೆ ಅಗತ್ಯವಾದ ಶಿಕ್ಷಣದ ಕೊರತೆ ಇದ್ದು ಸಮರ್ಪಕ ಮಾಹಿತಿ ನೀಡುವಂತಹ ಕೆಲಸಗಳನ್ನು ಸಕರ್ಾರ ಹಾಗೂ ಆಶಾ ಕಾರ್ಯಕತರ್ೆಯರು ಮಾಡಬೇಕಾಗಿದೆ ಎಂದರು.

ಮೈತ್ರಿ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಜಿ.ಲಕ್ಷ್ಮೀಪತಿ ಮಾತನಾಡಿ ಜನಸಂಖ್ಯ ನಿಯಂತ್ರಣಕ್ಕೆ ಕುಟುಂಬ ಯೋಜನೆಗಳು ಹಾಗೂ ವಿವಾಹಿತ ದಂಪತಿಗಳಿಬ್ಬರು ಕುಟುಂಬ ನಿಯಂತ್ರಣ ವಿಧಾನಗಳನ್ನು ಈಗಿನ ಕಾಲದ ಮಕ್ಕಳಿಗೆ ಶಿಕ್ಷಣ ಬಹು ಮುಖ್ಯವಾಗಿದೆ ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಾಗ ಆ ಕುಟುಂಬ ಬಡತನ ಅನುಭವಿಸಬೇಕಾಗುತ್ತದೆ ಇದರಿಂದ ಮಕ್ಕಳ ವಿಧ್ಯಾಭ್ಯಾಸ ಕೊರತೆ ಉಂಟಾಗಿ  ಕಷ್ಟಪಡಬೇಕಾಗುತ್ತದೆ ಅದಕ್ಕಾಗಿ ಕುಟುಂಬ ಸಂಖ್ಯೆ ಕಡಿಮೆ ಮಾಡಿಕೊಂಡಾಗ ಜೀವನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಉತ್ತಮ ನಾಗರೀಕರನ್ನಾಗಿ ಮಾಡಬಹುದು. 

ಧರ್ಮಸ್ಥಳದ ಸಂಘದ ಸಮನ್ವಯಾಧಿಕಾರಿ ಸಿದ್ದಲಿಂಗಮ್ಮ ಮಾತನಾಡಿ ಹೆಚ್ಚು ಜನಸಂಖ್ಯೆಯಿಂದ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಕುಟುಂಬದಲ್ಲಿ ಸಮತೋಲನೆ ಕಾಪಾಡಿಕೊಂಡಿರಬೇಕು ಲಿಂಗ ತಾರತಮ್ಯ ಮಾಡದಂತೆ ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಲು ಜನಸಂಖ್ಯೆಯನ್ನು ನಿಯಂತ್ರಣದ ಅಗತ್ಯವಾಗಿದೆ ಹಾಗೂ ಜನಸಂಖ್ಯ ನಿಯಂತ್ರಣಕ್ಕೆ ಸಂಭಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳನ್ನು ಸರಕಾರ ಅನುಮೋದಿಸಿದೆ ಇದರ ಮಹತ್ವವನ್ನು ತಿಳಿದುಕೊಂಡು ಮುಂಬರುವ ಸಮಸ್ಯೆಗಳನ್ನು ಇಂದೇ ಅರಿತುಕೊಳ್ಳಬೇಕೆಂದರು.

ಈ ವೇಳೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಕೊಚಾಲಿ ಸುಶೀಲಾ ಮಂಜುನಾಥ,ತಾಲೂಕು ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಶಂಕರ್ ನಾಯ್ಕ್,ವೈಧ್ಯಾಧಿಕಾರಿ ಲಕ್ಷಣ,ಡಾ.ಎಲ್.ಹೆಚ್.ಹೊಳಗುಂದಿ,ಆಸ್ಪತ್ರೆಯ ಸಿಬ್ಬಂದಿ,ಆಶಾ ಕಾರ್ಯಕತರ್ೆಯರು, ಧರ್ಮಸ್ಥಳ ಸಂಘದ ಸದಸ್ಯೆಯರು ಹಾಗೂ ಸಾರ್ವಜನಿಕರು ಇನ್ನು ಮುಂತಾದವರು ಉಪಸ್ಥಿತರಿದ್ದರು.