ಯಮಕನಮರಡಿಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ
World Human Rights Day celebrated at Yamakanamardi
ಯಮಕನಮರಡಿ, 10 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಯಿತು. ಎಸ್. ಆರ್.ತಬರಿ ಇವರು ಕಾರ್ಯಕ್ರಮ ನಿರೂಪಿಸುತ್ತ ಮಾತನಾಡಿ ತಮ್ಮ ಪ್ರಾಸ್ತಾವಿಕ ನುಡಿಗಳನ್ನು ನುಡಿಯುತ್ತ ಪ್ರತಿ ವರ್ಷ ಡಿಸೆಂಬರ್ 10ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
1948 ರಲ್ಲಿ ವಿಶ್ವ ಸಾಮಾನ್ಯ ಸಭೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ ಮಾಡಿದ್ದು ಅಂದಿನಿಂದ ಪ್ರತಿವರ್ಷ ಡಿಸೆಂಬರ 10 ನೇ ತಾರೀಖಿನಂದು ವಿಶ್ವದಾದ್ಯಂತ ಈ ದಿನ ಆಚರಿಸಲಾಗುತ್ತದೆ. ಇದು ಜನಾಂಗ. ಬಣ್ಣ. ಧರ್ಮ. ಲಿಂಗ. ಭಾಷೆ. ರಾಜಕೀಯ ಅಥವಾ ಇತರ ಅಭಿಪ್ರಾಯ ರಾಷ್ಟ್ರೀಯ ಮೂಲ ಆಸ್ತಿ ಹುಟ್ಟು ಅಥವಾ ಇನ್ಯಾವುದೇ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರಿಗೂ ಇರುವ ಮೂಲಭೂತ ಹಕ್ಕುಗಳ ಮಹತ್ವವನ್ನು ಸಾರುತ್ತದೆ. ಮಾನವ ಹಕ್ಕುಗಳ ಸಾಮಾನ್ಯ ಉದ್ದೇಶ ಮಾನವನಿಗೆ ಇರುವ ಸ್ವಾತಂತ್ರ ಮತ್ತು ಹಕ್ಕುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಭಾರತ ಸಂವಿಧಾನವು ಕೂಡ ಭಾರತದ ನಾಗರಿಕಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದ್ದು ಅವುಗಳೆಂದರೆ 1.ಸಮಾನತೆಯ ಹಕ್ಕು ಆರ್ಟಿಕಲ್ (14-18.).2 ಸ್ವಾತಂತ್ರ್ಯದ ಹಕ್ಕು ಆರ್ಟಿಕಲ್ (19-22.)3. ಶೋಷಣೆಯ ವಿರುದ್ಧ ಹಕ್ಕು ಆರ್ಟಿಕಲ್(23-24).4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು(25-28).5 ಸಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಆರ್ಟಿಕಲ್ (29-30.)6. ಸಂವಿಧಾನಾತ್ಮಕ ಪರಿಹಾರ ಹಕ್ಕು ಆರ್ಟಿಕಲ್( 32.) ಒಳಗೊಂಡಿವೆ.
ಅದರಂತೆ ಹಕ್ಕುಗಳಂತೆ ನಾಗರಿಕರಿಗೆ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ ಸಂವಿಧಾನಕ್ಕೆ ಬದ್ಧರಾಗಿರಬೇಕು ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಪಾಲಿಸುವುದು.ದೇಶವನ್ನು ರಕ್ಷಿಸುವುದು. ಸಂಸ್ಕೃತಿಯನ್ನು ರಕ್ಷಿಸುವುದು. ಪರಿಸರ ಸಂರಕ್ಷಣೆ ಶ್ರೇಷ್ಠತೆಗಾಗಿ ಶ್ರಮಿಸುವುದು.ಶಿಕ್ಷಣದ ಅವಕಾಶ ಹೀಗೆ ಹಲವು ಮೂಲಭೂತ ಕರ್ತವ್ಯಗಳಿವೆ. ವಿಷಯಗಳನ್ನು ತಿಳಿಸಿ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷ್ಯ ಸ್ಥಾನವನ್ನು ಪ್ರಾಚಾರ್ಯರು ವಹಿಸಿಕೊಂಡಿದ್ದರು ಬಿ ಬಿ ಕೊಡ್ಲಿ ಕಾರ್ಯಕ್ರಮ ಅಧಿಕಾರಿಗಳು ಎಲ್ಲರನ್ನು ವಂದಿಸಿದರು .. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 