ವಿಶ್ವ ಗ್ಲಾಕೋಮಾ ಸಪ್ತಾಹ..! ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಥಾನ್ ಆಯೋಜನೆ..!
World Glaucoma Week..! Mini marathon organized for glaucoma awareness..!
ಲೋಕದರ್ಶನ ವರದಿ
ಕಾಗವಾಡ 06 : ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಮಾರ್ಚ ಮೊದಲ ವಾರವನ್ನು ವಿಶ್ವ ಗ್ಲಾಕೋಮಾ ಸಪ್ತಾಹವೆಂದು ಘೋಷಿಸಿದ್ದು, ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ ಮತ್ತು ಭಾರತಿ ವಿದ್ಯಾಪೀಠ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.01 ರಂದು ಗ್ಲಾಕೋಮಾ ಸಪ್ತಾಹದ ಅಂಗವಾಗಿ ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಾಥಾನ ಆಯೋಜಿಸಲಾಗಿತ್ತು.
ಭಾರತಿ ವಿದ್ಯಾಪೀಠದ ಡಿನ್ ಡಾ. ನೀತೀನ ಮುದಿರಾಜ ಮ್ಯಾರಥಾನ್ ಉದ್ಘಾಟಿಸಿದರು. ಸುಮಾರು 300 ಜನ ಭಾಗವಹಿಸಿದ್ದ ಮ್ಯಾರಥಾನ್ವು ಭಾರತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜಿನಿಂದ ವಾಲಚಂದ ಕಾಲೇಜಿನ ವರೆಗೆ ಸಾಗಿ, ಮರಳಿ ಭಾರತಿ ವಿದ್ಯಾಪೀಠಕ್ಕೆ ಸುಮಾರು 5 ಕೀ.ಮಿಗಳ ವರೆಗೆ ನಡೆಯಿತು.
ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಅಧ್ಯಕ್ಷ ಡಾ. ಶರದ ಭೋಮಜ ಮ್ಯಾರಾಥಾನ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡುತ್ತ, ಗ್ಲಾಕೋಮಾ ಇದು ಅತ್ಯಂತ ಅಪಾಯಕಾರಿ ಕಣ್ಣಿನ ಕಾಯಿಲೆಯಾಗಿದ್ದು, ನಿಯಮಿತ ಕಣ್ಣಿನ ತಪಾಸಣೆ ಮತ್ತು ತಜ್ಞ ನೇತ್ರ ವೈದ್ಯರ ಸಲಹೆಯೊಂದಿಗೆ ಕಣ್ಣುಗಳ ರಕ್ಷಣೆ ಮಾಡಬಹುದಾಗಿದೆ ಎಂದ ಅವರು, ಕಣ್ಣಿನ ಅನೇಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.
ಸಾಂಗಲಿಯ ಹೆಸರಾಂತ ಗ್ಲಾಕೋಮಾ ತಜ್ಞೆ ಡಾ. ಸಂಗೀತಾ ಮಲಾನಿ ಮಾತನಾಡಿ, ಗ್ಲಾಕೋಮಾದ ಅಪಾಯಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಕಾರ್ಯದರ್ಶಿ ಡಾ. ಅರ್ಚನಾ ಬಿರಾದಾರ, ಖಜಾಂಚಿ ಡಾ. ಅಭಿನಂದನ ಪಾಟೀಲ ಸೇರಿದಂತೆ ಸಾಂಗಲಿ ಜಿಲ್ಲೆಯ ಎಲ್ಲ ಕಣ್ಣಿನ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ವೈದ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 