ನ.15 ರಿಂದ ಡಿ.7 ರವರೆಗೆ ಬಸವಕೇಂದ್ರದ ವತಿಯಿಂದ ವಿಶ್ವ ಬಸವ ಧರ್ಮ ಪ್ರವಚನ

ನ.15 ರಿಂದ ಡಿ.7 ರವರೆಗೆ ಬಸವಕೇಂದ್ರದ ವತಿಯಿಂದ ವಿಶ್ವ ಬಸವ ಧರ್ಮ ಪ್ರವಚನ World Basava Dharma Pravachana by Basava Kendra from Nov. 15 to Dec. 7

ಹುಬ್ಬಳ್ಳಿ 12: ವಿಶ್ವಬಸವ ಧರ್ಮ ಪ್ರವಚನ ಕೆರೆಹಳ್ಳ ಬಾವಿಗಳು ಮೈದೆಗೆದರೆ, ಗುಳ್ಳೆಗೊರಜೆ ಚಿಪ್ಪುಗಳ ಕಾಣಬಹುದು, ವಾರಿಧಿಯು ಮೈದೆರೆದರೆ ಮುತ್ತು-ರತ್ನಂಗಳ ಕಾಣಬಹುದು, ಕೂಡಲಸಂಗನ ಶರಣರು, ಮನದೆರೆದು ಮಾತನಾಡಿದರೆ ಲಿಂಗವಕಾಣಬಹುದು.  ಮನುಷ್ಯ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಸಿಲುಕಿ ತೊಂದರೆ ತಾಪತ್ರಯಗಳಿಗೆ ಈಡಾಗಿದ್ದಾನೆ. ಮನುಷ್ಯನ ಸಹಜ ಬದುಕಿಗೆ ಕುಂದು ಉಂಟಾಗಿದೆ. ಇಂದಿನಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡದಿಂದ ಮಾನವರ ಬದುಕು ಡೋಲಾಯ ಮಾನವಾಗಿದೆ.   ಮೊಸ-ವಂಚನೆ, ದ್ವೇಷ-ಅಸೂಹೆ, ಅನೀತಿ-ಅನ್ಯಾಯ, ಸಾವು-ನೋವು, ಮೊದಲಾದವುಗಳು ತುಂಬಿ ತುಳುಕುತ್ತಿರುವ ಇಂದಿನ ಅಂಧಮಯದಿನ ಮಾನದಲ್ಲಿ ಬೆಳಕಾಗಿ ತೋರುತ್ತಿರುವುದು ಶರಣತತ್ವ. ಶರಣರ ವಿಚಾರಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಮನುಷ್ಯ ಧರ್ಮದತ್ತ್ತ ವಾಲುವುದು. 12ನೇ ಶತಮಾನದಶರಣರು ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿದರು ಮಾತ್ರವಲ್ಲ ಅವರು ಮಾನಸಿಕ ನೆಮ್ಮದಿಗೆ ಬೇಕಾದ ತನುಶುಚಿ, ಮನಶುಚಿ, ಭಾವಶುಚಿ ಮಾರ್ಗಗಳನ್ನು ತೋರಿದರು. ನುಡಿದಂತೆ-ನಡೆದುದು ಶರಣರ ಹೆಗ್ಗಳಿಕೆ.  

ಬಸವ ಪ್ರಣೀತ ಲಿಂಗಾಯತ ಧರ್ಮ ಒಂದು ವಿಶ್ವಧರ್ಮ, ಸರ್ವರೂ ಆಚರಿಸ ಬಹುದಾದ ಸರಳ, ಸಹಜಧರ್ಮ. ಕಾಯಕ ದಾಸೋಹದ ಸಹಜ ಪ್ರಧಾನ ಧರ್ಮ. ಏಕದೇವೋಪಾಸನೆ ಧರ್ಮ. ದೇಹವೇ ದೇವಾಲಯವನ್ನಾಗಿ ಮಾಡಿಕೊಂಡು ದೇವರನ್ನು ತನ್ನೋಳಗೆ ಅನುಭವಿಸುವ ಧರ್ಮ. ತನುಶುಚಿ, ಮನಶುಚಿ, ಭಾವಶುಚಿ ಗೊಳ್ಳಬೇಕಾದರೆ ಶರಣರತತ್ವ ಚಿಂತನೆ ಅತ್ಯವಶ್ಯ. ಶರಣರ ವಚನಗಳಲ್ಲಿರುವ ತತ್ವಗಳನ್ನು ಜನರಿಗೆ ತಲುಪಿಸಲು ಹುಬ್ಬಳ್ಳಿಯ ಬಸವಕೇಂದ್ರ ಹಲವು ಹತ್ತುಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನೆಯಲ್ಲಿ ಮಹಾಮನೆಯ ಮೂಲಕ ಒಂದೊಂದು ಮನೆಯಲ್ಲಿ ಶರಣರ ವಚನಗಳ ಚಿಂತನೆ ಮಾಡಲಾಗುತ್ತಿದೆ. ಶರಣ ಸಂಗಮ ಕಾರ್ಯಕ್ರಮದ ಅಂಗವಾಗಿ ತಿಂಗಳಿಗೆ ಒಮ್ಮೆ ಎಲ್ಲರೂ ಒಂದೆಡೆ ಸೇರಿ-ಶರಣರ ಅನುಭಾವಿಗಳ ಮೂಲಕ ಶರಣರ ವಚನಗಳ ವಿಶ್ಲೇಷಣೆ ಮಾಡಲಾಗುತ್ತಿದೆ.  ಹಾಗೆಯೇ ಶ್ರಾವಣಮಾಸದಲ್ಲಿ ಇಡಿತಿಂಗಳ ಪರ್ಯಂತರ ವಚನ ಶ್ರಾವಣ ಕಾರ್ಯಕ್ರಮ ಹುಬ್ಬಳ್ಳಿಯ ಬೇರೆಬೇರೆ ಬಡಾವಣೆಗಳಲ್ಲಿ ಅನುಭಾವಿಗಳ ಮೂಲಕ ಶರಣರ ಚಿಂತನೆಯ ಮಂಥನ ನಡೆಯುತ್ತಿದೆ. ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶರಣರ ಚಿಂತನೆಗಳ ತಿಳುವಳಿಕೆ ಮಾಡುವ ಉದ್ದೇಶದಿಂದ ಪ್ರತಿವರ್ಷವು ಪ್ರಾಥಮಿಕ, ಹಿರಿಯಪ್ರಾಥಮಿಕ, ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ವಚನಸ್ಪರ್ಧೆ, ನಿಬಂಧಸ್ಪರ್ಧೆಯನ್ನು ಏರಿ​‍್ಡಸುತ್ತಾ ಬಂದಿದೆ.  

ಬಸವಕೇಂದ್ರವು ಪ್ರತಿವರ್ಷ ವಾರ್ಷಿಕೋತ್ಸವದ ಅಂಗವಾಗಿ ತಿಂಗಳಪರ್ಯಂತರ ಪ್ರವಚನ ಕಾರ್ಯಕ್ರಮವನ್ನು 2008 ರಿಂದಹಮ್ಮಿಕೊಳ್ಳುತ್ತಾ ಬಂದಿದೆ. 2008 ರಲ್ಲಿ ಮನಗುಂಡಿಯ ಪೂಜ್ಯ ಶ್ರೀ ಬಸವಾನಂದಸ್ವಾಮಿಗಳು, 2009ರಲ್ಲಿ ಬೀದರಿನ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿಯವರು, 2010 ರಲ್ಲಿ ಚಿತ್ರದುರ್ಗದ ಪೂಜ್ಯಶ್ರೀ ಬಸವನವಲಿಂಗ ಶರಣರು, 2011 ರಲ್ಲಿ ಹಿರೇಹೊನ್ನಳ್ಳಿಪೂಜ್ಯಶ್ರೀಶರಣ ಬಸವದೇವರು, 2012 ರಲ್ಲಿ ಮತ್ತೆಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿಯವರು. 2013 ರಲ್ಲಿಗದುಗಿನ ತೋಂಟದಾರ್ಯಮಠದ ಪೂಜ್ಯಶ್ರೀ ಮಹಾಂತಸ್ವಾಮೀಜಿಯವರು. 2014 ರಲ್ಲಿ ಮುಂಡಗೋಡ ತಾಲೂಕು ಅತ್ತಿವೇರಿ ಬಸವಧಾಮದ ಪೂಜ್ಯಮಾತೆ ಬಸವೇಶ್ವರಿ, 2022 ರಲ್ಲಿಹುಬ್ಬಳ್ಳಿ ಶ್ರೀಗುರುಬಸವ ಮಂಟಪದ ಶ್ರೀಶಶಿಧರಕರವೀರಶೆಟ್ಟರ, ಶಿರಗುಪ್ಪಾದ ಪೂಜ್ಯಶ್ರೀ ವೆಂಕಟಾಪುರಶರಣರು, ಶಿವಮೊಗ್ಗಬಸವಕೇಂದ್ರ, ಚಿಕ್ಕಮಗಳೂರು ಬಸವಮಂದಿರದ ಪರಮಪೂಜ್ಯ ಡಾ. ಬಸವ ಮರುಳಸಿದ್ಧ ಮಹಾಸ್ವಾಮಿಜಿಯವರು, 2023ಹಾಗೂ 2024ರಲ್ಲಿ ಶ್ರೀಗುರುಬಸವ ಮಂಟಪದ ಅನುಭಾವಿಗಳು, ಶ್ರೇಷ್ಠವಾಗ್ಮಿಗಳು, ಬಸವತತ್ವನಿಷ್ಠರು, ಪ್ರಸಾರಕರು, ಉತ್ತಮ ಪ್ರವಚನ ಕಾರರಾದ ಶ್ರೀಶಶಿಧರಕರ ವೀರಶೆಟ್ಟರಅವರು ಪ್ರವಚನದಲ್ಲಿ ಅನುಭಾವನೀಡಿದರು.  

ಈ ವರ್ಷ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ,   ಜಗದ್ದುರುಶೂನ್ಯ ಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವದೇವರು ಅವರ ಅಮೃತವಾಣಿಯನ್ನು ಕೇಳುವ ಸದಾವಕಾಶ ಬಂದಿದೆ. ಈ ಪ್ರವಚನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ9ದರ್ಶಿ, ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿ ಅವರು ವಿನಂತಿಸಿದ್ದಾರೆ.   

ಶ್ರೀಸಿದ್ದ ಬಸವದೇವರು  ಮೂಲತಃ  ಬೆಳಗಾವಿ ಜಿಲ್ಲೆಹುಕ್ಕೇರಿ ಬೋರಗಲ್ಲ ಗ್ರಾಮದವರು. ಗ್ರಾಮದಲ್ಲಿಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಧಾರವಾಡದಲ್ಲಿ ಉನ್ನತ ಶಿಕ್ಷಣಪಡೆದನಂತರ ಹುಕ್ಕೇರಿ ತಾಲೂಕಿನ   ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ   ನಾಲ್ಕು ವರ್ಷಧರ್ಮೋಪದೇಶಮಾಡಿ ಹನ್ನೇರಡು ಸಾವಿರಕ್ಕೂ ಹೆಚ್ಚುಲಿಂಗದೀಕ್ಷೆ   ಹಾಗೂಇಪ್ಪತೈದು ಸಾವಿರಕ್ಕೂ ಹೆಚ್ಚು ರುದ್ರಾಕ್ಷಿ ದೀಕ್ಷೆಭಕ್ತರಿಗೆನೀಡಿ ಧರ್ಮಸಂಚಲನ ಮೂಡಿಸಿದ್ದಾರೆ. ಪ್ರವಚನದಯಪಾಲಿಸಿದ ಸಂದಭ9ದಲ್ಲಿ ಭಕ್ತರು ನೀಡಿದ ದೇಣಿಗೆಯನ್ನು 50 ವಿದ್ಯಾಥಿ9ಗಳ ಉನ್ನತಶಿಕ್ಷಣಕ್ಕೆ ದಾಸೋಹ ಮಾಡಿದ್ದಾರೆ.ಶ್ರೀಗಳು ಪ್ರವಚನದಿಂದಬಂದದೇಣಿಗೆಯನ್ನುತಮ್ಮಸಹಪಾಠಿಗಳ ವಿದ್ಯಾಭ್ಯಾಸದ ಸಲುವಾಗಿ ಉಪಯೋಗಿಸಿದ್ದಾರೆ. ಈಗಾಗಲೇ 250ಕ್ಕೂ ಹೆಚ್ಚುಹಳ್ಳಿಗಳಲ್ಲಿ ಪ್ರವಚನ ನೀಡಿಭಕ್ತರಿಗೆ ಸನ್ಮಾಗ9ದಲ್ಲಿ ಜೀವನಸಾಗಿಸಲು ಧಮ9ದ ಆಚಾರ ವಿಚಾರಗಳನ್ನುಭೋದಿಸಿದ್ದಾರೆ. 23 ಅನಾಥಹಾಗೂ ಬಡಮಕ್ಕಳಿಗೆ ಆಶ್ರಯ ನೀಡಿ ಅನ್ನಅಕ್ಷರ ದಾಸೋಹ ನೀಡುವಲ್ಲಿ ನಿರತರಾಗಿದ್ದಾರೆ. ಗಟ್ಟಿ ಧ್ವನಿ ನೇರಮಾತು  ವೈಚಾರಿಕನೆಲೆಗಟ್ಟು ನೀಳವಾದಶರೀರ, ಆಳವಾದ ಅಧ್ಯಯನ,  ಮಠಕ್ಕಾದರೂ  ಮಠದಲ್ಲಿ  ಇರಲಾರದಷ್ಟುಕಾರ್ಯಕ್ರಮಗಳು. ಇವರಕಾರ್ಯಧ್ಯಕ್ಷತೆ   ಕಂಡಭಕ್ತರು  ಯಮಕ್ಕನಮರಡಿ  ಶ್ರೀಜಗದ್ಗುರು ಶೂನ್ಯ ಸಂಪಾದನ ಹುಣಸಿಕೊಳ್ಳಮಠಕ್ಕೆ  ಸಮರ್ಥ ಯತಿಗಳೆಂದು  ಮನಗಂಡು ಶ್ರೀಮಠದ 21ನೆಯ   ಜಗದ್ಗುರುಗಳಾಗಿ  ಪೀಠಅರಸಿಬಂದದ್ದು  ಹೆಮ್ಮೆಯವಿಷಯ.  

ಬಸವಕೇಂದ್ರವು ಶರಣರ ವಚನಗಳ ಬೆಳಕಿನಲ್ಲಿ ಜನರಲ್ಲಿ ಕಾಯಕನಿಷ್ಠೆ, ದಾಸೋಹಂಭಾವ, ಭಾವೈಕ್ಯತೆ ಬೆಳೆಸುವುದು, ಮೂಢನಂಬಿಕೆ, ಕಂದಾಚಾರ, ಅಂಧಶ್ರದ್ಧೆಗಳನ್ನು ಹೊಡೆದೋಡಿಸುವುದು, ನಿಶ್ಚಯಕಾರಣ, ಕಲ್ಯಾಣ ಮಹೋತ್ಸವ, ಸೀಮಂತಕಾರಣ, ನಾಮಕರಣ, ಹುಟ್ಟುಹಬ್ಬಗಳನ್ನು ಸರಳವಾಗಿ, ಸುಂದರವಾಗಿ ನೆರವೇರಿಸುವದು ಈ ಹಲವು ಹತ್ತು ಉದ್ದೇಶಗಳನ್ನು ಹೊಂದಿದೆ.   

ಬಸವಕೇಂದ್ರ ಅಧ್ಯಕ್ಷರಾಗಿರುವವರು ನಿವೃತ್ತ ಪ್ರಾಧ್ಯಾಪಕರು, ಬಸವತತ್ವನಿಷ್ಠರು, ಪ್ರಸಾರಕರು, ವಚನಶ್ರಾವಣ ಕಾರ್ಯಕ್ರಮದ ಸಂಘಟಕರು, ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ಪ್ರೊ. ಜಿ.ಬಿ.ಹಳ್ಯಾಳ. ಅವರ ನೇತೃತ್ವದಲ್ಲಿ ಬಸವ ಕೇಂದ್ರದ ತಂಡವು ಹಲವಾರು ಉತ್ತಮವಾದ ಕಾರ್ಯಕ್ರಮಗಳನ್ನು ಏರಿ​‍್ಡಸುವ ಮೂಲಕ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುತ್ತಿದೆ..ಶಾಸಕ ಮಹೇಶ ಟೆಂಗಿನಕಾಯಿ ಅವರು ಉಧ್ಘಾಟಿಸುವರು. ಬೆಂಗಳೂರಿನ ಬಸವಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅತಿಥಿಗಳಾಗಿ ಭಾಗವಹಿಸುವರು. ಶರಣ ಸಾಹಿತಿ ದಂಪತಿಗಳಾದ ಪ್ರೊಸಿದ್ದಣ್ಣಲಂಗೋಟಿ, ಡಾ. ಕಲ್ಯಾಣಮ್ಮಲಂಗೋಟಿ ಅವರು ಅನುಭಾವ ನೀಡುವರು.