ಬದಲಾಗುತ್ತಿರುವ ಹವಾಮಾನ; ಕೃಷಿ ಅರಣ್ಯದ ಮಹತ್ವ ಕುರಿತು ಕಾರ್ಯಗಾರ
Workshop on the importance of agroforestry in a changing climate
ಬದಲಾಗುತ್ತಿರುವ ಹವಾಮಾನ; ಕೃಷಿ ಅರಣ್ಯದ ಮಹತ್ವ ಕುರಿತು ಕಾರ್ಯಗಾರ
ರಾಣೇಬೆನ್ನೂರ 27: ತಾಲ್ಲೂಕಿನ ಹನುಮನಮಟ್ಟಿಯಲ್ಲಿ ಕೃಷಿ ಮಹಾವಿದ್ಯಾಲಯ, ಐ.ಸಿ.ಎ.ಆರ್.-ಕೃಷಿ ವಿಜ್ಞಾನಕೇಂದ್ರ, ಹನುಮನಮಟ್ಟಿ,ಅರಣ್ಯ ಇಲಾಖೆಹಾಗೂ ನೀಡ್ಸ್ ಸಂಸ್ಥೆರಾಣೇಬೆನ್ನೂರುಇವರ ಸಹಯೋಗದೊಂದಿಗೆ“ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ “ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಕೃಷಿ ಅರಣ್ಯದ ಮಹತ್ವ”ಕುರಿತುಕಾರ್ಯಾಗಾರ ಮತ್ತು“ಸಸಿ ನೆಡುವ”ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಡಾ. ವಿ.ಆರ್. ಕಿರೇಸೂರ, ಶಿಕ್ಷಣ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡಇವರು ಮಾತನಾಡುತ್ತಾ, ರೈತರು ಕೃಷಿ ಕಾರ್ಯಕ್ರಮಗಳಿಗೆ ಭೂಷಣ. ಪ್ರತಿ ವರ್ಷಜಾಗತಿಕ ಉಷ್ಣತೆ ಹೆಚ್ಚಾಗುತ್ತಿರುವುದರಿಂದ ಹಿಮಗಳು ಕರಗುತ್ತಿವೆ, ಭೂಮಿಯಲ್ಲಿ ನೀರು ಆಕ್ರಮಿಸುತ್ತಿದೆ. ಅತೀ ಹೆಚ್ಚು ರಸಾಯನಿಕ ಗೊಬ್ಬರಗಳ ಬಳಕೆ, ಅರಣ್ಯನಾಶದಿಂದರೈತರ ಬೆಳೆಯ ಇಳುವರಿ ಕುಂಠಿತವಾಗುತ್ತಿದೆ. ಸುಧಾರಿತಅರಣ್ಯ ಕೃಷಿಯಿಂದ ಪ್ರತಿ ಹೆಕ್ಟೇರಿಗೆ 2 ರಿಂದ 9 ಟನ್ ವಾತಾವರಣದ ಇಂಗಾಲದಡೈ ಆಕ್ಸೈಡ್‌ನ್ನು ಸೆರೆಹಿಡಿಯಬಹುದು ಮತ್ತು ಸಂಗ್ರಹಿಸಬಹುದು. ಮಣ್ಣುಕೊಚ್ಚಿ ಹೋಗುವುದನ್ನು ಶೇಕಡಾ 65 ರಷ್ಟು ಕಡಿಮೆಗೊಳಿಸಬಹುದು, ಜೈವಿಕ ವೈವಿಧ್ಯತೆಯನ್ನು ಶೇಕಡಾ 30 ರಷ್ಟು ಹೆಚ್ಚಿಸಬಹುದು, ರೈತರಆದಾಯವನ್ನು ದೀರ್ಘಾವಧಿ ಸಮಯದಲ್ಲಿ ಶೇಕಡಾ 20 ರಿಂದ 50 ರಷ್ಟು ಹೆಚ್ಚಿಸಬಹುದುಎಂದರು. ಮರಗಳನ್ನು ನೆಡುವುದು ಸಾಧ್ಯವಾಗದಿದ್ದರೆಗಿಡ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕುಎಂದರು.
ಡಾ. ಎ. ಜಿ. ಕೊಪ್ಪದ, ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥರು ಮಾತನಾಡುತ್ತಾ ದೇಶದಲ್ಲಿ ಮರಗಳ ಸಂಖ್ಯೆಕ್ಷೀಣಿಸುತ್ತಿದ್ದು, ಒಟ್ಟಾರೆಅರಣ್ಯದ ಪ್ರದೇಶ ಶೇಕಡಾ 22 ರಷ್ಟಿದ್ದು, ಕೃಷಿ ಅರಣ್ಯವು ಶೇಕಡಾ 2 ರಿಂದ 3 ರಷ್ಟಿದೆ. ಕುಂಠಿತಗೊಂಡಿರುವ ಅರಣ್ಯ ವಿಸ್ತೀರ್ಣದಿಂದ ಹವಾಮಾನದಲ್ಲಿ ಏರುಪೇರಾಗಿ ವಾತಾವರಣದ ಇಂಗಾಲದ ಪ್ರಮಾಣ, ಉಷ್ಣತೆ ಹೆಚ್ಚುತ್ತಿದೆ. ಆದ್ದರಿಂದ, ಇದರ ಬಗ್ಗೆ ರೈತರಿಗೆಅರಿವು ಮೂಡಿಸಲು ಜೂನ್ ತಿಂಗಳಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕಅರಣ್ಯ ಸಂರಕ್ಷಣಾಧಿಕಾರಿಗಳಾದ .ಶ್ರೀನಾಥ ಕಡೋಲ್ಕರ್‌ಇವರು ಮಾತನಾಡಿ ವಲಯ ಮಟ್ಟದಅರಣ್ಯ ನರ್ಸರಿಗಳಲ್ಲಿ ರೈತರಿಗೆ ಸಸಿ ವಿತರಣೆ ಮಾಡಿ ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಡಾ. ಜೆ. ಎಸ್. ಹಿಳ್ಳಿ, ನಿಕಟಪೂರ್ವ ವಿದ್ಯಾಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಇವರು ಮಾತನಾಡುತ್ತಾ ಅತೀಯಾದ ಅರಣ್ಯದ ಮೇಲಿನ ಒತ್ತಡ, ಜನರ ಅವಲಂಬನೆ ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಗೆಕಾರಣವಾಗಿದೆ ಎಂದರು.
ಕಾಕೋಳ ಗ್ರಾಮದ ಪ್ರಗತಿಪರ ರೈತರಾದ ಚನ್ನಬಸಪ್ಪ ಕಂಬಳಿ ಇವರು ಮಾತನಾಡಿ ರಾಸಾಯನಿಕ ಮುಕ್ತ ಕೃಷಿಯನ್ನು ರೈತರು ಪ್ರಾರಂಭಿಸಬೇಕು. ವೃಕ್ಷಾಧಾರಿತ ಕೃಷಿಯನ್ನು ರೈತರು ಬದುವಿನಲ್ಲಿ ಮಾಡಬೇಕು. ಅರಣ್ಯ ಇಲಾಖೆಯು ನಿಷ್ಕ್ರೀಯವಾಗಿರುವ ಗ್ರಾಮ ಅರಣ್ಯ ಸಮಿತಿಯನ್ನು ಮತ್ತೆ ಆರಂಭಿಸಬೇಕೆಂದರು.
ಎಚ್.ಎಫ್.ಅಕ್ಕಿ ಮಾತನಾಡಿ ನೀಡ್ಸ್ ಸಂಸ್ಥೆಯಿಂದ 3 ದಶಕದಲ್ಲಿ ಸುಮಾರು 2 ರಿಂದ 3 ಲಕ್ಷ ಗಿಡಗಳನ್ನು ನೆಡಲಾಗಿದೆ. ಜೈವಿಕ ಇಂಧನಕ್ಕೆ ಬಳಸುವ ಸಸ್ಯಗಳ ಕುರಿತು ರೈತರಿಗೆ ಪ್ರಚಾರ ಮಾಡಲಾಗಿದೆ. ಪ್ಲಾಸ್ಟಿಕ್‌ನಿಂದ ಪರಿಸರವನ್ನು ಉಳಿಸಿ ಎಂದುಕರೆ ನೀಡಿದರು.
ನಿಜಲಿಂಗಪ್ಪ ಬಸೆಗಣ್ಣಿ, ಪ್ರಗತಿಪರರೈತರು, ಅಗಡಿಇವರು ಮಾತನಾಡುತ್ತಾ ಗಿಡಗಳನ್ನು ನೆಡುವುದು ನಿರಂತರವಾಗಿರಬೇಕು. ಆಧುನಿಕ ವ್ಯವಸ್ಥೆಯಿಂದ ಜೀವನ ಶೈಲಿ ಬದಲಾವಣೆಯಾಗಿದೆ. ಪಂಚವಟಿ ವನಗಳ ನಿರ್ಮಾಣದಿಂದ ಅರಣ್ಯವನ್ನು ಸಂರಕ್ಷಿಸಬಹುದು ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನುಡಾ.ಗಣಪತಿ ಟಿ. ಇವರು ಸ್ವಾಗತಿಸಿದರು. ಕಾರ್ಯಕ್ರಮದ ವಂದನಾರೆ್ಣಯನ್ನು ಹನುಮನಮಟ್ಟಿ, ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ. ಎ.ಹೆಚ್. ಬಿರಾದಾರ ಇವರು ನೇರವೇರಿಸಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಸಿಬ್ಬಂದಿಗಳು, ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ನೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಸುಮಾರು 100ಕ್ಕೂ ಹೆಚ್ಚು ಜನರೈತರು ಮತ್ತು 150 ಜನ ಕೃಷಿ ವಿದ್ಯಾರ್ಥಿಗಳು ಭಾಗವಹಿಸಿ 50ಕ್ಕೂ ಹೆಚ್ಚು ಜೈವಿ ಇಂಧನ ಸಸಿ ನೆಡುವ ಮೂಲಕ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 