ಮಣ್ಣು ಸಂರಕ್ಷಣೆ, ಸವಳು-ಜವಳು ನಿರ್ವಹಣೆ ಕುರಿತು ಕಾರ್ಯಾಗಾರ
Workshop on soil conservation, weed management
ಮಣ್ಣು ಸಂರಕ್ಷಣೆ, ಸವಳು-ಜವಳು ನಿರ್ವಹಣೆ ಕುರಿತು ಕಾರ್ಯಾಗಾರ
ಧಾರವಾಡ, 07 ; ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ವಿಜಯಪುರ ಜಿಲ್ಲೆಯ, ಮುದ್ದೇಬಿಹಾಳ ತಾಲೂಕಿನ ಮುದೂರು ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಸದಸ್ಯರು, ಪದಾಧಿಕಾರಿಗಳು ಹಾಗೂ ರೈತರಿಗೆ ಸಮಗ್ರ ಮಣ್ಣು ಮತ್ತು ನೀರು ಸಂರಕ್ಷಣೆ ಹಾಗೂ ಸವಳು-ಜವಳು ನಿರ್ವಹಣೆ ಕುರಿತು ಗ್ರಾಮ ಮಟ್ಟದ ಕಾರ್ಯಾಗಾರವನ್ನು ದಿನಾಂಕ: 06-08-2025 ರಂದು ಹಮ್ಮಿಕೊಳ್ಳಲಾಗಿತ್ತು.
ಸಿ. ಎಸ್. ನಾಡಗೌಡ, ಸನ್ಮಾನ್ಯ ಶಾಸಕರು, ಮುದ್ದೇಬಿಹಾಳ ಕ್ಷೇತ್ರ ಹಾಗೂ ಅಧ್ಯಕ್ಷರು, ಎಮ್.ಎಸ್.ಐ.ಎಲ್. ಕರ್ನಾಟಕ ಸರ್ಕಾರ ರವರು ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ಉತ್ತಮ ಹಾಗೂ ಪರಿಣಾಮಕಾರಿ ತರಬೇತಿಗಳನ್ನು ನೀಡುತ್ತಾ ಬರುತ್ತಿದೆ. ಪ್ರತಿಯೊಬ್ಬ ರೈತ ನೀರು ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳನ್ನು ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು. ಪರಸ್ಪರ ರೈತರು ಹೊಂದಾಣಿಕೆಯಿಂದ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಗೊಳಿಸಿ, ಕೊನೆಯ ತೂಬಿನ ರೈತನಿಗೂ ಸಹ ನೀರು ತಲುಪುವಂತಾಗಬೇಕು. ರೈತ ಅತಿಯಾಗಿ ನೀರು ಬಳಕೆಮಾಡುತ್ತಿರುವುದರಿಂದ ಸವಳು-ಜವಳು ಸಮಸ್ಯೆಯಾಗುತ್ತಿದ್ದು, ಸವಳು-ಜವಳು ನಿರ್ವಹಣಾ ಕ್ರಮಗಳ ಕುರಿತು ವಾಲ್ಮಿ ಸಂಸ್ಥೆಯಿಂದ ತಿಳುವಳಿಕೆ ನೀಡಿರುತ್ತಾರೆ. ಸಮರ್ಕ ಕಾಲುವೆ ನೀರು ನಿರ್ವಹಣೆಗೆ ಸ್ಕಾಡಾಗಳ ಅಳವಡಿಕೆಯಾಗಬೇಕೆಂದು ತಿಳಿಸಿದರು. ಕೊನೆಯದಾಗಿ ರೈತರು ಆರ್ಥಿಕ ಲಾಭದಾಯಕ ಬೆಳೆಗಳನ್ನು ಬೆಳೆದು ಅಭಿವೃದ್ಧಿಹೊಂದಬೇಕೆಂದು ತಿಳಿಸಿದರು.
ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ ಎನ್. ಮರಡ್ಡಿಯವರು ಜಲಾಶಯದ ನೀರಿನ ಸಮರ್ಕ ಬಳಕೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರ ಅತೀ ಮುಖ್ಯವಾದದು ಎಂದು ತಿಳಿಸಿದರು. ಅಲ್ಲದೇ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಿದರು. ಏಕ ಬೆಳೆ ಪದ್ಧತಿಯನ್ನು ಬಿಟ್ಟು ಬೆಳೆ ಪರಿವರ್ತನೆ ಮಾಡಿ ಪರ್ಯಾಯ ದ್ವಿದಳ ಧಾನ್ಯಗಳ ಬೆಳೆಗಳನ್ನು ಬೆಳೆದು, ಮಣ್ಣಿನ ಫಲವತ್ತತೆ ಹೆಚ್ಚಿಸಲು ಕ್ರಮ ವಹಿಸಬೇಕೆಂದು ರೈತ ಬಾಂಧವರಿಗೆ ಕಿವಿ ಮಾತು ಹೇಳಿದರು. ಇದರೊಂದಿಗೆ ಮಣ್ಣು ಪರೀಕ್ಷೆ ಮಹತ್ವವನ್ನು ತಿಳಿಸಿದರು. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೆ ಪಶುಗಳ ಆಧಾರಿತ ಸಮಗ್ರ ಕೃಷಿ ಮಾಡಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕರೆ ನೀಡಿದರು.
ರಾಮರಾವ್ ಕುಲಕರ್ಣಿ, ಪ್ರಗತಿ ಪರ ರೈತರು, ಮುದೂರು ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನೀರಿನ ಸಮರ್ಕ ಬಳಕೆಯಾಗಬೇಕು ಹಾಗೂ ಸಾವಯವ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಮಣ್ಣಿನ ಸಂರಕ್ಷಣೆಗೆ ಕ್ರಮ ವಹಿಸುವಂತೆ ತಿಳಿಸಿದರು.
ಬಸವರಾಜ ಕುಂಬಾರ, ಮಾಜಿ ಕಾಡಾ ಅಧ್ಯಕ್ಷರು, ಯು.ಕೆ.ಪಿ. ಭೀಮರಾಯನಗುಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಾ ನೈಶರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಈ ಭಾಗದಲ್ಲಿ ನೀರಿನ ಹೆಚ್ಚಿನ ಬಳಕೆಯಿಂದಾಗಿ ಹಲವಾರು ಜಮೀನುಗಳಲ್ಲಿ ಸವಳು-ಜವಳು ಸಮಸ್ಯ ಎದುರಾಗುತ್ತಿದೆ. ಈಗಾಗಲೇ ವಾಲ್ಮಿ ಸಂಸ್ಥೆಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ್ಘ ಸವಳು-ಜವಳು ನಿರ್ವಹಣೆ ಕುರಿತು ತರಬೇತಿ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸುಧೀಂದ್ರ ಕೆ. ಎಸ್., ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಸವಳು-ಜವಳು ನಿರ್ವಹಣೆಯ ತಾಂತ್ರಿಕತೆಗಳ ಕುರಿತು ಹಾಗೂ ಸುರೇಶ ಕುಲಕರ್ಣಿ, ಸಮಾಲೋಚಕರು, ವಾಲ್ಮಿ, ಧಾರವಾಡ ಇವರು ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ, ಉಪಯೋಗಗಳು ಮತ್ತು ಆರ್ಥಿಕ ಬಲವರ್ಧನೆ ಮಾರ್ಗೋಪಾಯಗಳು ಕುರಿತು ಉಪನ್ಯಾಸ ನೀಡಿದರು. ರಾಘವೇಂದ್ರ ತೆಗ್ಗಿ, ಸಮಾಲೋಚಕರು, ವಾಲ್ಮಿ, ಧಾರವಾಡ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುರೇಶ ದೀಕ್ಷಿತ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸುಧೀಂದ್ರ ಕೆ. ಎಸ್., ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಸ್ವಾಗತಿಸಿದರು ಮತ್ತು ಶ್ರೀ ಫಕ್ಕಿರೇಶ ಅಗಡಿ, ವಾಲ್ಮಿ, ಧಾರವಾಡ ರವರು ವಂದನಾರೆ್ಣ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬ. ಗಣಾಚಾರಿ, ಅಧ್ಯಕ್ಷರು, ನೀ.ಬ.ಸ.ಸಂಘ ಮುದೂರು, ಬಿ. ಕೆ. ಬಿರಾದಾರ, ಅಧ್ಯಕ್ಷರು, ಪಿ.ಎಲ್.ಡಿ. ಬ್ಯಾಂಕ್, ಮುದ್ದೇಬಿಹಾಳ, ಶಂಕರಗೌಡ ಅ. ಪಾಟೀಲ್, ಪ್ರಗತಿಪರ ರೈತರು, ಮುದೂರು, ಗೌಡಪ್ಪ ಗು. ಪಾಟೀಲ್, ಪ್ರಗತಿಪರ ರೈತರು, ಮುದೂರು, ಬಸವರಾಜ ಬ. ಗಂಗೂರ, ಪ್ರಗತಿಪರ ರೈತರು, ಮುದೂರು ಹಾಗೂ ಇತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 