ಮಹಿಳೆಯರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು

ಮಹಿಳೆಯರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು Women should take the lead in building a healthy society.

ಮಹಿಳೆಯರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು 

ಬ್ಯಾಡಗಿ 17: ಮಹಿಳೆಯರು ತಮ್ಮ ಜೊತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗಳು  ಶೈಲಾ ಕುರಹಟ್ಟಿ ಹೇಳಿದರು.ತಾಲೂಕಿನ ಹೆಡಿಗ್ಗೊಂಡ ಗ್ರಾಮದ ಕಲ್ಮೇಶ್ವರ ಸಭಾಭವನದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆಯುಷ್ಯ ವಿಭಾಗ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕಾಗಿನೆಲೆ ವಲಯ ಪೋಷಣ ಅಭಿಯಾನ ಯೋಜನೆ ಮತ್ತು ಗರ್ಭಿಣಿಯರ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮತ್ತು ಆರು ತಿಂಗಳ ಮಕ್ಕಳಿಗೆ ಅನ್ನಪ್ರಾಶ ಮತ್ತು ಬಾಲ್ಯ ವಿವಾಹ ತಡೆ ಭೇಟಿ ಬಚಾವ್ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮಕ್ಕಳ  ಹುಟ್ಟುಹಬ್ಬ ಆಚರಣೆಯ  ಸಮಾರೋಪ ಸಮಾರಂಭ ಉದ್ಘಾಟಿಸಿ.ಮಾತನಾಡಿದವರು.ಅಪೌಷ್ಟಿಕ ನಿವಾರಿಸುವುದಕ್ಕೆ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮ ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ರಮ ಇದಾಗಿದೆ ಮಹಿಳೆಯರು ಪೋಷಣ ಅಭಿಯಾನದಡಿ ದೊರೆಯುವ ಸೌಲತ್ತುಗಳನ್ನು ಸಮರ​‍್ಕವಾಗಿ ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು  

ಈ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಯೆರೆಸೀಮೆ ಮಾತನಾಡಿ ಸದೃಢವಾದ ಮತ್ತು ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಗರ್ಭಿಣಿಯರು ಬಾಣಂತಿಯರು ಪೌಷ್ಟಿಕ ಆಹಾರ ಬಳಸುವ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಹೆಣ್ಣು ಮಕ್ಕಳಿಗೆ 18 ಗಂಡು ಮಕ್ಕಳಿಗೆ 21 ವರ್ಷದೊಳಗೆ ಮದುವೆ ಮಾಡಿದರೆ ಶಿಕ್ಷಣ ಅಪರಾದವಾಗುತ್ತದೆ  

ಬಾಲ್ಯ ವಿವಾಹ ಮಾಡಿದ್ದಲ್ಲಿ ಅದಕ್ಕೆ ಜೈಲು ಮತ್ತು ಒಂದು ಲಕ್ಷ ರೂ ದಂಡ ಕಟ್ಟಬೇಕು ಬಾಲ್ಯ ವಿವಾಹದಿಂದ ಬಹಳಷ್ಟು ದುಷ್ಪರಿಣಾಮಗಳಾಗುತ್ತಿವೆ ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಭಾಗ್ಯ ಬೆಳಗಿಸುವ ಮೂಲಕ ಬಾಲ್ಯ ವಿವಾಹ  ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.  

ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಜನರು ಶಕ್ತಿಯುತ ಆಹಾರ ಸೇವಿಸದೆ ಪಾಯೃತಪಟ್ಟಣ ಆಹಾರ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಅನೇಕರು ಗಳನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ. ಸತ್ವಯುತ ಆಹಾರ ಸೇವಿಸಬೇಕು ಮತ್ತು ರಕ್ತಹೀನತೆಯಿಂದ ಶಿಶು ಮತ್ತು ತಾಯಿ ಮರಣ ಆಗುತ್ತದೆ .ಅನೀಮಿಯ ಮುಕ್ತ ಭಾರತ ನಿರ್ಮಾಣ ಆಗಬೇಕು, ಸರಿಯಾದ ರೀತಿಯಲ್ಲಿ ಶಿಶು ಮತ್ತು ತಾಯಿಗೆ ಉಪಚಾರ ಮಾಡಬೇಕು ಅವಶ್ಯಕತೆ ಇರುವಾಗ ತಪ್ಪದೇ ಆಸ್ಪತ್ರೆಗೆ ಹೋಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಯೋಗೆಪ್ಪ ಕದರಮಂಡಲಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ ಆನ್ವೇರಿ. ಉಪಾಧ್ಯಕ್ಷರಾದ ಅಕ್ಕಮ್ಮ ಲಿಂಗದಳ್ಳಿ ಹಾಗೂ ಎಲ್ಲ ಗ್ರಾಮ ಪಂಚಾಯತಿಯ ಸದಸ್ಯರುಗಳು ಮತ್ತು ಕಾರ್ಯದರ್ಶಿ ಜಗದೀಶ್ ಮಣ್ಣಮ್ಮನವರ್‌. ಬಾಲ ಸುರಕ್ಷಾ ಭಾರತ್ ಯೋಜನೆಯ ವೈದ್ಯಾಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಮತ್ತು ಗ್ರಾಮಸ್ಥರು ಹಾಜರಿದ್ದರು.