ನರೇಗಾ ಯೋಜನೆಯ ಮೂಲಕ ಮಹಿಳೆಯರು ಅರ್ಥಿಕ ಪ್ರಗತಿ ಪಡೆಯಬಹುದೆಂದು - ರಾಜೇಶ್ವರಿ
Women can achieve economic progress through NREGA scheme - Rajeshwari
ನರೇಗಾ ಯೋಜನೆಯ ಮೂಲಕ ಮಹಿಳೆಯರು ಅರ್ಥಿಕ ಪ್ರಗತಿ ಪಡೆಯಬಹುದೆಂದು - ರಾಜೇಶ್ವರಿ
ಶಿಗ್ಗಾವಿ 13ಃ ನರೇಗಾ ಯೋಜನೆಯನ್ನು ಹೆಚ್ಚು ಕ್ರೀಯಾತ್ಮಕ ಅಳವಡಿಸುವುದರ ಮೂಲಕ ಮಹಿಳೆಯರು ಅರ್ಥಿಕ ಪ್ರಗತಿ ಪಡೆಯಬಹುದೆಂದು ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಸಂಯೋಜಕಿ ರಾಜೇಶ್ವರಿ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀ ಚೇತನ ದಿನಾಚರಣೆಯ ಅಂಗವಾಗಿ ತಾಲೂಕಿನ ಹಳೆ ಬಂಕಾಪೂರ ಹಾಗೂ ಬಾಡ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರು ನರೇಗಾ ಯೋಜನೆಯಡಿ ಪಾಲ್ಗೊಳ್ಳುವಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ಪುರುಷ ಸಮಾನ ವೇತನ, ಸೌಲಭ್ಯತೆ ನೀಡಲಾಗುತ್ತಿದೆ. ಕೂಲಿಕಾರರು ವಯಕ್ತಿಕ ಹಾಗೂ ಸಮೂದಾಯ ಆದಾರಿತ ಕಾರ್ಯಕ್ರಮಗಳಲ್ಲಿ ಅರ್ಥಿಕ ಪ್ರಯೋಜನೆ ಪಡೆಯಬೇಕು. ಕುಟುಂಬವೂ ಸುಧಾರಣೆ ಕಾಣಲಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ಪರಿಸರ, ಸ್ವಾವಲಂಭನೆಯ ಕಾರ್ಯಕ್ರಮಗಳು, ಜಮೀನು ಅಭಿವೃದ್ಧಿ ಕಾರ್ಯಕ್ರಮಗಳು ಸಮೂದಾಯ ಆದಾರಿತ ಕೆರೆ ಕಟ್ಟೆಗಳ ನೀರಿನ ಸಂಪನ್ಮೂಲಗಳ ಸಂಗ್ರಹಣೆ ಬಳಕೆಯ ಕಾಮಗಾರಿಗಳು. ಕೈ ತೋಟಗಳ ಶೃಜಿಸುವಿಕೆ ಮೂಲಕ ಉದ್ಯೋಗ ಶೃಷ್ಠಿ ಮಾಡಲಾಗುತ್ತಿದೆ. ಮಹಿಳೆಯರ ಸ್ವಾವಲಂಭನೆಯ ಬದುಕು ಕಟ್ಟಿಕೊಡಲಾಗುತ್ತಿದೆ ಎಂದರು. ಬಾಡ ಹಳೆ ಬಂಕಾಪೂರ ಪಿಡಿಓ ರಾಮಕೃಷ್ಣ ಗುಡಗೇರಿ. ವಾಣಿ ಅಲ್ಲಯ್ಯಾನವರ ಹಾಗೂ ಶಿಬ್ಬಂಧಿಗಳು. ಎಲ್.ಸಿಆರ್.ಪಿ ಒಕ್ಕೂಟದ ಅಧ್ಯಕ್ಷರು ಭಾಗವಹಿಸಿದ್ದರು.
.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 