ಮಕ್ಕಳಿಗೆ ನಾಗರಿಕ ಶಿಷ್ಟಾಚಾರ ಕಲಿಸುವ ಮೂಲಕ ನಾಂದಿ ಹಾಡುವವಳು ಹೆಣ್ಣು : ಡಾ.ಅನಂತಮತಿ ಯಂಡೋಳಿ
Women are the ones who lead by teaching children civic etiquette: Dr. Ananthamathi Yandoli
ಲೋಕದರ್ಶನ ವರದಿ
ಮಹಾಲಿಂಗಪುರ 10 ಮಹಿಳೆ ಮಕ್ಕಳಿಗೆ ನಾಗರಿಕ ಶಿಷ್ಟಾಚಾರ ಕಲಿಸುವ ಮೂಲಕ ಉತ್ತಮ ಸಾಮಾಜಿಕ ಪರಿಸರಕ್ಕೆ ನಾಂದಿ ಹಾಡಬೇಕು. ಎಂದು ರಬಕವಿಯ ಖ್ಯಾತ ವೈದ್ಯೆ ಅನಂತಮತಿ ಯಂಡೋಳಿ ಹೇಳಿದರು.
ಪಟ್ಟಣದ ಟೊಣಪಿನಾಥ ಸಮುದಾಯ ಭವನದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘದ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣಾದವಳು ಗಂಡಿಗೆ ಸಮಾನಳಾಗಿ ಎಲ್ಲವನ್ನೂ ಮಾಡುತ್ತೇನೆ ಎಂದು ಎಲ್ಲೆ ಮೀರುವುದರಿಂದ ಸಮಾನತೆ ಬರುವುದಿಲ್ಲ, ಬದಲಾಗಿ ಹೆಣ್ಣಾಗಿ ತನ್ನ ಪಾಲಿನ ಕರ್ತವ್ಯ ಮತ್ತು ಜವಾಬ್ದಾರಿ ನಿಭಾಯಿಸುವ ನಿಯತ್ತು ತೋರಿದರೆ ಮಾನ್ಯತೆ ಗಳಿಸಬಹುದು. ಮಹಿಳೆ ಪುರುಷನಿಗೆ ಸಮಾನಳಾಗುವ ಹಂಬಲಕ್ಕಿಂತ ಮಾನ್ಯಳಾಗುವತ್ತ ಮನಸು ಮಾಡಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಮಾತನಾಡಿ, ಕಪಾಟಿನಲ್ಲಿ ಹೆಚ್ಚು ಬಟ್ಟೆ, ಮೈಮೇಲೆ ಹೆಚ್ಚು ಬಂಗಾರ ಹೊಂದಿರುವ ಮತ್ತು ಮನೆಯಲ್ಲಿ ಹೆಚ್ಚು ಮಾತಾಡುವ ಮಹಿಳೆ ಮಕ್ಕಳಲ್ಲಿ ಸಂಸ್ಕಾರ ಮೂಡಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಕೂಡ ಹೆಚ್ಚು ಜವಾಬ್ದಾರಿ ಹೊಮದಿರಬೇಕು ಎಂದರು.
ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರೀತಿ ಅಂಗಡಿ, ಸಂಜನಾ ಹೊಸೂರ ಭರತನಾಟ್ಯ ಪ್ರರ್ಶಿಸಿದರು. ಮಹಿಳೆಯರು ಮರಾಠಿ, ಮಾರ್ವಾಡಿ, ಕೊಡಗು, ಉತ್ತರಕರ್ನಾಟಕ ಸೇರಿದಂತೆ ನಾಡಿನ ನಾನಾ ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ತಂಡೋಪತಂಡವಾಗಿ ಯಾಂರ್್ ವಾಕ್ ಮಾಡುವ ಮೂಲಕ ವಸ್ತ್ರ ವೈವಿಧ್ಯತೆ ಸಾರಿದರು. ಭರಪೂರ ವೇದಿಕೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಎಲ್ಲ ಮಹಿಳೆಯರು ಸಾಮೂಹಿಕ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.ನಂತರ ಚೌ ಚೌ ಬಾತ್ ಉಪಹಾರ ಸವಿದರು.
ಬಣಜಿಗ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಅವರಾದಿ, ಉಪಾಧ್ಯಕ್ಷೆ ಶೈಲಾ ಶೆಟ್ಟರ, ಕಾರ್ಯದರ್ಶಿ ಪಲ್ಲವಿ ಘಟ್ನಟ್ಟಿ, ಸದಸ್ಯರಾದ ಭಾರತಿ ಮುಂಗರವಾಡಿ, ಶಿವಲೀಲಾ ವಜ್ಜರಮಟ್ಟಿ, ಸೀಮಾ ಬಂಡಿ, ವಾಣಿಶ್ರೀ ಪಟ್ಟೇದ, ಚಿನ್ನಮ್ಮ ಕುಳ್ಳೋಳಿ, ಸ್ನೇಹಲ್ ಅಂಗಡಿ, ಮಹಾದೇವಿ ಹಾವೇರಿ, ಸಾವಿತ್ರಿ ಟೆಂಗಿನಕಾಯಿ, ಸರೋಜನಿ ಅನಿಗೋಳ, ವಿಜಯಲಕ್ಷ್ಮೀ ಕುಳ್ಳೋಳಿ ಸೇರಿದಂತೆ ಇತರರಿದ್ದರು. ಶಿಕ್ಷಕಿ ಪ್ರೀತಿ ಕಲ್ಯಾಣಿ ನಿರೂಪಿಸಿ, ವಂದಿಸಿದರು. ಮಹಾಲಿಂಗಪುರದಲ್ಲಿ ಬಣಜಿಗ ಸಮಾಜದ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಎಲ್ಲ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 