ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ: ಡಾ ವೀಣಾ ಬಿರಾದಾರ
Women are a wonderful gift of nature: Dr. Veena Biradar
ಧಾರವಾಡ 12 : ನಗರದ ಕೊಪ್ಪದಕೆರೆಯಲ್ಲಿರುವ ಥೇರೇಜಾ ಫರ್ನಾಂಡೀಸ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಹೊಂಬೆಳಕು ಫೌಂಡೇಶನ್ ಮತ್ತು ಸಾಯಿ ಕಾಲೇಜ್ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಉದ್ಘಾಟಿಸಿ ಮಾತಾಡಿಹೆಣ್ಣು ಮತ್ತು ಗಂಡು ಈ ಒಂದು ತಾರತಮ್ಯವನ್ನು ಹೋಗಲಾಡಿಸಿ ಸಮಾಜವನ್ನು ಉನ್ನತವಾಗಿ ಕಟ್ಟಬೇಕಾಗಿದೆ.
21ನೇ ಶತಮಾನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆಯನ್ನು ಮಾಡುತ್ತಿದ್ದಾರೆ. ಪ್ರತಿ ಮನೆಯಲ್ಲಿ ತಂಗಿ ಅಕ್ಕ , ತಾಯಿ, ಅಜ್ಜಿ , ಮಡದಿ, ಅಮ್ಮ ಹೀಗೆ ವಿವಿಧ ಹೆಸರುಗಳಿಂದ ಮನೆಯನ್ನು ಬೆಳಗುವ ಹೆಣ್ಣು ಮಗಳು, ಎಷ್ಟೇ ಕಷ್ಟ ಬಂದರೂ ಸಾಧಿಸಿ ಕೆಲಸವನ್ನು ಮಾಡುತ್ತಿದ್ದಾಳೆ. ಅವಳೊಂದು ಪ್ರಕೃತಿಯ ಅದ್ಭುತ ಕೊಡುಗೆ. ಸಹನೆ, ಪರಿಶ್ರಮ, ದೃಢತೆ ಅವಳ ಅಸ್ತ್ರ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಿಸ್ಟೀಗಳಾದ ತಾರಾ ಫರ್ನಾಂಡೀಸ್, ಮ್ಯಾಗಿ ಫರ್ನಾಂಡೀಸ್, ಮಹಿಳೆಯರು, ಮಕ್ಕಳು, ವಿಶೇಷ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 