ಮಹಿಳಾ ಸಬಲೀಕರಣ ರೋಟರಿ ಸಂಸ್ಥೆಯ ಕೇಂದ್ರೀಕೃತ ಚಟುವಟಿಕೆಯಲ್ಲಿ ಒಂದಾಗಿದೆ

ಮಹಿಳಾ ಸಬಲೀಕರಣ ರೋಟರಿ ಸಂಸ್ಥೆಯ ಕೇಂದ್ರೀಕೃತ ಚಟುವಟಿಕೆಯಲ್ಲಿ ಒಂದಾಗಿದೆ

ಕಾರವಾರ 19 : ಶಾಂತಿ ನಿರ್ಮಾಣ ಹಾಗೂ ಸಂಘರ್ಷ ತಡೆಗಟ್ಟುವಿಕೆ, ರೋಗ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆ, ನೀರು ಹಾಗೂ ನೈರ್ಮಲ್ಯ, ತಾಯಿ ಮತ್ತು ಮಗುವಿನ ಆರೋಗ್ಯ, ಮೂಲ ಶಿಕ್ಷಣ ಹಾಗೂ ಸಾಕ್ಷರತೆ, ಸಮುದಾಯ ಆರ್ಥಿಕ ಅಭೀವೃಧ್ಧಿ ಹಾಗೂ ಪರಿಸರ ಈ ಚಟುವಟಿಗಳಲ್ಲಿ ರೋಟರಿ ಸಂಸ್ಥೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಹಿಳಾ ಸಬಲೀಕರಣದರ್ಲಲೀಯೂ ಕೂಡಾ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ರೋಟರಿ ಪ್ರಾಂತಪಾಲ ರೊಟೇರಿಯನ್ ಶರದ್ ಪೈ ಸೋಮವಾರ ಇಲ್ಲಿಯ ರೋಟರಿ ಕ್ಲಬ್ ಮಹಿಳೆಯರಿಗಾಗಿ ಅಯೋಜಿಸಿದ ಹೊಲಿಗೆ ಹಾಗೂ ಕಸೂತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.   

ರೋಟರಿ ಸಂಸ್ಥೆಯ ಪ್ರಾಂತ, ಕರ್ನಾಟಕದ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆ, ದಕ್ಚಿಣ ಮಹಾರಾಷ್ಟ್ರಾ ಹಾಗೂ ಗೋವಾ ರಾಜ್ಯ ಗಳಲ್ಲಿನ 150 ಕ್ಲಬ್ ಒಳಗೋಂಡ ಬಹು ದೊಡ್ಡ ಪ್ರಾಂತವಾಗಿದ್ದು ಸಮುದಾಯ ಸೇವೆಯಲ್ಲಿ ಎಲ್ಲ ಸದಸ್ಯರು ಪಾಲ್ಗೋಳ್ಳುತ್ತಿದ್ದಾರೆ ಎಂದರು. ಕಾರವಾರ ರೋಟರಿ ಕ್ಲಬ್ ಸದಸ್ಯರೂ ಕೂಡಾ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಪ್ರಾಂತ ಕಾರ್ಯದರ್ಶಿ ಅಜಯ್ ಮೆನನ್ ಹಾಗೂ ಸಹಾಯಕ ಪ್ರಾಂತಪಾಲ ಸ್ಟಿಫನ್ ರೊಡ್ರಗೀಸ್ ಸಭೆಯನ್ನು ಉದ್ದೆಶಿಸಿ ಮಾತನಾಡಿದರು.ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಮಾರುತಿ ಕಾಮತ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ನಾಯ್ಕ ವಂದಿಸಿದರು. ಶೈಲೇಶ ಹಳ್ದಿಪೂರ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ರೋಟೇರಿನ್ ರಾಘವೇಂದ್ರ ಪ್ರಭು,  ಕೆ. ಡಿ. ಪೆಡ್ನೇಕರ, ಪ್ರಸನ್ನಾ ತೆಂಡೂಲಕರ,  ಎಂ. ಎ. ಕಿತ್ತೂರ, ಸೂರಜ ಗಾಂವಕರ, ಡಾ. ಸಮೀರಕುಮಾರ ನಾಯಕ, ಡಾ. ಅರ್ಜುನ ಉಪಾಧ್ಯಾಯ, ಅನಮೋಲ ರೇವಣಕರ,   ಪಿ. ಎಸ್‌. ನಾಯ್ಕ, ಕೃಷ್ಣಾ ಕೇಳಸ್ಕರ್, ಗುರುದತ್ತಾ ಬಂಟ್, ಸುರೇಶ ನಾಯ್ಕ, ಸಾತಪ್ಪಾ ತಾಂಡೇಲ, ಮುರಲಿ ಗೋವೆಕರ, ಪ್ರದೀಪ ನಾಯ್ಕ, ಇನ್ನರ್ ವ್ಹೀಲ್ ಅಧ್ಯಕ್ಷೆ ಸೀಮಾ ಗೋವೆಕರ, ಸೋನಾ ಫರ್ನಾಂಡಿಸ್, ಹೊಲಿಗೆ ತರಬೇತಿ ಶಿಕ್ಷಕಿ ಶುಭಾಂಗಿ ಶಿರೋಡಕರ್ ಹಾಗೂ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.