ಮಹಿಳೆಯರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ್‌ ಪ್ರಭಾಕರ ಭಟ್ ಗಡಿಪಾರಗೆ ಆಗ್ರಹಿಸಿ ಮಹಿಳಾ ಸಮಿತಿಯಿಂದ ಪ್ರತಿಭಟನೆ

ಮಹಿಳೆಯರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ್‌ ಪ್ರಭಾಕರ ಭಟ್ ಗಡಿಪಾರಗೆ ಆಗ್ರಹಿಸಿ ಮಹಿಳಾ ಸಮಿತಿಯಿಂದ ಪ್ರತಿಭಟನೆ Women's committee protests, demands deportation of Kalladak Prabhakar Bhat for making provocative s

ಮಹಿಳೆಯರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ್‌ ಪ್ರಭಾಕರ ಭಟ್ ಗಡಿಪಾರಗೆ ಆಗ್ರಹಿಸಿ ಮಹಿಳಾ ಸಮಿತಿಯಿಂದ ಪ್ರತಿಭಟನೆ 

        ಗದಗ 29:   ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ,ಧರ್ಮದ ಸಮುದಾಯಗಳು ತಮ್ಮ-ತಮ್ಮ ಹಬ್ಬಗಳು-ಆಚರಣೆಗಳನ್ನು ಶಾಂತಿಯಿಂದ ಆಚರಿಸುತ್ತ ನೆಮ್ಮದಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಎಲ್ಲಾ ಸಮುದಾಯಗಳು ತಮ್ಮ ಜಾತಿ ಧರ್ಮವನ್ನು ಮೀರಿ ಎಲ್ಲರೂ ನಮ್ಮ ದೇಶದ ಐಕತೆಯ ಸಂಸ್ಕ್ರಿತಿಯನ್ನು ಆಚರಿಸುತ್ತ ದೇಶದ ಎಲ್ಲಾ ಜಾತಿ ಸಮುದಾಯಗಳು ಒಂದೇ ಎಂದು ಭಾವಿಸುತ್ತ ಎಲ್ಲರೂ ಒಂದಾಗಿ ಒಗ್ಗೂಡಿ ಬದುಕು ನಡೆಸುತ್ತಿದ್ದಾರೆ. ಇಂತಹ ಸೌಹಾರ್ದತೆಯ ವಾತಾವರಣ ಹಾಳು ಮಾಡುವ ಉದ್ದೇಶದಿಂದ ಕೋಮುವಾದಿ ಕಲ್ಲಡ್ಕ್‌ ಪ್ರಭಾಕರ ಭಟ್ ಒಂದು ಸಮುದಾಯದ ಮಹಿಳೆಯರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯವಾಗಿ. ಕೊಡಲೇ ಇಂತಹ ಕೋಮುವಾದಿ ಮಹಿಳಾ ವಿರೋಧಿಯನ್ನು ರಾಜ್ಯದಿಂದ ಗಡಿಪಾರ ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಸಮಿತಿ ಸಹಕಾರದಲ್ಲಿ ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ ಕಲ್ಲಡ್ಕ್‌ ಪ್ರಭಾಕರ ಭಟ್ ಎಂಬ ಕೋಮುವಾದಿ ಇದೇ ತಿಂಗಳ 20 ರಂದು ಪುತ್ತೋರಿನ, ಉಪ್ಪಳಿಗೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಅಪಮಾನಿಸಿ ಗರ್ಭಿಣಿಯರನ್ನು ನಿಂದಿಸಿದ್ದಾರೆ.

         ಒಂದು ಸಮುದಾಯದ ಮಹಿಳೆಯರ ಹೆರಿಗೆ ಕುರಿತು ಮತ್ತು ಆ ಸಮುದಾಯದಲ್ಲಿ ಹುಟ್ಟುವ ಮಕ್ಕಳ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದಾನೆ. ಒಂದು ಸಮುದಾಯದವರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ ನೀವು ಅದೇ ರೀತಿಯಾಗಿ ಮಕ್ಕಳನ್ನು ಹುಟ್ಟಿಸಬೇಕು, ಮಹಿಳೆಯರ ಬಗ್ಗೆ ಭಹಿರಂವಾಗಿ ಅವಹೇಳನಕಾರಿ ಮಾತನಾಡಿ ರಾಜ್ಯದಲ್ಲಿ ಜಾತಿ ಮತ್ತು ಸಮುದಾಯದ ನಡುವೆ ಕೋಮು ಸಂಘರ್ಸ ನಡೆಸಲು ಪ್ರಚೋದನೆ ನೀಡುತ್ತಿದ್ದಾನೆ, ಇದಕ್ಕೆ ರಾಜ್ಯ ಸರ್ಕಾರ ಯಾಕೆ ಕಡಿವಾಣ ಹಾಕುತ್ತಿಲ್ಲ ಎಂದು ರಾಜ್ಯದ ಜನತೆಯ ಪ್ರಶ್ನೆಯಾಗಿದೆ, ಈ ಹಿಂದೆ ಕೂಡಾ ಇದೇ ಕೋಮುವಾದಿ ಕಲ್ಲಡ್ಕ್‌ ಪ್ರಬಾಕರ ಭಟ್ 24 ಡಿಸಂಬರ 2023 ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾನೆ. ಇವನಿಗೆ ನಮ್ಮ ದೇಶದ ಸಂವಿಧಾನ ಮತ್ತು ಕಾನೂನಿನ ಯಾವುದೇ ಭಯ ಇಲ್ಲದಂತಾಗಿದೆ, ಪದೇ-ಪದೇ ಒಂದು ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಮಾತನಾಡಿ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿರುವುದು ನಾವು ಖಂಡಿಸುತ್ತೇವೆ ಎಂದರು. ಮಹಿಳಾ ಸಮಿತಿ ಮುಖಂಡರಾದ ನೀಲಮ್ಮ ಹಡಪದ ಮಾತನಾಡಿ ಪದೇ-ಪದೇ ಮಹಿಳೆಯರ ಬಗ್ಗೆ ಅವಹೇಳಕಾರಿ ಮಾತನಾಡುತ್ತಿರುವ ಮಹಿಳಾ ವಿರೋಧಿ ಕಲ್ಲಡ್ಕ್‌ ಪ್ರಭಾಕರ ವಿರುಧ್ದ ರಾಜ್ಯ ಸರ್ಕಾರ ಏಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ, ನಮ್ಮ ದೇಶದ ಸಂವಿಧಾನ ಮತ್ತು ಕಾನೂನಿನ ಭಯವಿಲ್ಲದೇ ಭಹಿರಂಗವಾಗಿ ಒಂದು ಸಮುದಾಯದ ಮಹಿಳೆಯರ ಬಗ್ಗೆ ಪ್ರಚೋದನಕಾರಿ ಮಾತನಾಡಿದರು ಸಹ ರಾಜ್ಯ ಸರ್ಕಾರ ಕಣ್ಣಿದ್ದರು ಕುರಡರಂತೆ ವರತಿಸುತ್ತಿರುವುದು ಖಂಡನೀಯ.

           ಕೊಡಲೇ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಜಾತಿವಾದಿ, ಕೋಮುವಾದಿ ಮಹಿಳಾ ವಿರೋಧಿ ಕಲ್ಲಡ್ಕ್‌ ಪ್ರಭಾರ ಭಟ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಿಂದ ಕಡಿಪಾರು ಮಾಡಬೇಕು. ರಾಜ್ಯದಲ್ಲಿ ಎಲ್ಲಾ ಜಾತಿ ಸಮುದಾಯದ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕು ನಡೆಸುವಂತ ವಾತಾರಣ ನಿರ್ಮಾಣ ಮಾಡಬೇಕು. ರಾಜ್ಯದ ಸಾಮಾನ್ಯ ಜನರ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯ ದೃಷ್ಠಿಯಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇಂತಹ ಕೋಮುವಾದಿಗಳ ಮತ್ತು ಜಾತಿವಾದಿಗಳ ಬಾಯಿಗೆ ಬೀಗ ಹಾಕುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟಿಹಾಕಿ ಕೋಮು ಗಲಭೆಗಳನ್ನು ಸೃಷ್ಠಿಸಲು ಪದೇ-ಪದೇ ಹೇಳಿಕೆಗಳನ್ನು ನೀಡುತ್ತಿರುವ ವಿರುಧ್ದ ನಮ್ಮ ದೇಶದ ಸಂವಿಧಾನದ ಪ್ರಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಮಾನವ ವಿರೋಧಿ, ಸಂವಿಧಾನ ವಿರೋಧಿಗಳಿಗೆ ಭಹಿರಂಗವಾಗಿ ಒಂದು ಕೋಮಿನ ವಿರುಧ್ದವಾಗಿ ಮಾತನಾಡಲು ರಾಜ್ಯ ಸರ್ಕಾರ ಅವಕಾಶ ನೀಡದೇ ನಮ್ಮ ನಾಡಿನಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ನೆಮ್ಮದಿಯಿಂದ ಬದುಕು ನಡೆಸುವ ವಾತಾವರಣ ನಿರ್ಮಾಣ ಮಾಡಬೇಕೆಂದು ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿಯಿಂದ ಒತ್ತಾಯಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಮಹಿಳಾ ಸಮಿತಿ ಮುಖಂಡರಾದ ಮೆಹರುನಿಸಾ ಡಂಬಳ, ಪ್ರಮಾ ಮಣ್ಣವಡ್ಡರ, ಮೈಮುನ ಬೈರಕದಾರ, ಸಾಕ್ರುಬಾಯಿ ಗೋಸಾವಿ, ಆಯೀಸಾ.ಹೆಚ್, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್‌.ಮಾನ್ವಿ, ಮಕ್ತುಮಸಾಬ ಮುಲ್ಲಾನವರ, ದುರ್ಗಪ್ಪ ಮಣ್ಣವಡ್ಡರ, ಮಂಜುಬಾಯಿ ಗೋಸಾವಿ, ಶಮಶಾದಬೇಗಂ ಬೈರಕದಾರ, ಲಕ್ಷ್ಮೀಬಾಯಿ ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಸೋನಾಬಾಯಿ ಗೋಸಾವಿ ಹಾಗೂ ವಿವಿಧ ಸ್ಲಂ ಪ್ರದೇಶದ ನೂರಾರು ಮಹಿಳಾ ಮುಖಂಡರು ಉಪಸ್ಥಿತರಿದ್ದರು.