81 ಗ್ರಾಂ 2 ಬಂಗಾರದ ತಾಳಿ ಸರ ಕದ್ದ ಮಹಿಳೆ ಪೊಲೀಸರ ವಶಕ್ಕೆ
Woman arrested for stealing 81 grams of gold necklace
ರಾಣೇಬೆನ್ನೂರು 22: ಮಹಿಳೆಯೊಬ್ಬಳು ಗಿರವಿ ಇಡುವ ನೆಪದಲ್ಲಿ ಯಾವುದೇ ದಾಖಲಾತಿ ನೀಡದ ಕಾರಣ ಅನುಮಾನಗೊಂಡ ಬಂಗಾರದ ಅಂಗಡಿ ಮಾಲೀಕರು ಕೂಡಲೇ ಕಾರ್ಯ ಪ್ರವರ್ತರಾದ ನಗರ ಠಾಣಾ ಪೊಲೀಸರು, ವಂಚಿತ ಮಹಿಳೆಯಿಂದ ಅಧಿಕ ಮೌಲ್ಯದ ಬಂಗಾರದ ಚೈನ್ ಮತ್ತು ಮಹಿಳೆಯನ್ನು ಬಂಧಿಸಿರುವ ಪ್ರಕರಣ ನಗರದಲ್ಲಿ ದಾಖಲಾಗಿದೆ. ಕಳೆದ ಫೆಬ್ರುವರಿ 18 ರಂದು ಮಧ್ಯಾಹ್ನ ನಗರದಲ್ಲಿ ಈ ಘಟನೆ ನಡೆದಿದ್ದು, ಹಳೆ ಟಿವಿ ರಸ್ತೆ ಬೆನಕ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಬಂದ ಈ ಮಹಿಳೆ, ಬಂಗಾರದ ತಾಳಿ (ತಾಳಿಇಲ್ಲದ) ಚೈನನ್ನು ಅಡಾವೆ ಇಡಲು ಮುಂದಾಗಿದ್ದಾರೆ.
ಅಧಿಕ ಮೌಲ್ಯ ಬೆಲೆ ಬಾಳುವ ಚೈನ್ ಸಂಬಂಧಿಸಿದಂತೆ ದಾಖಲಾತಿ ಮಾಹಿತಿ ನೀಡಲು ಕೇಳಿದಾಗ ಯಾವುದೇ ಸಮರ್ಕ ಉತ್ತರ ನೀಡದ ಕಾರಣ ಜಾಗೃತಗೊಂಡ ಬೆನಕ ಅಂಗಡಿಯವರು, ಸ್ಟೇಷನ್ನಿ ದೂರ ಸಲ್ಲಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಿಳಾ ಪೊಲೀಸರು, ಇವರ ಮಾಹಿತಿ ಪಡೆದು ಅವಳಲ್ಲಿದ್ದ ಬಂಗಾರದ ಚೈನ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಕಳ್ಳತನವೇ ಮೈಗೂಡಿಸಿಕೊಂಡಿರುವ ಧಾರವಾಡ - ಹುಬ್ಬಳ್ಳಿ ಮೂಲದವಳೆಂದು ಹೇಳಲಾಗುವ ಶ್ರೀದೇವಿ ಸಂಜೀವ್ ಕಟ್ಟೆಕಾರ(31) ಇವಳನ್ನು ವಶಕ್ಕೆ ಪಡೆದಿದ್ದಾರೆ.
ಜೈನಿಗೆ ಸಂಬಂಧಿಸಿದಂತೆ ಪೊಲೀಸರು ಶ್ರೀದೇವಿಯಿಂದ ಮಾಹಿತಿ ಪಡೆದಿದ್ದು, ಕಳೆದ 18ರಂದು ಶಿವಮೊಗ್ಗದ ಭೀಮಾ ಜ್ಯುವೆಲರ್ಸ್ ಶೋ ರೂಮಿಗೆ ಬಂಗಾರ ಕರಿದಿ ನೆಪದಲ್ಲಿ ಭೇಟಿ ನೀಡಿದ್ದು, ಆಭರಣಗಳನ್ನು ನೋಡುವ ನೆಪದಲ್ಲಿ( 40.600. ಗ್ರಾಂ)ತಾಳಿಸರವನ್ನು ಕದ್ದಿರುವುದಾಗಿ ತನ್ನ ಹೇಳಿಕೆಯಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ಇದಕ್ಕೂ ಮುನ್ನ ಫೆಬ್ರುವರಿ 17ರಂದು ಬೆಳಗಾವಿ ತಿಲಕವಾಡಿ ನಗರದ ಭೀಮಾ ಜೂವೆಲರ್ಸ್ ನಲ್ಲೂ ಸಹ ಇದೇ ರೀತಿ ಒಂದು ತಾಳಿ(41 ಗ್ರಾಂ ) ಸರ ವಂಚಿಸಿ, ಬೆಳಗಾವಿ ಗೋವಾವೇಸ್ ಸರ್ಕಲ್ ಮಣಪುರಂ ಗೋಲ್ಡ್ ಪ್ರೈ ಲಿಮಿಟೆಡ್ ನಲ್ಲಿ ಅಡವು ಇಟ್ಟಿರುವದಾಗಿ ಹೇಳಿದ್ದಾಳೆ.
ವಿವಿಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದಾರೆ. ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ, ಡಿ ವೈ ಎಸ್ ಪಿ ಲೋಕೇಶ್ ಜೆ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯ ಪ್ರವರ್ತರಾಗಿದ್ದರು. ಪೋಲಿಸ್ ಇಲಾಖೆಯ, ಸಿ.ಪಿಐ ವೆಂಕಟೇಶ್ ಎನ್, ಪಿಎಸ್‌ಐ ಗಳಾದ ಪರಮೇಶ್ ಡಿ.ಜಿ, ಎಚ್.ಎನ್. ದೊಡ್ಡಮನಿ, ಬಿ.ಎಸ್. ಮಡ್ಡೇರ, ರಾಘವೇಂದ್ರ ಪಿ.ಬಿ,ಥಾಣಾ ಸಿಬ್ಬಂದಿಗಳಾದ ಪಿ.ಕೆ. ಸನದಿ, ಮಧು ಬುಳ್ಳಾಪುರ,ಪಿ ಕೆ. ಲಮಾಣಿ,
ಮಂಜುನಾಥ ರೊಟ್ಟಿಯವರ, ಎಚ್‌ಎಲ್ ನಡುವಿನಮನಿ, ಹಾಲೇಶ್ ನಾಗವತ್, ಲಿಂಗರಾಜ ಕರಿಗಾರ, ಪಾರ್ವತಿ ಆಡಿನವರ, ಕೆ. ಮೀನಾಕ್ಷಿ. ಇತರರು ಸೇರಿ ಕೇವಲ 24 ತಾಸಿನಲ್ಲಿ ಕ್ರಮ ಕೈಗೊಂಡು ಆರೋಪಿ ಶ್ರೀದೇವಿ ಸಂಜೀವ್ ಕಟ್ಟೆಕಾರ ಅವಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, 13, 50,000/. ಲಕ್ಷ ರೂಗಳ ಅಧಿಕ ಮೌಲ್ಯದ ಒಟ್ಟು 81 ಗ್ರಾಂ, ತೂಕದ 2 ಬಂಗಾರದ ತಾಳಿ ಸರಗಳು, ವಶಪಡಿಸಿಕೊಂಡು ಕಾನೂನು ನಿಯಮಸಾರ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ಭೇದಿಸಿದ ಅಧಿಕಾರಿಗಳು ಮತ್ತು ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 