ಜೈನ ಧರ್ಮದಲ್ಲಿ ಮಹಿಳೆ ಸರ್ವ ಶ್ರೇಷ್ಠಳು: ಜಿನಸೇನ ಮುನಿಶ್ರೀ

Woman Supreme in Jain Darshan: Jinasena Munishree

ಉಳ್ಳಾಗಡ್ಡಿ-ಖಾನಾಪೂರ 05: ಪ್ರಥಮವಾಗಿ ಜೈನ ದರ್ಶನದಲ್ಲಿ ಪ್ರತಿಯೊಂದು ಪ್ರಮುಖ ವಾಸ್ತು, ಧ್ವಜಾರೋಹಣ, ಮಾಂಗಲೀಕ ಕಾರ್ಯಕ್ರಮಗಳಲ್ಲಿ ನಾರಿಮನಿಯರಿಗೆ ಪ್ರಥಮ ಪ್ರಾಶಸ್ತ್ಯ ನೀಡಿದ್ದಾರೆ. ನಾರಿಯಿಂದ ಜೀವನ ನಡೆದಿದೆ. ಜೀವನದಲ್ಲಿ ನಾರಿಯನ್ನು ಹೀನ ಎನ್ನಲಾಗುತ್ತದೆ ಆದರೆ ನಾರಿ ಪ್ರಥಮದಲ್ಲಿದ್ದಾಳೆ ಕಾರಣ ನಾರಿಯಿಂದಲೇ 24 ತೀರ್ಥಕರರು ಜನ್ಮ ತಳೆದಿದ್ದಾರೆ ಎಂದ ಅವರು ಇಂದು 23 ತೀರ್ಥಂಕರರ ಗರ್ಭಕಲ್ಯಾಣ ಕಾರ್ಯಕ್ರಮ ನಡೆದಿದೆ ಎಂದು ಆಚಾರ್ಯ ಜಿನಸೇನ ಮುನಿ ಮಹಾರಾಜರು ಹೇಳಿದರು. 

ಅವರು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ  ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗದ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನ ನೀಡುತ್ತಾ 16 ಸ್ವಪ್ನಗಳಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ ಕನಸ್ಸಿನಲ್ಲಿ ಕಮಲ, ಜೀನದರ್ಶನ ಮಾಡುವಂತಹ ಕನಸ್ಸುಗಳನ್ನು ಕಂಡ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಮಹಾನ್ ಪುರುಷರ ಹೆಸರು ಹೇಳಿ ಗರ್ಭಸಂಸ್ಕಾರದಲ್ಲಿ ಜಿನ ದರ್ಶನ ಮಾಡಬೇಕು, ಇಂದಿನ ಯುಗದಲ್ಲಿನ ಮೋಬೈಲ ಘೀಳಿನಿಂದ ಹೊರ ಬಂದು ಪ್ರಥಮಾನಯೋಗ ಗ್ರಂಥದ ವಾಚನ ಮಾಡಬೇಕು 63 ಪುರುಷರ ಮಾಹಿತಿಯುಳ್ಳ ಆದಿಪುರಾಣ ಮಹಾಪುರಾಣ, ಉತ್ತರಪುರಾಣ, ಪಾರ್ಶ್ವಪುರಾಣ, ಶ್ರೇಣಿಕ ಪುರಾಣ ಸೇರಿದಂತೆ ಹಲವಾರು ಪುರಾಣಗಳನ್ನು ಗರ್ಭಿಣಿ ಸ್ತ್ರೀಯರು ಉತ್ತಮ ಸಂಸ್ಕಾರಗಳನ್ನು ನೀಡಬೇಕೆಂದರು.  

ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡುವ ಪ್ರಥಮ ಗುರುಗಳು ತಂದೆ-ತಾಯಿಗಳು ಆದ ದಿಸೆಯಲ್ಲಿ ಇಮದಿನ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿದಾಗ ಮಾತ್ರ ಮಕ್ಕಳು ಭವ್ಯ ಭವಿಷ್ಯತ್ತಿನಲ್ಲಿ ಉತ್ತಮ ಶ್ರಾವಕ-ಶ್ರಾವಕಿಯರಾಗಲು ಸಾಧ್ಯ ಇಲ್ಲವಾದರೆ ನಾಳಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಗಳನ್ನು ವೃದ್ಧಾಶ್ರಮಗಳತ್ತ ಇಡುವ ಸಾಧ್ಯತೆಗಳಿವೆ. 

ನದಿ ದಡದಲ್ಲಿರುವ ಸಣ್ಣ ಹುಲ್ಲು ಕೂಡ ಮಹಾಪೂರ ಬಂದಾಗ ಬಾಗಿ ಮತ್ತೆ ಎದ್ದು ನಿಲ್ಲುವ ಸಂಸ್ಕೃತಿಯನ್ನು ಅನುಸರಿಸುತ್ತದೆ ಆದರೆ ಅದೇ ಸ್ಥಳದಲ್ಲಿರುವ ದೋಡ್ಡ ಮರ ಬಾಗುವ ಸಂಸ್ಕೃತಿಯನ್ನು ಅನುಸರಿಸದೇ ಮಹಾಪೂರ ಬಂದಾಗ ಕೋಚ್ಚಿ ಹೂಗುತ್ತದೆ ಆದ್ದರಿಂದ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಉತ್ತಮ ಸಂಸ್ಕಾರಗಳನ್ನು ಕಲಿಸುವಂತೆ ಕರೆಯಿತ್ತರು.  

  ವ್ಯಸನಾಧಿನ ಮನೆಯಿಂದ ವ್ಯಸನಾಧೀನ ಮಕ್ಕಳು ಸಮಾಜಕ್ಕೆ ಬರುತ್ತಿದ್ದು ಸಮಾಜದಲ್ಲಿ ಉತ್ತಮ ಆತ್ಮ, ಜೀವಗಳ ಕಲ್ಯಾಣವಾಗಲೆಂದು ಹೇಳಿದರು. ಸಮಸ್ತ ಶ್ರಾವಕ ಶ್ರಾವಕಿಯರು ಹಾಗೂ ಜೈನ ಮುನಿಗಳು ಮಹಾರಾಜರು, ಪವನ ಚಂದ್ರನಾಥ ಉಪಾಧ್ಯೆ, ಮತ್ತಿತರರು ಉಪಸ್ಥಿತರಿದ್ದರು.