ಆತ್ಮವಿಶ್ವಾಸದಿಂದ ಏನು ಬೇಕಾದರೂ ಸಾಧಿಸಬಹುದು: ನಾರನಗೌಡ ಉತ್ತಂಗಿ
With confidence, you can achieve anything: Naranagowda Utthangi
ಲೋಕದರ್ಶನ ವರದಿ
ಮಹಾಲಿಂಗಪುರ 07: ಜಗತ್ತಿನಲ್ಲಿ ಹುಟ್ಟುವ ಪ್ರತಿ ಮಗುವಿನಲ್ಲಿ ಆತ್ಮವಿದೆ, ಆತ್ಮದಲ್ಲಿ ಪರಮಾತ್ಮನಿದ್ದಾನೆ ಆತ ಸರ್ವ ಶಕ್ತ ಹಾಗಾಗಿ ಅಸಾಧ್ಯವಾದುದು ಯಾವುದೂ ಇರುವುದಿಲ್ಲ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಪ್ರತಿ ಮಗುವು ಆತ್ಮವಿಶ್ವಾಸದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು ಸಮೀಪದ ಅಕ್ಕಿಮರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ತಾಯಂದಿರ ಪಾದಪೂಜೆ, ದೀಪದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹುಟ್ಟುವಾಗ ಪ್ರತಿ ಮಗುವೂ ವಿಶ್ವಮಾನವನಾಗಿಯೇ ಹುಟ್ಟುತ್ತದೆ, ಕಾಲಕ್ರಮೇಣ ದುರ್ಬಲವಾಗುತ್ತದೆ ಶಿಕ್ಷಣ ಇದಕ್ಕೆ ಪರಿಹಾರವಾಗಬೇಕು. ಶಿಕ್ಷಣ ಹುಲಿಯ ಹಾಲಿದ್ದಂತೆ ಕುಡಿದವನು ಘರ್ಜಿಸಲೇಬೇಕು ಎಂಬ ಮಾತಿನಂತೆ ಪ್ರತಿ ಮಗುವಿನಲ್ಲಿಯೂ ಅದಮ್ಯ ಪೌರುಷ ತುಂಬಿ ದೇಶಕ್ಕಾಗಿ ತುಡಿಯುವ ಮಿಡಿಯುವ ಶಕ್ತಿಯಾಗಬೇಕು, ಪರೀಕ್ಷೆ ಒಂದು ಹಬ್ಬ, ಆನಂದವಾಗಿ ಆಚರಿಸಿ ಎಂದರು.
ಮುಖ್ಯೋಪಾಧ್ಯಾಯ ಎಸ್.ಎಂ.ಸುತಾರ, ಉತ್ತಮ ಫಲಿತಾಂಶದೊಂದಿಗೆ ಗುರುಗಳು, ಹೆತ್ತವರು, ಸಮಾಜದ ಋಣ ತೀರಿಸಿ ಎಂದರು. ಶಿಕ್ಷಕ ಆರ್.ಬಿ.ವಾಸನದ ಮಾತನಾಡಿದರು. 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದು ಗಮನ ಸೆಳೆದರು. ದೀಪದ ಹಣ ಸಮಾರಂಭವು ಜರುಗಿತು. ವಿಜಯ ಕರೆನ್ನವರ ಮತ್ತು ಸಂಜನಾ ಲೋಗಾಂವಿ ಇವರಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು, ವಿದ್ಯೆ ಕಲಿಸಿದ ಗುರುಗಳಿಗೆ ಕಾಣಿಕೆ ನೀಡಿ ಸನ್ಮಾನಿಸಿ ವಿದ್ಯಾರ್ಥಿಗಳು ಕೃತರ್ಥರಾದರು. ಗೀತಾ ಮಠದ ಮತ್ತು ಸಂಗಡಿಗರು ಪ್ರಾರ್ಥಿಸಿ ಶಿಕ್ಷಕ ಎ.ಎಂ.ರಾಠೋಡ ಸ್ವಾಗತಿಸಿ, ಶಿಕ್ಷಕ ಡಾ ವಿಕ್ರಂ ಬಸನಗೌಡರ ನಿರೂಪಿಸಿದರು, ಎಸ್ ಡಿಎಂಸಿ ಉಪಾಧ್ಯಕ್ಷ ಕಾಡಪ್ಪ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಲ್ಎನ್ ಚನ್ನಾಪುರ,ಎಸ್.ಹೆಚ್.ಪುರಾಣಿಕ, ಪಿ.ಸಿ.ಪಕೀರಣ್ಣವರ, ಐ.ಎಸ್.ಬಡಿಗೇರ ಇತರರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 