ಕಾನೂನು ರಕ್ಷಣೆಗಾಗಿ ಶ್ರಮಿಸುವೆ,ಬಳ್ಳಾರಿ ಗ್ರಾಮೀಣ ಸಿಪಿಐ ಸ್ಪಷ್ಟನೆ
Will work for legal protection, explains Bellary Rural CPI
ಬಳ್ಳಾರಿ 07: ರಂದು ಮೇಲಾಧಿಕಾರಿಗಳ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾ, ನಮ್ಮ ಸಿಬ್ಬಂದಿ ಸಹಾಯ ಸಹಕಾರಗಳಿಂದ ಮುಂದಿನ ದಿನಗಳಲ್ಲಿ ಕಾನೂನು ರಕ್ಷಣೆಗಾಗಿ ಶ್ರಮಿಸುತ್ತೇನೆ ಎಂದು, ಬಳ್ಳಾರಿ ಗ್ರಾಮೀಣ ಪೊಲೀಸ್ ಸ್ಟೇಷನ್ ಸರ್ಕಲ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಆಗಿಬಂದ ಉದಯ ರವಿ ಅವರು ಹೇಳಿದರು. ಶುಕ್ರವಾರ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಷ್ಟರವರೆಗೂ ಕೆಲಸ ಮಾಡಿರುವ ಹಲವಾರು ಸ್ಟೇಷನ್ಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕಾರ್ಯನಿರ್ವಹಿಸಿದ್ದೇನೆ, ಅದೇ ರೀತಿಯಾಗಿ ಇಲ್ಲಿ ಕೂಡ ಮೇಲಾಧಿಕಾರಿಗಳ ಆದೇಶಗಳನ್ನು ಪಾಲಿಸುವುದರ ಜೊತೆಗೆ, ಜನರ ಸಮಸ್ಯೆಗಳ ಪರಿಷ್ಕಾರ ಮತ್ತು ಶಾಂತಿ ಭದ್ರತೆ ಗಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು. ಬಳ್ಳಾರಿ ಗ್ರಾಮೀಣ ಭಾಗ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಜನರು ಯಾವುದೇ ತಮ್ಮ ಸಮಸ್ಯೆ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಸ್ಪಷ್ಟನೆ ನೀಡಿದರು. ಈ ಭಾಗದಲ್ಲಿ ಇರುವ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ಸಮಸ್ಯೆಗಳ ಪರಿಷ್ಕಾರಕ್ಕಾಗಿ ಹೇಗೆ ಸ್ಪಂದಿಸುತ್ತೀರಿ ಎಂದು ಮಾಧ್ಯಮದವರು ಕೇಳಿದಾಗ, ಸಿಪಿಐ ಉದಯ ರವಿಯವರು ಉತ್ತರಿಸುತ್ತ ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ, ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಅವರು ಯಾರೇ ಆಗಲಿ ಕಾನೂನು ಚೌಕೋಟಿನ ನಿಯಮದಡಿಯಲ್ಲಿ ಕ್ರಮ ವಹಿಸಿಕೊಳ್ಳಲಾಗುವುದು. ಹಾಗೂ ಅಮಾಯಕ ಜನರ ಮಾನ ಪ್ರಾಣಗಳಿಗೆ ರಕ್ಷಣೆ ನೀಡುತ್ತೇನೆ ಈ ಠಾಣಾ ವ್ಯಾಪ್ತಿಯ ಜನರು ನಮಗೆ ಸರಿಯಾಗಿ ಸ್ಪಂದಿಸಿ ಮಾಹಿತಿ ನೀಡಿದಲ್ಲಿ ಜಿಲ್ಲೆಯ ಎಸ್ಪಿ ರವರ ಆದೇಶದ ಅನುಗುಣವಾಗಿ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲೋಕದರ್ಶನ ಪತ್ರಿಕೆ ವರದಿಗಾರರ ಜೊತೆಗೆ ಮಾತನಾಡಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 