ಹಿರಾಶುಗರ ಕಾರ್ಖಾನೆಯು ಆರಂಭವಾಗುತ್ತದೆ ಅಥವಾ ಇಲ್ಲವೋ ? ಸಂಕೇಶ್ವರ: ಎಂ.ಬಿ. ಘಸ್ತಿ ವರದಿ
Will the Hira Sugar Factory start or not? Sankeshwar: M.B. Ghasti report
ಹಿರಾಶುಗರ ಕಾರ್ಖಾನೆಯು ಆರಂಭವಾಗುತ್ತದೆ ಅಥವಾ ಇಲ್ಲವೋ ? ಸಂಕೇಶ್ವರ: ಎಂ.ಬಿ. ಘಸ್ತಿ ವರದಿ
ಬೆಳಗಾವಿ, 31 ; ಸೆಪ್ಟೆಂಬರ ತಿಂಗಳ ಅಂತ್ಯದೊಳಗಾಗಿ ದಿ. ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ಛಕ್ತಿ ಸಹಕಾರಿ ಸಂಘಕ್ಕೆ ಚುನಾವಣೆ ಜರಗುವ ಹಿನ್ನಲೆಯಲ್ಲಿ ಹುಕ್ಕೇರಿ ಮತಕ್ಷೇತ್ರದ ಬಿ.ಜೆ.ಪಿ. ಕಾರ್ಯಕರ್ತರ ಸಭೆಯನ್ನು ಶಂಕರಲಿಂಗ ಕಾರ್ಯಾಲಯ ಸಂಕೇಶ್ವರದಲ್ಲಿ ಏರಿ್ಡಸಲಾಗಿತ್ತು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ನಿರ್ದೇಶಕರು ಮತ್ತು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಮಂಡಳಿಯವರು ಹಿಂದಿನ ಆಡಳಿತ ಮಂಡಳಿಯ ದುರಹಂಕಾರ ಆಡಳಿತಕ್ಕೆ ಬೇಸತ್ತು ಎರಡು ಪ್ರತಿಷ್ಠೆಯ ಕಾರ್ಖಾನೆ ಮತ್ತು ಸಹಕಾರಿ ಸಂಘದ ಸಂಚಾಲಕ ಮಂಡಳಿಯವರು ಸಕ್ಕರೆ ಕಾರ್ಖಾನೆಯು ಹಣಕಾಸಿನ ತೀವ್ರ ಸಂಕಷ್ಟದಿಂದ ಹಾನಿಯಾಗಿದ್ದು ಈ ಕಾರ್ಖಾನೆಗೆ ಆರ್ಥಿಕ ನೆರವು ನೀಡಿ ಸಕ್ಕರೆ ಕಾರ್ಖಾನೆಯನ್ನು ಮುನ್ನಡೆಸಿಕೊಳ್ಳಲು ಈ ಎಲ್ಲ ಸಂಚಾಲಕ ಮಂಡಳಿಯವರು ಅರಭಾಂವಿ ಕ್ಷೇತ್ರದ ಜನನಾಯಕ ಭಾಲಚಂದ್ರ ಜಾರಕಿಹೊಳಿ ಮತ್ತು ಸಹಕಾರಿ ಕ್ಷೇತ್ರದ ಧುರೀಣ ಚಿಕ್ಕೋಡಿ ಲೋಕಸಭಾ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ಉಭಯ ನಾಯಕರಿಗೆ ಭೆಟ್ಟಿಯಾಗಿ ಆರ್ಥಿಕ ನೆರವು ನೀಡಬೇಕೆಂದು ವಿನಂತಿಸಿಕೊಂಡಾಗ, ಬೆಳಗಾವಿ ಬಿ.ಡಿ.ಸಿ.ಸಿ. ಬ್ಯಾಂಕಿನ ಸಕ್ಕರೆ ಮೇಲೆ ಭೋಜಾ ದಾಖಲಿಸಿ ಸುಮಾರು 70 ಕೋಟಿ ಸಾಲವನ್ನು ಭಾಲಚಂದ್ರ ಜಾರಕಿಹೊಳಿ ಇವರು ಕಾರ್ಖಾನೆಗೆ ನೀಡಿದರು, ಬಿರೇಶ್ವರ ಕೋ-ಆಪ್ ಮಲ್ಟಿಸ್ಟೇಟ ಸಹಕಾರಿ ಸಂಸ್ಥೆಯಿಂದ ನೂರಾರು ಕೋಟಿ ರೂಪಾಯಿಗಳ ಸಾಲವನ್ನು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಅಣ್ಣಾಸಾಹೇಬ ಜೊಲ್ಲೆಯವರು ನೀಡಿದರು ಅಲ್ಲಿಂದ ಕಾರ್ಖಾನೆಯ ಅಭಿವೃದ್ಧಿ ಕೆಲಸಗಳನ್ನು ಅಣ್ಣಾಸಾಹೇಬ ಜೊಲ್ಲೆಯವರ ಮಾರ್ಗದರ್ಶನದಲ್ಲಿ ಭರದಿಂದ ಸಾಗಿದವು, ಕಳೆದ 3-4 ತಿಂಗಳಲ್ಲಿ ಸಂಚಾಲಕ ಮಂಡಳಿಯವರು ಜೊಲ್ಲೆಯವರ ಮಧ್ಯೆ ಭಿನ್ನ ಮತ ಆರಂಭಗೊಂಡಿತು ನಂತರ 3-4 ಬಾರಿ ಭಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆಯವರು ಸಂಚಾಲಕ ಮಂಡಳಿಯವರಿಗೆ ಇನ್ನೂ 200 ಕೋಟಿ ರೂಪಾಯಿಗಳನ್ನು ನೀಡಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸೋಣ ಎಂದು ಸಕ್ಕರೆ ಕಾರ್ಖಾನೆಯ ಸಂಚಾಲಕ ಮಂಡಳಿಯವರಿಗೆ ಹೇಳಿದ್ದೇವೆ ಎಂದು ಜೊಲ್ಲೆಯವರು ಇಂದು ಶಂಕರಲಿಂಗ ಕಾರ್ಯಾಲಯದಲ್ಲಿ ಬಿ.ಜೆ.ಪಿ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಯಾವ ದುರಹಂಕಾರಿ ಆಡಳಿತದ ಬಗ್ಗೆ ವಿರೋಧ ವ್ಯಕ್ತ ಪಡಿಸುತ್ತಿದ್ದ ಸಂಚಾಲಕ ಮಂಡಳಿಯವರು ಮತ್ತು ಅಲ್ಲಿಯೇ ತೆರಳಿ ಅವರಿಗೆ ಮನವಿ ಮಾಡಿಕೊಂಡಾಗ ಸಕ್ಕರೆ ಕಾರ್ಖಾನೆಯನ್ನು ತಾವೆ ನಡೆಸಿಕೊಂಡು ಹೋಗಬೇಕೆಂದು ಹೇಳಿದರು ಈ ಬೆಳವಣಿಗೆಯು ವಿಪರ್ಯಾಸ ಹಾಗೂ ತುಂಬಾ ದುರದುಷ್ಟಕರ ಬೆಳವಣಿಗೆ ಎಂದು ಜೊಲ್ಲೆಯವರು ತಮ್ಮ ಭಾಷಣದಲ್ಲಿ ನೊಂದ ಮನಸ್ಸಿನಿಂದ ಭಾವುಕರಾಗಿ ಮಾತನಾಡಿದರು.
2015 ರಲ್ಲಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚೇರಮನ ಚುನಾವಣೆಯು ಜರುಗಿತು ಆವಾಗ ದಿವಂಗತ ಸಚಿವ ಉಮೇಶ ವಿಶ್ವನಾಥ ಕತ್ತಿಯವರು ನನ್ನ ಸಹೋದರನಾದ ರಮೇಶ ಕತ್ತಿಯವರನ್ನು ತಾವು ಚೇರಮನ್ನರಾಗಿ ಮಾಡಬೇಕೆಂದು ಭಾಲಚಂದ್ರ ಜಾರಕಿಹೊಳಿವರು ಇವರಿಗೆ ಹೇಳಿದ್ದರು ದಿವಂಗತ ಉಮೇಶ ಕತ್ತಿಯವರ ಮಾತಿಗೆ ತಕ್ಕಂತೆ ನಡೆದು 9 ವರ್ಷಗಳ ಕಾಲ ಚೇರಮನ್ನರಾಗಿ ಆಡಳಿತ ನಡೆಸಿದ್ದನ್ನು ರಮೇಶ ಕತ್ತಿಯವರು ನೆನಪಿಸಿಕೊಳ್ಳಬೇಕು ತಾವು ಇಲ್ಲಿ ವಿದ್ಯುತ ಸಹಕಾರಿ ಸಂಘಕ್ಕೆ ದಿವಂಗತ ಅಪ್ಪಣಗೌಡಾ ಪಾಟೀಲರ ಹೆಸರಿನ ಮೇಲೆ ತಾವು ಪೆನಲ್‌ದ ಉಮೇದವಾರರನ್ನು ನಿಲ್ಲಿಸುತ್ತೇವೆ ತಾವು ಇವರೆಲ್ಲರಿಗೆ ಮತಗಳನ್ನು ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು ಹೇಳಿದಲ್ಲದೇ ಮುಂದುವರೆದು ಮಾತನಾಡುತ್ತಾ ವಿದ್ಯುತ ಸಹಕಾರಿ ಸಂಘದಲ್ಲಿ ಸುಮಾರು 80 ಸಾವಿರ ಮತಗಳು ಚಲಾವಣೆ ನಡೆಯಲಿದ್ದು ಕೆಲವೊಂದು ಹಿಟ್ಲರ ಶಾಹಿ ಆಡಳಿತದಿಂದ ಕೆಲವು ಸದಸ್ಯರಿಗೆ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಈ ಸದಸ್ಯರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇವರಿಗೆ ಮತದಾನ ಹಕ್ಕು ನೀಡುವಲ್ಲಿ ವಿಳಂಬವಾದರೆ ಸರ್ಕಾರಕ್ಕೆ ಈ ಚುನಾವಣೆಯನ್ನು ಮುಂದುಡಬೇಕೆಂದು ಸರ್ಕಾರದಲ್ಲಿ ವಿನಂತಿಸಿಕೊಳ್ಳುತ್ತೇವೆ ಇದಕ್ಕೆ ಸರ್ಕಾರವು ಮನವಿಗೆ ಸ್ಪಂದಿಸದೇ ಇದ್ದಲ್ಲಿ ತಾವು ಉಚ್ಛ ನ್ಯಾಯಾಲಯದಲ್ಲಿ ಮೊರೆ ಹೋಗಿ ಎಲ್ಲ ಸದಸ್ಯರ ಮತದಾನ ಹಕ್ಕನ್ನು ಪಡೆದುಕೊಳ್ಳುವವರೆಗೆ ಈ ಚುನಾವಣೆಯನ್ನು ಮುಂದುಡಲು ಪ್ರಯತ್ನ ಮಾಡುತ್ತೇವೆಂದು ಹೇಳಿದರ ವೇದಿಕೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ, ಭಾಲಚಂದ್ರ ಜಾರಕಿಹೊಳಿ, ರಾಜೇಂದ್ರ ಪಾಟೀಲ, ಅಮರ ನಲವಡೆ, ಬಂದು ಹತನೂರೆ, ಬಸವರಾಜ ಬಾಗಲಕೋಟಿ, ಪವನ ಪಾಟೀಲ, ಶಶಿರಾಜ ಪಾಟೀಲ, ಹುಕ್ಕೇರಿ ತಾಲೂಕ ಗ್ರಾಮೀಣ ವಿದ್ಯುಚ್ಛಕ್ತಿ ಸಂಘದ ಅಧ್ಯಕ್ಷ ಜಯಗೌಡಾ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೆಕರ, ಸಂಜಯ ಶಿರಕೋಳಿ, ಅಭೀಜೀತ ಕುರಣಕರ ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಕೊನೆಗೆ ಜಯಪ್ರಕಾಶ ಸಾವಂತ ಇವರ ಆಭಾರ ಮನ್ನನೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 