ಶಶಿಧರ ಶಿರಸಂಗಿ
ಶಿರಹಟ್ಟಿ 18: ಮಿಸಲು ವಿಧಾನ ಸಭಾ ಕ್ಷೇತ್ರವಾಗಿರುವ ಶಿರಹಟ್ಟಿ ತಾಲೂಕ ಕೇಂದ್ರದಲ್ಲಿ ಸಮಬಾಳು-ಸಮ ಪಾಲು ಎಂಬ ತತ್ವದಡಿ ಸಂವಿದಾನ ರಚಿಸಿಕೊಟ್ಟ ಮಹಾ ಮಾನವತಾವಾದಿ ಡಾ. ಅಂಬೇಡ್ಕರರವರ ಮೂತರ್ಿ ಹಾಗೂ ಹೆಸರಿನಲ್ಲಿ ಭವನ ನಿಮರ್ಾಣ ಮಾಡದಿರುವದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ತಾಲೂಕು ಕೇಂದ್ರ ಸ್ಥಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನ ನಿಮರ್ಿಸದೇ ಇರುವುದರಿಂದ ಎಸ್.ಸಿ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಬಹಳಷ್ಟು ಹಿನ್ನಡೆಯಾಗುತ್ತಿರುವುದು ವಿಪಯರ್ಾಸದ ಸಂಗತಿ. ಈ ಸಮಾಜದವರು ತಾಲೂಕ ಮಟ್ಟದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ನಡೆಸಲು ಸ್ಥಳಾಕವಾಶ ಇಲ್ಲದಂತಾಗಿದೆ. ಅಲ್ಲದೇ ಕಳೆದ ವರ್ಷ ಮಾರ್ಚ ತಿಂಗಳಲ್ಲಿ ಭವನ ನಿಮರ್ಿಸುವಂತೆ ಠರಾವು ಪಾಸ್ ಮಾಡಿದರು ಸಹ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಪರಿಶಿಷ್ಟ ಸಮುದಾಯಕ್ಕೆ ಬಹಳ ಅನ್ಯಾಯವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿವೇಶನದ ಕೊರತೆ: ಹಲವು ವರ್ಷಗಳಿಂದ ಸಮುದಾಯದ ಹಾಗೂ ವಿವಿಧ ಸಂಘ ಸಂಸ್ಥೆಗಳ ನಾಯಕರು ಅಂಬೇಡ್ಕರ್ ಭವನ ನಿಮರ್ಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು ಸಹ ಅಧಿಕಾರಿಗಳು ಮಾತ್ರ ನಿವೇಶನ ಇಲ್ಲ. ನಿವೇಶನ ಕಲ್ಪಿಸಿದರೆ ಶೀಘ್ರದಲ್ಲಿ ಭವನ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಇದರಿಂದ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಹೇಳಿ, ಬಸ್ ಸ್ಟ್ಯಾಂಡ್ ಎದುರು ಇರುವ ನಿವೇಶನವನ್ನು ಖರೀದಿಸಿ ಭವನವನ್ನು ನಿಮರ್ಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಮಾಜದ ಮುಖಂಡರು ಆರೋಪಿಸುತ್ತಿದ್ದಾರೆ.
ಸದುಪಯೋಗವಾಗದ ಅನುದಾನ: ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭವನ ನಿಮರ್ಿಸಲು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ತಮ್ಮ ಅವಧಿಯಲ್ಲಿ 1.50 ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆದರೆ ಕೆಲ ದಿನಗಳಲ್ಲಿ ಅವರ ಅವಧಿ ಮುಕ್ತಾಯವಾದ್ದರಿಂದ ಪಟ್ಟಣದ ಕನಸಿನ ಕೂಸಾದ ಅಂಬೇಡ್ಕರ ಭವನದ ಕನಸು ಕನಸಾಗಿಯೇ ಉಳಿದಿದೆ.
ವರ್ಷಕ್ಕೊಂದು ಮನವಿ, ಅಧಿಕಾರಿಗಳ ನಿರ್ಲಕ್ಷ ನೀತಿಯಿಂದ ಪರಿಹಾರ ಶೂನ್ಯ: ಅಂಬೇಡ್ಕರ್ ಅವರ ಭವನ ನಿಮರ್ಿಸುವಂತೆ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಹಾಗೂ ಪರಿ ನಿರ್ಮಾಣ ದಿನ ಹಾಗೂ ತಾಲೂಕಾ ಮಟ್ಟದ ಎಸ್ಸಿ ಎಸ್ಟಿ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಕೇವಲ ಅಧೀಕೃತ ಅಧಿಕಾರಿಗಳು ಮಾತ್ರ ಭಾಗವಹಿಸಲು ಅವಕಾಶವಿದ್ದು, ಆದರೆ ಅಂದು ಯಾವುದಾದರೂ ನೆಪ ಹೇಳಿ ಅಧೀಕೃತವಾಗಿ ಹಾಜರಿರಬೇಕಿದ್ದ ಅಧಿಕಾರಿಗಳು ಗೈರು ಹಾಜರಾಗಿ ಅವರ ಕೈಲಿ ಕೆಲಸ ಮಾಡುವ ಹಾಗೂ ಏನೂ ಗೊತ್ತಿಲ್ಲ ಪ್ರತಿನಿಧಿಗಳನ್ನು ಹಾಜರುಪಡಿಸಿ ಜಾರಿಕೋಳ್ಳುವುದು ಸಾಮಾನ್ಯವಾಗಿದ್ದು, ಅಂಥವರ ವಿರುದ್ದ ಕ್ರಮ ಜರುಗಿಸಬೇಕೆಂದು ಸಾಕಷ್ಟು ಬಾರಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಠೋರವಾಗಿ ದಲಿತ ಮುಖಂಡರು ಹೇಳಿದಾಗ ಆಗ ಮಾತ್ರ ಇವರಿಬ್ಬ ಅಧಿಕಾರಿಗಳು ಅಂದಿನ ಸಭೆಯನ್ನು ತಣ್ಣಗಾಗಿಸಲು ಸಂಭಂಧಿಸಿದ ಗೈರಾದ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ನೆಪಮಾತ್ರ ತಿಳೀಸಿ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಲು ನೋಟೀಸು ನೀಡುತ್ತೇನೆಂದು ತಿಳೀಸುವುದಲ್ಲದೇ, ಮುಂದಿನ ಸಭೆಯಲ್ಲಿಯೂ ಇದೇ ಕಾರ್ಯ ಮುಂದುವರೆಯುವುದು ನಿವಾರ್ಯವಾಗಿದ್ದು ಇದನ್ನು ಪ್ರಶ್ನಿಸುವುದು ಯಾರನ್ನ ಎಂದು ದಲಿತರ ಅಳಲಾಗಿದೆ. ಇಂಥಹ ಸಭೆಗಳಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಚರ್ಚೆ ನಡೆಸಿ, ಸಭೆಯಲ್ಲಿ ಮಾತನಾಡಿ ಬರುತ್ತಿದೆ. ಆದರೆ ಇಷ್ಟು ವರ್ಷ ಕಳೆದರು ಭವನ ಮಾತ್ರ ನಿರ್ಮಾಣವಾಗಿಲ್ಲ. ಮತ್ತು ಅಧಿಕಾರಿಗಳು ಪೋಳ್ಳು ಭರವಸೆಗಳನ್ನು ನೀಡುವುದು ತಪ್ಪುತ್ತಿಲ್ಲ. ಈ ವಿಳಂಬ ನೀತಿಗೆ ಯಾರು ಕಾರಣ, ಏನು ಕಾರಣ ಎಂದು ಇಲ್ಲಿವರೆಗೂ ತಿಳಿಯುತ್ತಿಲ್ಲ ಎಂದು ಸಮುದಾಯದ ನಾಯಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ಹಲವು ಬಾರಿ ಹೋರಾಟಗಳನ್ನು ಮಾಡಿ ಮನವಿ ಸಲ್ಲಿಸಿದರು ಸಹ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತೆಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿಗೂ ಸಹ ಹಿನ್ನಡೆ ಉಂಟಾಗುತ್ತಿದೆ. ಮತ್ತು ಪಟ್ಟಣದಲ್ಲಿ ಎನಾದರು ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ, ಹೋರಾಟಗಳನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.