ಖ್ಯಾತ ಉದ್ಯಮಿ ಡಾ. ಆನಂದ ಸಂಕೇಶ್ವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಶುಭ ಹಾರೈಕೆ

ಖ್ಯಾತ ಉದ್ಯಮಿ ಡಾ. ಆನಂದ ಸಂಕೇಶ್ವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಶುಭ ಹಾರೈಕೆ Well wishes to renowned businessman Dr. Anand Sankeshwari from the Horakere Mastara Education Found

                    ಹುಬ್ಬಳ್ಳಿ 27: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಜಿ.ಜಿ.ದ್ಯಾವನಗೌಡ್ರ ಅವರ ಕುಟುಂಭದ ಶುಭವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ವ್ಹಿ.ಆರ್‌.ಎಲ್‌. ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕ ಡಾ. ಆನಂದ ಸಂಕೇಶ್ವರ ಅವರನ್ನು ಭೇಟಿಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಗೌರವ ನಮನ, ಪ್ರಣಾಮಗಳನ್ನುಸಲ್ಲಿಸಿದರು. ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ, ಲಕ್ಷಾಂತರ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುತ್ತಿರುವ, ಸಾರಿಗೆ ಕ್ಷೇತ್ರದಲ್ಲಿ ಅಮೋಘ ಸಾಧನೆಮಾಡಿರುವ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಪುತ್ರ, ಉತ್ಸಾಹಿ ಖ್ಯಾತ ಉದ್ಯಮಿ ಡಾ. ಆನಂದ ಸಂಕೇಶ್ವರ ಅವರಿಗೆ ದಯಾ ಘನ ಪರಮಾತ್ಮನು ಉತ್ತಮ ಆರೋಗ್ಯ ಭಾಗ್ಯಕರುಣಿಸಲಿ, ಜನರ ಸೇವೆಮಾಡುವ ಶಕ್ತಿಯನ್ನು ನೀಡಲಿ ಎಂದು ಶುಭಹಾರೈಸಿದರು. 

                 ಸಾರಿಗೆ, ಪತ್ರಿಕೋದ್ಯಮ, ಮುದ್ರಣ, ಸಾಮಾಜಿಕ, ಧಾರ್ಮಿಕ, ಮುಂತಾದಕ್ಷೇತ್ರಗಳಲ್ಲಿ ಅವರ ಜನಕಲ್ಯಾಣ ಸೇವಾಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂದುಶುಭಕೋರಿದರು. ಸೋಹನ್ಸುರೇಶ್ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಗುರುಸಿದ್ದ ಗೌಡಗಿ. ದ್ಯಾವನಗೌಡ್ರ, ಮಾಲತೇಶ ಗುಡೇನಕಟ್ಟಿ, ಸಂಭಾಜಿಕ ಲಾಲ, ರವಿಚಂದ್ರ ಬಾಲೆಹೊಸೂರ, ಪ್ರೊಎನ್‌.ಆರ್‌.ಬಾಳಿಕಾಯಿ, ಗುರುಸಿದ್ದಪ್ಪ ಬಡಿಗೇರ ಸೇರಿದಂತೆ, ಮುಂತಾದವರು ಇದ್ದರು.