ಹಿತೈಸಿಗಳಾದ ಗದಿಗೆಯ್ಯ ವ್ಹಿ. ಹಿರೇಮಠ ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ

ಹಿತೈಸಿಗಳಾದ ಗದಿಗೆಯ್ಯ ವ್ಹಿ. ಹಿರೇಮಠ ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ  Well-wishers Gadigeyya V. Hiremath were felicitated by Basava Environmental Protection Committee

ಹಿತೈಸಿಗಳಾದ ಗದಿಗೆಯ್ಯ ವ್ಹಿ. ಹಿರೇಮಠ ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ  

ಹುಬ್ಬಳ್ಳಿ 25: ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ವ್ಯವಸ್ಥಾಪಕರು,  ಸಾಹಿತಿ, ರಂಗ ಕಲಾವಿಧರು, ಚಲನಚಿತ್ರ ನಟರು, ನಾಟಕ ನಿರ್ಧೇಶಕರು, ಆತ್ಮೀಯರಾದ, ಜೀವಿ ಕಲಾಬಳಗದ ಅಧ್ಯಕ್ಷ  ಗದಿಗೆಯ್ಯ ವ್ಹಿ. ಹಿರೇಮಠ ಅವರು ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ ವತಿಯಿಂದ ನೀಡುವ ಮಾತೋಶ್ರೀ ಅಂದಮ್ಮ ಕೊಂ. ಸಿದ್ಧನಗೌಡ ಜಕ್ಕನಗೌಡ್ರ ಸ್ಮರಣಾರ್ಥ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸಾಹಿತ್ಯ, ಸಾಂಸ್ಕೃತಿಕ, ನಾಟಕ, ಚಲನಚಿತ್ರ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ, ಮಾರ್ಗದರ್ಶಕರು, ಹಿತೈಸಿಗಳಾದ ಗದಿಗೆಯ್ಯ ವ್ಹಿ. ಹಿರೇಮಠ ಅವರಿಗೆ  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗ್ರಂಥ ನೀಡಿ, ಮಾಲಾರೆ​‍್ಣ ಮಾಡಿ ಹೃದಯ ಸ್ಪರ್ಶಿಯಾಗಿ, ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ, ಸಾಹಿತ್ಯ, ರಂಗಭೂಮಿಯಲ್ಲಿ  ಉತ್ತಮ ಸಾಧನೆ ಮುಂದುವರೆಯಲಿ ಎಂದು ಶುಭ ಕೋರಿದರು. ಸರೋಜಾ ಗದಿಗೆಯ್ಯ ಹಿರೇಮಠ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರಾಚಾರ್ಯ ಡಾ. ಮಹೇಶ ಡಿ. ಹೊರಕೇರಿ, ಜಾನಪದ ತಜ್ಞ ಡಾ. ರಾಮು ಮೂಲಗಿ, ಶಿವಸ್ವಾಮಿ ಗದಿಗೆಯ್ಯ ಹಿರೇಮಠ, ಬಸವರಾಜ ಸುಳ್ಳದ, ವಿ.ಜಿ.ಪಾಟೀಲ, ಶರಣಪ್ಪ ಕೊಟಗಿ, ಡಾ. ಲಿಂಗರಾಜ ರಾಮಾಪುರ, ಶಾಂತಣ್ಣ ಕಡಿವಾಲ, ವಿ.ಜಿ.ಪಾಟೀಲ, ಡಿ.ಟಿ.ಪಾಟೀಲ, ಪಲ್ಲವಿ ಬಸವರಾಜ ನೆಲ್ಲೂರ, ಸಂಭಾಜಿ ಕಲಾಲ, ಶಿವಾನಂದ ಬೆಂಗೇರಿ, ವಾಗೀಶ ಭಿಕ್ಷಾವರ್ತಿಮಠ, ಸಾಗರ, ಸುಹಾಸ, ಮಲ್ಲಿಕಾರ್ಜುನ ಕಮ್ಮಾರ, ಮುಂತಾದವರು ಇದ್ದರು.