ಕಲ್ಯಾಣ ಇಲಾಖೆ - ವಾಲ್ಮಿಕಿ ಸಂಘಟನೆಗಳ ವತಿಯಿಂದ ವಾಲ್ಮಿಕಿ ಜನ್ಮದಿನೋತ್ಸವ ಆಚರಣೆ
ಹಳಿಯಾಳ 24: ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಮಹಷರ್ಿ
ವಾಲ್ಮಿಕಿ ಸಂಘಟನೆಗಳ ವತಿಯಿಂದ ಶ್ರೀ ಮಹಷರ್ಿ ವಾಲ್ಮಿಕಿ
ಜನ್ಮದಿನೋತ್ಸವ ಸಮಾರಂಭವು ಬುಧವಾರ ತಾಲೂಕಾ ಕಚೇರಿ ಸಭಾಂಗಣದಲ್ಲಿ ಜರುಗಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ
ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಮಾಯಣದಂತಹ ಮೇರುಕೃತಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ವಾಲ್ಮಿಕಿ ಮಹಷರ್ಿಗಳು ಪ್ರಾತಃಸ್ಮರಣೀಯರಾಗಿದ್ದಾರೆ. ರಾಮಾಯಣದ ಮೂಲಕ ಭಾರತವು ಜಗತ್ತಿನ
ಗೌರವಕ್ಕೆ ಪಾತ್ರವಾಗಿದೆ. ರಾಮರಾಜ್ಯವು ಆದರ್ಶ ಆಡಳಿತದ ಪರಿಕಲ್ಪನೆಯಾಗಿದ್ದು ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ರಾಮಾಯಣದಂತಹ ಮಹಾಕಾವ್ಯ
ರಚಿಸುವ ಮಹಾನತೆ ಹಾಗೂ ಯೋಗ್ಯತೆ ಹೊಂದಬಹುದು
ಎಂಬುದನ್ನು ವಾಲ್ಮಿಕಿಯ ಜೀವನಚರಿತ್ರೆಯಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಸುರೇಶ ಕಡೇಮನಿ ಉಪನ್ಯಾಸ ನೀಡುತ್ತಾ ವಾಲ್ಮಿಕಿ ರಚಿತ ರಾಮಾಯಣವು ಮಾನವೀಯ
ಸಂಬಂಧಗಳ ಸರಳ, ಸುಂದರ ನಿರೂಪಣೆಯಾಗಿದೆ.
ಮನುಷ್ಯ
ತನ್ನ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ವ್ಯಕ್ತಿತ್ವ ಹೊಂದುವದರೊಂದಿಗೆ ವಿಶ್ವಮಾನವರಾಗಬಹುದು. ಈ ಮಹಾಕಾವ್ಯವು ಜೀವನಕ್ಕೆ
ನಿತ್ಯ ಸ್ಪೂತರ್ಿ ನೀಡುತ್ತದೆ. ನಮ್ಮ ದೇಶದ ಸಂಸ್ಕೃತಿ,
ಪರಂಪರೆಯನ್ನು ರಾಮಾಯಣದಲ್ಲಿ ನೋಡಬಹುದಾಗಿದೆ ಎಂದರು ಕಡೇಮನಿ.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮಹೇಶ ಕುರಿಯವರ,
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕಿ ಎಂ.ಬಿ. ಸಣ್ಣೇರ
ಹಾಗೂ ಹಿರಿಯ ಅಧ್ಯಾತ್ಮಿಕ ಚಿಂತಕ ಎಂ.ಎನ್. ತಳವಾರ,
ಅನಿಲ ನಾಯ್ಕರ್, ಜಯಶ್ರೀ ನಾಯ್ಕ ಮೊದಲಾದವರು ವೇದಿಕೆಯಲ್ಲಿದ್ದರು. ಶಿಕ್ಷಕ ಸಿದ್ದಪ್ಪಾ ಬಿರಾದಾರ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ
ದರ್ಶನ ನಾಯ್ಕ ವಂದಿಸಿದರು.
ಸನ್ಮಾನ:- ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ವಾಲ್ಮಿಕಿ ಸಮಾಜದ ಪ್ರತಿಭೆಗಳಾದ ಗಾಯಕಿ ಮೇಘನಾ ನಾಯ್ಕ, ಶಿಕ್ಷಕರಾದ ಸಿದ್ದಪ್ಪಾ ಬಿರಾದಾರ, ನಾರಾಯಣ ನಾಯ್ಕ, ನಿವೃತ್ತ ಉಪನ್ಯಾಸಕ ಸುರೇಶ ಕಡೇಮನಿ ಇವರುಗಳಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 